ಮಣಿಪಾಲ: ಆಗಸ್ಟ್ 28 ರಂದು ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟನೆ
ಮಣಿಪಾಲ: ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಣಿಪಾಲ ಶಾಖೆಯ ಹವಾನಿಯಂತ್ರಿತ ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭವು ಆಗಸ್ಟ್ 28 ಆದಿತ್ಯವಾರದಂದು ಬೆಳಿಗ್ಗೆ 10.30 ಗಂಟೆಗೆ ಮಣಿಪಾಲ ಅಲೆವೂರು ರಸ್ತೆಯ ಬಾಳಿಗಾ ಹೋಟೆಲ್ ಬಳಿ ನಡೆಯಲಿದ್ದು, ಶಾಸಕ ಕೆ. ರಘುಪತಿ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪೇಂದ್ರ ನಾಯಕ್ […]
ಮುಂಬೈ-ರಾಯಚೂರು ರೈಲಿನಲ್ಲಿ ಸಹಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ನಿರ್ಮಲಾ ಸೀತಾರಾಮನ್
ದೇಶದ ವಿತ್ತ ಸಚಿವೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಾಮಾನ್ಯರಂತೆಯೆ ರೈಲಿನಲ್ಲಿ ಪ್ರಯಾಣಿಸಿದ್ದು, ಮುಂಬೈನಿಂದ ರಾಯಚೂರಿಗೆ ತನ್ನ ರೈಲು ಪ್ರಯಾಣದ ಸಮಯದಲ್ಲಿ ಹಮ್ಮು-ಬಿಮ್ಮುಗಳಿಲ್ಲದೆ ಸಹ-ಪ್ರಯಾಣಿಕರೊಂದಿಗೆ ಸಂವಹನ ನಡೆಸುತ್ತಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರಗಳನ್ನು ನಿರ್ಮಲಾ ಸೀತಾರಾಮನ್ ಅವರ ಕಚೇರಿಯು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
ಉತ್ತಮ ಮತ್ತು ತ್ವರಿತ ಆರೋಗ್ಯ ಸೇವೆಗಾಗಿ ಜಿಲ್ಲೆಗೆ ಶೀಘ್ರದಲ್ಲೇ ಬರಲಿದೆ 6 ‘ನಮ್ಮ ಕ್ಲಿನಿಕ್’
ನಗರ ಪ್ರದೇಶದ ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿ ನಗರ ಮತ್ತು ಪಟ್ಟಣ ಪ್ರದೇಶದ ವಾರ್ಡ್ ನಲ್ಲಿ ಉತ್ತಮವಾಗಿ ಮತ್ತು ತ್ವರಿತವಾಗಿ ಆರೋಗ್ಯ ಸೇವೆಗಳನ್ನು ದೊರಕಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರಾಜ್ಯಾದ್ಯಂತ ನಮ್ಮ ಕ್ಲಿನಿಕ್ ಗಳನ್ನು ತೆರೆಯಲು ಉದ್ದೇಶಿಸಿದ್ದು ಉಡುಪಿ ಜಿಲ್ಲೆಯಲ್ಲಿ ಒಟ್ಟು 6 ನಮ್ಮ ಕ್ಲಿನಿಕ್ ಗಳ ಆರಂಭಕ್ಕೆ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ನಗರ ಪ್ರದೇಶದ ಸಾರ್ವಜನಿಕರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಸದುದ್ದೇಶ ಹೊಂದಿದ್ದು, ಉತ್ತಮ ಗುಣಮಟ್ಟದ ಆರೋಗ್ಯ ಸೇವೆ […]
ಮಣಿಪಾಲ ಡೆಂಟಲ್ ಕಾಲೇಜಿನಿಂದ ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿ ಸಮ್ಮೇಳನ ಆಯೋಜನೆ
ಮಣಿಪಾಲ: ಶುಕ್ರವಾರ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯಲ್ಲಿ ಮೊದಲ ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿ ಸಮ್ಮೇಳನವನ್ನು ಉದ್ಘಾಟಿಸಲಾಯಿತು. ಮಣಿಪಾಲ ದಂತ ಸಮ್ಮೇಳನವು ಆಗಸ್ಟ್ 25 ರಿಂದ 27 ರವರೆಗೆ ನಡೆಯಲಿದೆ. ಸಾಂಪ್ರದಾಯಿಕ ಕಲಿಕೆಯ ಮಾದರಿಯಲ್ಲಿ ಬದಲಾವಣೆ ತಂದು ಪದವಿಪೂರ್ವ ಹಂತದಲ್ಲಿಯೇ ದಂತ ವೈದ್ಯಕೀಯ ವಿದ್ಯಾರ್ಥಿಗಳನ್ನು ಕ್ಷೇತ್ರದ ಸುಧಾರಿತ ಮಟ್ಟದ ಕಲಿಕೆಗೆ ಒಡ್ಡುವುದು ಈ ಸಮ್ಮೇಳನದ ಉದ್ದೇಶ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಕೈಜೆನ್ ಡೆಂಟಲ್ […]
ಮೈಸೂರು ದಸರಾ ಆಹಾರ ಮೇಳದಲ್ಲಿ ಆಹಾರ ಮಳಿಗೆ ತೆರೆಯಲು ಅಡುಗೆ ತಯಾರಕರಿಗೆ ಆಹ್ವಾನ
ಉಡುಪಿ: ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಸೆಪ್ಟಂಬರ್ 26 ರಿಂದ ಅಕ್ಟೋಬರ್ 5 ರ ವರೆಗೆ ನಡೆಯಲಿದ್ದು, ದಸರಾ ಅಂಗವಾಗಿ ಜನಪ್ರಿಯ ಆಹಾರ ಮೇಳವನ್ನು ಸೆ. 26 ರಿಂದ ಅ.3 ರ ವರೆಗೆ ಮೈಸೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಸಮೀಪದ ಮೂಡಾ ಮೈದಾನದಲ್ಲಿ ಆಯೋಜಿಸಲಾಗಿದ್ದು, ಈ ಆಹಾರ ಮೇಳಗಳಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಶೈಲಿಯ ಉಟೋಪಚಾರ ತಯಾರಿಸುವ ಆಹಾರ ಮಳಿಗೆ ತೆರೆಯಲು ಹೋಟೆಲ್, ಕೇಟರರ್ಸ್, […]