ಮಂಗಳನ ಅಂಗಳದಿಂದ ನಕ್ಷತ್ರದಂತೆ ಹೊಳೆಯುವ ಭೂಮಿಯ ಕಂಡಿರಾ….

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕ್ಯೂರಿಯಾಸಿಟಿ ನೌಕೆಯು ಮಂಗಳನ ಅಂಗಳದಲ್ಲಿದ್ದು, ಅಲ್ಲಿಂದ ರಾತ್ರಿ ಕಾಲದಲ್ಲಿ ಗಗನದಲ್ಲಿ ಮಿನುಗುವ ನಮ್ಮ ಭೂಮಿಯ ಚಿತ್ರವನ್ನು ಸೆರೆಹಿಡಿದಿದೆ.

“ಮನೆಯಿಂದ 225 ಮಿಲಿಯನ್ ಕಿಮೀ ದೂರ, ಮಂಗಳದ ಮೇಲ್ಮೈಯಿಂದ ಭೂಮಿಯನ್ನು ನೋಡಿದಾಗ, ಮಂಗಳದ ರಾತ್ರಿ ಆಕಾಶದಲ್ಲಿ ಯಾವುದೇ ನಕ್ಷತ್ರಕ್ಕಿಂತ ಪ್ರಕಾಶಮಾನವಾಗಿ ಭೂಮಿ ಹೊಳೆಯುತ್ತದೆ” ಎಂದು ಕ್ಯೂರಿಯಾಸಿಟಿಯು ಟ್ವಿಟರ್ ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ.

ಚಿತ್ರಕೃಪೆ: ಕ್ಯೂರಿಯಾಸಿಟಿ/ಟ್ವಿಟರ್