ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ: 1.85 ಕೋಟಿ ಲಾಭ; ಶೇ. 12 ಡಿವಿಡೆಂಡ್ ಘೋಷಣೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ 21 ನೇ ವಾರ್ಷಿಕ ಮಹಾಸಭೆಯು ಆಗಸ್ಟ್ 21 ರವಿವಾರ, ಶ್ರೀ ನರಸಿಂಹ ಸಭಾಭವನ ನರಸಿಂಗೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. 2021-22 ರ ಸಾಲಿನ ಅಂತ್ಯಕ್ಕೆ ಸಂಸ್ಥೆಯು ಪಾಲು ಬಂಡವಾಳ ರೂ 1.50 ಕೋಟಿ, ನಿಧಿಗಳು ರೂ.8.24 ಕೋಟಿ, ಠೇವಣಿ ರೂ 85.78 ಕೋಟಿ, ಸಾಲಗಳು ರೂ 66.93 ಕೋಟಿ, ಒಟ್ಟು 318 ಕೋಟಿ ವ್ಯವಹಾರ ನಡೆಸಿ, ರೂ.1.85 ಕೋಟಿ […]

ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಕುಂದಾಪುರ: ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯು ಶಿವಮೊಗ್ಗದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಓಪನ್- 3ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ -2022 ರಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅದ್ವಿತ್ ಎ.ಎಲ್., ಕುಮಿಟೆ ವಿಭಾಗದಲ್ಲಿ ಪ್ರತಿನಿಧಿಸಿ ಚಿನ್ನದ ಪದಕವನ್ನು ಹಾಗೂ ಕಟಾದಲ್ಲಿ ಕಂಚಿನ ಪದಕವನ್ನು , ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಜ್ವಲ್ ಪಿ. ರಾವ್ ಕಟಾದಲ್ಲಿ ಚಿನ್ನದ ಪದಕವನ್ನು ಹಾಗೂ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆಯುವುದರ ಮೂಲಕ […]

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಿನಿವೇಬಲ್ ಎನರ್ಜಿ ಕ್ಲಬ್ ಉದ್ಘಾಟನೆ

ನಿಟ್ಟೆ: ‘ಜ್ಞಾನವೆಂಬ ಸಂಪತ್ತನ್ನು ನಾವು ಸಂಪಾದಿಸಿದರೆ, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜ್ಞಾನವೆಂಬ ಸಂಪತ್ತನ್ನು ಕಾಲು ಭಾಗ ಗುರುಗಳಿಂದ, ಕಾಲು ಭಾಗ ತಮ್ಮ ಸ್ವಂತ ಸಾಧನೆಯಿಂದ, ಕಾಲು ಭಾಗವನ್ನು ಸಹಪಾಠಿಗಳ ಸಹಕಾರದಿಂದ ಹಾಗೂ ಇನ್ನುಳಿದ ಕಾಲು ಭಾಗವನ್ನು ಕಾಲಕ್ರಮೇಣವಾಗಿ ಅನುಭವದಿಂದ ಕಲಿಯಬಹುದಾಗಿದೆ’ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ ಅಭಿಪ್ರಾಯಪಟ್ಟರು. ಅವರು ಆ.22 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಆರಂಭಿಸಿರುವ ‘ರಿನಿವೇಬಲ್ ಎನರ್ಜಿ ಕ್ಲಬ್’ ನ್ನು ಉದ್ಘಾಟಿಸಿ, ವಿಭಾಗವು ಹಮ್ಮಿಕೊಂಡಿದ್ದ ‘ನ್ಯೂ […]

ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಬಾಳೆ ಎಲೆ ಊಟ ಸವಿದು ಸರಳತೆ ಮೆರೆದ ಖ್ಯಾತ ನಿರ್ದೇಶಕ ರಾಜಮೌಳಿ

ಚೆನ್ನೈ: ವಿಶ್ವವನ್ನೇ ಬೆರಗಾಗಿಸುವ ಸಿನಿಮಾಗಳನ್ನು ತೆರೆ ಮೇಲೆ ಮೂಡಿಸುವ ಬಹು ಬೇಡಿಕೆ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿಜ ಜೀವನದಲ್ಲಿ ತುಂಬಾ ಸರಳ ವ್ಯಕ್ತಿಯಂತೆ ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಬಾಳೆ ಎಲೆ ಊಟವನ್ನು ಸವಿದಿದ್ದಾರೆ. ಚೆನ್ನೈ ನಲ್ಲಿ ಬ್ರಹ್ಮಾಸ್ತ್ರ ಚಿತ್ರದ ಪ್ರಚಾರ ನಿಮಿತ್ತ ಆಗಮಿಸಿರುವ ನಾಗಾರ್ಜುನ ಅಕ್ಕಿನೇನಿ ಮತ್ತು ಹಿಂದಿ ಚಿತ್ರರಂಗದ ರಣ್ ಬೀರ್ ಕಪೂರ್ ಕೂಡಾ ರಾಜಮೌಳಿಗೆ ಜೊತೆ ನೀಡಿದ್ದಾರೆ. ದಕ್ಷಿಣ ಭಾರತೀಯರಿಗೆ ಬಾಳೆ ಎಲೆ ಊಟ ಅಂದರೆ ಬಹಳ ಅಚ್ಚುಮೆಚ್ಚು. ಸಾಮಾನ್ಯ ದಿನವೆ ಇರಲಿ […]

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಓರಿಯಂಟೇಶನ್ ಡೇ ಕಾರ್ಯಕ್ರಮ

ಮಣಿಪಾಲ: ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಗೀತ ಅಕಾಡೆಮಿಯನ್ನು ಪ್ರಾರಂಭಿಸುವ ಹಂತದಲ್ಲಿದೆ ಎಂದು ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಹೇಳಿದರು. ಅವರು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ತನ್ನ ಹೊಸ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಓರಿಯಂಟೇಶನ್ ಡೇ-2022 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಲಾ ಅಧ್ಯಯನ ವಿಶ್ವವಿದ್ಯಾಲಯದ ಅಂತಸತ್ವವಾಗಿದ್ದು, ಅದಿಲ್ಲದೆ ಶೈಕ್ಷಣಿಕ ಜೀವನವು ತುಂಬಾ ಯಾಂತ್ರಿಕವಾಗುತ್ತದೆ ಎಂದರು. ಮಣಿಪಾಲ ಸಂಸ್ಥೆಗಳ ಪ್ರಾರಂಭದ ಹಂತದಲ್ಲಿ ಅಂತರ ಶಿಕ್ಷಣ ಶಾಖೀಯತೆ ಉದಯವಾಗಿತ್ತು […]