ಮಂಗಳನ ಅಂಗಳದಿಂದ ನಕ್ಷತ್ರದಂತೆ ಹೊಳೆಯುವ ಭೂಮಿಯ ಕಂಡಿರಾ….
ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕ್ಯೂರಿಯಾಸಿಟಿ ನೌಕೆಯು ಮಂಗಳನ ಅಂಗಳದಲ್ಲಿದ್ದು, ಅಲ್ಲಿಂದ ರಾತ್ರಿ ಕಾಲದಲ್ಲಿ ಗಗನದಲ್ಲಿ ಮಿನುಗುವ ನಮ್ಮ ಭೂಮಿಯ ಚಿತ್ರವನ್ನು ಸೆರೆಹಿಡಿದಿದೆ. “ಮನೆಯಿಂದ 225 ಮಿಲಿಯನ್ ಕಿಮೀ ದೂರ, ಮಂಗಳದ ಮೇಲ್ಮೈಯಿಂದ ಭೂಮಿಯನ್ನು ನೋಡಿದಾಗ, ಮಂಗಳದ ರಾತ್ರಿ ಆಕಾಶದಲ್ಲಿ ಯಾವುದೇ ನಕ್ಷತ್ರಕ್ಕಿಂತ ಪ್ರಕಾಶಮಾನವಾಗಿ ಭೂಮಿ ಹೊಳೆಯುತ್ತದೆ” ಎಂದು ಕ್ಯೂರಿಯಾಸಿಟಿಯು ಟ್ವಿಟರ್ ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ.
ಪ.ಜಾತಿ-ಪ.ಪಂಗಡದ ಯುವಕರಿಗೆ ನಾರಾಯಣ ಹೃದಯಾಲಯದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ
ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವ ಜನರಿಗೆ ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದಲ್ಲಿ 6 ತಿಂಗಳ ಅವಧಿಗೆ ಆರೋಗ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, 18 ರಿಂದ 35 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಾರಾಯಣ ಹೃದಯಾಲಯದ ಕೌಸಲ್ಯಾ ದೇವಿ ಮೊ.ನಂ: 8525808078, ವಿಕಾಸ್ ಮೊ.ನಂ:7018879650 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣಿಪಾಲ: ಮಾಹೆ ಆವರಣದಲ್ಲಿ ವಿಶ್ವ ಉದ್ಯಮಿಗಳ ದಿನಾಚರಣೆ
ಮಣಿಪಾಲ: ವಿಶ್ವ ಉದ್ಯಮಿಗಳ ದಿನದ ಅಂಗವಾಗಿ ಆಗಸ್ಟ್ 23 ರಂದು ಮಹಿಳಾ ಉದ್ಯಮಶೀಲತೆ ಎಂಬ ವಿಷಯವನ್ನಾಧರಿಸಿ, ಮಣಿಪಾಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಮತ್ತು ಇನ್ಕ್ಯುಬೇಟರ್ ಗಳು ಜಂಟಿಯಾಗಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಮಹಿಳೆಯರು ಭಾರತದ ಬೆಳವಣಿಗೆಯ ಪಥವನ್ನು ಮರುವ್ಯಾಖ್ಯಾನಿಸುತ್ತಿದ್ದಾರೆ. ಲಿಂಗ ಸಮಾನತೆಯನ್ನು ಸಾಧಿಸುವುದರಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಭಾರತದ ಕನಸನ್ನು ತ್ವರಿತವಾಗಿ ಸಾಕಾರಗೊಳಿಸಬಹುದು ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಕೊಲೊಸ್ಸಾ ವೆಂಚರ್ಸ್ ಸಂಸ್ಥಾಪಕಿ ಮತ್ತು ಸಿಇಒ ಶ್ರೀಮತಿ ಆಶು ಸುಯಶ್ ಅವರು ಹೇಳಿದರು. ಪ್ರತಿವರ್ಷ […]
ರಾಷ್ಟ್ರೀಕೃತ ಬ್ಯಾಂಕ್‌ನ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ.ರಾ.ಮು.ವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್‌ನ ಅಧಿಕಾರಿ ಮತ್ತು ಗುಮಾಸ್ತರ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 29 ರ ಒಳಗೆ 10 ರಿಂದ ಸಂಜೆ 4 ಗಂಟೆಯವರೆಗೆ ಹೆಸರನ್ನು ನೊಂದಾಯಿಸಲು ದೂರವಾಣಿ ಸಂಖ್ಯೆ: 0821-2515944 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಿಟ್ಟೆ: ಎನ್.ಐ.ಆರ್.ಎಫ್ ಪ್ರಾಮುಖ್ಯತೆ ಕುರಿತು ಕಾರ್ಯಾಗಾರ
ನಿಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆ.25 ರಂದು ನಡೆದ ಒಂದು ದಿನದ ಎನ್.ಐ.ಆರ್.ಎಫ್ ಶ್ರೇಯಾಂಕ ಕುರಿತಾದ ಕಾರ್ಯಾಗಾರ ನಡೆಯಿತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಕೆ. ಬಲವೀರ ರೆಡ್ಡಿ, ದೇಶದ ಅಭಿವೃದ್ದಿಯಲ್ಲಿ ಶಿಕ್ಷಣ ಕ್ಷೇತ್ರ ಅತಿ ಪ್ರಾಮುಖ್ಯತೆಯನ್ನು ಪಡೆದಿದೆ. ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೆ ಸಮಾಜದ ಏಳಿಗೆ ಕ್ಷಿಪ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಮೌಲ್ಯಮಾಪನಕ್ಕಾಗಿ ನ್ಯಾಕ್, […]