ಕಟಪಾಡಿ: ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

ಕಟಪಾಡಿ: ವಿಶ್ವಕರ್ಮರ ಕರ್ತವ್ಯ ಶ್ರದ್ಧೆಯ ಶಿಲ್ಪಿಗಳ ಕರ ಚಮತ್ಕಾರದಿಂದ ದೇವರನ್ನು ಮೂರ್ತಿ ಸ್ವರೂಪವಾಗಿ ಆರಾಧಿಸಲು ಸಾಧ್ಯವಾಗಿದೆ. ನೈಜ ವಾಸ್ತುಶಿಲ್ಪಿಗಳಾಗಿರುವ ವಿಶ್ವಕರ್ಮ ಸಮಾಜ ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರಂತಹ ನಾಯಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕ್ಷೇತ್ರದ ಶಾಸಕನ ನೆಲೆಯಲ್ಲಿ ಇಲ್ಲಿನ ದೇಗುಲದ ಜೀರ್ಣೋದ್ಧಾರ ಧಾರ್ಮಿಕ ಕಾರ್ಯಕ್ಕೆ 10 ಲಕ್ಷ ರೂ. ಅನುದಾನ ಮತ್ತು ಸರಕಾರದ ಇತರ ಅನುದಾನವನ್ನು ಒದಗಿಸಲು ಬದ್ಧ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು. ಸೆ. 17ರಂದು ಕಟಪಾಡಿ ವೇಣುಗಿರಿ ಶ್ರೀ […]

ನವರಾತ್ರಿ ಹಬ್ಬದ ಪ್ರಯುಕ್ತ ಬ್ರಹ್ಮಾವರದ ಸತ್ಯನಾಥ ಸ್ಟೋರ್ಸ್ ನಲ್ಲಿ ವಸ್ತ್ರೋತ್ಸವ: ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಬ್ರಹ್ಮಾವರ: ನವರಾತ್ರಿಯ ಸುಸಂದರ್ಭದಲ್ಲಿ ಸತ್ಯನಾಥ ಸ್ಟೋರ್ಸ್ ವತಿಯಿಂದ ವಸ್ತ್ರೋತ್ಸವವನ್ನು ಸೆ.26ರಿಂದ ಅಕ್ಟೋಬರ್ 6 ರವರೆಗೆ ಆಯೋಜಿಸಲಾಗಿದ್ದು, ಕರಾವಳಿ ಕರ್ನಾಟಕದ ಸದಭಿರುಚಿಯ ನಾರಿಯರಿಗಾಗಿ ಮದುವೆ ಸೀರೆ, ಕಾಟನ್ ಸೀರೆ, ರೇಷ್ಮೆ ಸೀರೆ, ಫ್ಯಾನ್ಸಿ ಸೀರೆ, ಲೆಹಂಗಾ, ಚೂಡಿದಾರ್, ಮಕ್ಕಳ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಬಟ್ಟೆಗಳು, ಪುರುಷರ ಬ್ರಾಂಡೆಡ್ ಪ್ಯಾಂಟ್, ಶರ್ಟ್ ಮತ್ತು ಟೀ ಶರ್ಟ್ ಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕಲ್ಕತ್ತಾ ಫ್ಯಾನ್ಸಿ ಸೀರೆಗಳ ಮೇಲೆ ವಿಶೇಷ ರಿಯಾಯತಿ ಲಭ್ಯವಿದೆ. ಸಂಪರ್ಕಿಸಿ: 9742561049

ಕೊಡವೂರು: ಬಸ್ ನಿಲ್ದಾಣಗಳನ್ನು ಸ್ವಚ್ಛ ಮಾಡುವ ಮೂಲಕ ಮೋದಿ ಜನ್ಮ ದಿನಾಚರಣೆ

ಕೊಡವೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ಕೊಡವೂರಿನ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಸೇರಿಕೊಂಡು ಕೊಡವೂರು ವಾರ್ಡಿನಲ್ಲಿರುವ ಎಲ್ಲಾ ಬಸ್ ನಿಲ್ದಾಣಗಳನ್ನು ಸ್ವಚ್ಛ, ಸುಂದರಗೊಳಿಸುವ ಮೂಲಕ ಪ್ರಯಾಣಿಕರಿಗೆ ಒಳ್ಳೆಯ ವಾತಾವರಣ ಕಲ್ಪಿಸಿದ್ದೇವೆ. ನಾವೆಲ್ಲರೂ ಮೋದಿಯವರು ಹಾಕಿಕೊಟ್ಟ ಹೆಜ್ಜೆಗುರುತಿನಲ್ಲಿ ನಡೆಯಬೇಕು. ಬಸ್ ನಿಲ್ದಾಣ ಸ್ವಚ್ಛಗೊಳಿಸುವ ಈ ಕಾರ್ಯದಲ್ಲಿ ಹಲವಾರು ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದು ಕೊಡವೂರು ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದರು. ಪ್ರಧಾನಿ ಮೋದಿ […]

ಭಾರತ್ ಜೋಡೋ ಯಾತ್ರೆ: ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ?

ಬೆಂಗಳೂರು: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 30 ರಂದು ಕರ್ನಾಟಕಕ್ಕೆ ಪ್ರವೇಶಿಸಲಿದ್ದು, ಪಕ್ಷದ ರಾಜ್ಯ ಮುಖ್ಯಸ್ಥ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಭಿನ್ನಾಭಿಪ್ರಾಯವು ರಾಜ್ಯ ಘಟಕದಲ್ಲಿನ ದೋಷಗಳನ್ನು ಮತ್ತೆ ಬಹಿರಂಗಪಡಿಸಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಉದ್ದಗಲಕ್ಕೂ 22 ದಿನಗಳ ಕಾಲ ಸಂಚರಿಸಲಿದೆ. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಬಣಗಳು ಒಂದಾಗಲು ಹೆಣಗಾಡುತ್ತಿರುವಂತೆ ತೋರುತ್ತಿದೆ. ರಾಜ್ಯದಲ್ಲಿ ಯಾತ್ರೆಯನ್ನು […]

ಶ್ರೀಲಂಕಾಕ್ಕೆ ದ್ವಿಪಕ್ಷೀಯ ಸಾಲ ನೀಡುವಿಕೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ಶ್ರೀಲಂಕಾಕ್ಕೆ ಅತಿದೊಡ್ಡ ದ್ವಿಪಕ್ಷೀಯ ಸಾಲ ನೀಡುವ ದೇಶವಾಗಿ ಹೊರಹೊಮ್ಮಿದೆ. 2022 ರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಭಾರತವು ದ್ವೀಪ ರಾಷ್ಟ್ರಕ್ಕೆ ಒಟ್ಟು 968 ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ನೀಡಿದೆ. 2017 ರಿಂದ 2021 ರವರೆಗೆ ಕಳೆದ ಐದು ವರ್ಷಗಳಲ್ಲಿ, ಚೀನಾ ಅತಿದೊಡ್ಡ ದ್ವಿಪಕ್ಷೀಯ ಸಾಲದಾತನಾಗಿತ್ತು. ಭಾರತವು ಶ್ರೀಲಂಕಾಕ್ಕೆ ಸುಮಾರು 4 ಬಿಲಿಯನ್ ಡಾಲರ್ ಆಹಾರ ಮತ್ತು ಆರ್ಥಿಕ ನೆರವು ನೀಡಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ […]