ಆಭಾ ಕಾರ್ಡ್ ಹೊಂದಿರುವವರಿಗೆ ಗ್ರಾಮ ಒನ್ ಕೇಂದ್ರಗಳಲ್ಲಿ ಆರೋಗ್ಯ ಸೇವೆಗಳು ಲಭ್ಯ

ಉಡುಪಿ: ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಯಡಿ ಸಾರ್ವಜನಿಕ ಆರೋಗ್ಯದ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಒಬ್ಬ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ದೊರಕಿಸಿ ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಲು ಎ.ಬಿ.ಹೆಚ್.ಎ (ABHA) ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಕಾರ್ಡ್ ಹೊಂದಿದ ಫಲಾನುಭವಿಗಳು ಸರ್ಕಾರಿ ಹಾಗೂ ಖಾಸಗೀ ಆಸ್ಪತ್ರೆಯಲ್ಲಿ 5 ಲಕ್ಷ ರೂ. ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಹಾಗೂ ಚಿಕಿತ್ಸೆಯ ಮಾಹಿತಿಯೂ ಕೂಡ ದೇಶದ ಯಾವುದೇ ಭಾಗದಲ್ಲಿ ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಕಾರ್ಡಿನ […]

ಸೌತ್ ವುಡ್ ಸಿನಿಮಾಗಳ ಅಬ್ಬರಕ್ಕೆ ಬೆಚ್ಚಿದ ಬಾಲಿವುಡ್! ಬಾಯ್ ಕಾಟ್ ಬಾಲಿವುಡ್ ಟ್ರೆಂಡ್ ಗಳಿಂದ ಘಟಾನುಘಟಿ ನಟರ ಚಿತ್ರ ಮೂಲೆಗುಂಪು; ಕೋಟ್ಯಂತರ ರೂ ನಷ್ಟ!

ಮುಂಬೈ: ಅದೊಂದು ಕಾಲವಿತ್ತು, ಸಿನಿಮಾ ರಂಗ ಎಂದರೆ ಹಿಂದಿ ಭಾಷೆಗಳ ಚಿತ್ರ ನಿರ್ಮಾಣ ಮಾಡುವ ಬಾಲಿವುಡ್ ಮಾತ್ರ ಎನ್ನಲಾಗುತ್ತಿತ್ತು. ಬಾಲಿವುಡ್ ಎಂದರೆ ಬಾಯಿ ಬಾಯಿ ಬಿಡುತ್ತಿದ್ದ ಕಾಲವದು. ಬಾಲಿವುಡ್ಡಿನ ಏಕಚಕ್ರಾಧಿಪತ್ಯದಡಿ ಭಾರತೀಯ ಸಿನಿರಂಗದ ಅದೆಷ್ಟೋ ಭಾಷೆಗಳ ಉತ್ತಮ ಚಿತ್ರಗಳೂ ಮಸುಕಾಗಿರುತ್ತಿದ್ದವು. ಆದರೆ ಈಗ ಎಲ್ಲವೂ ತಲೆಕೆಳಗು. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಒಟ್ಟಾರೆಯಾಗಿ ಹೇಳುವುದಾದರೆ ಅಖಂಡ ದಕ್ಷಿಣ ಭಾರತದ ‘ಸೌತ್ ವುಡ್’ ಸಿನಿಮಾಗಳ ಅಬ್ಬರಕ್ಕೆ ಭಾರತೀಯ ಸಿನಿಮಾರಂಗದ ‘ಬಾದಶಹಾ’ ಎಂದು ಮೆರೆಯುತ್ತಿದ್ದ ಬಾಲಿವುಡ್ ಬೆಚ್ಚಿಬಿದ್ದಿದೆ. ಒಂದೆಡೆ ಪ್ರಖರ […]

ಬೈಂದೂರು: ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

ಬೈಂದೂರು:  ಖಿನ್ನತೆಯಿಂದ ಬಳಲುತ್ತಿದ್ದ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸಲಗೇರಿ ನಿವಾಸಿ ನಾಗರಾಜ್ (37) ಎಂಬ ವ್ಯಕ್ತಿಯು ಆಗಸ್ಟ್ 10 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 7 ಇಂಚು ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ಮರಾಠಿ ಹಾಗೂ ಮಲೆಯಾಳಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ:9480805460, ಬೈಂದೂರು […]

ತೆಂಕನಿಡಿಯೂರು: ಸಹಾಯ ಸೌಹಾರ್ದ ಸಹಕಾರಿ ನಿಯಮಿತ ಇದರ ನೂತನ ಶಾಖೆ ಉದ್ಘಾಟನೆ

ಉಡುಪಿ: ಮಲ್ಪೆ ತೆಂಕನಿಡಿಯೂರಿನ ಬೃಂದಾವನ ಆರ್ಕೇಡ್ ನಲ್ಲಿ ಸಹಾಯ ಸೌಹಾರ್ದ ಸಹಕಾರಿ ನಿಯಮಿತ ಇದರ 3 ನೇ ಶಾಖೆಯ ಉದ್ಘಾಟನಾ ಸಮಾರಂಭವು ಶುಕ್ರವಾರದಂದು ನಡೆಯಿತು. ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಇದ್ದಲ್ಲಿ ಮಾತ್ರ ಸಹಕಾರಿ ಕ್ಷೇತ್ರ ಬೆಳೆಯಲು ಸಾಧ್ಯ. ರಾಜ್ಯದಲ್ಲಿರುವ ಸಹಕಾರಿ ಸಂಸ್ಥೆಗಳು ಒಗ್ಗಟ್ಟಾಗಿ ಬಲಿಷ್ಠವಾಗಿ ಬೆಳೆಯುತ್ತಿದ್ದು ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದರು. ತೊಟ್ಟಂ ಸೈಂಟ್ ಆನ್ಸ್ ಚರ್ಚ್ ನ […]

ಉಡುಪಿ ಜಿಲ್ಲೆಯ ಪ್ರಪಥಮ ಉಸ್ತುವಾರಿ ಸಚಿವನಾದದ್ದು ಹೆಮ್ಮೆಯ ವಿಚಾರ: ಕೆ.ಜಯಪ್ರಕಾಶ್ ಹೆಗ್ಡೆ

ಉಡುಪಿ: 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಟ್ಟ ಉಡುಪಿ ಜಿಲ್ಲೆಯ ಪ್ರಪಥಮ ಉಸ್ತುವಾರಿ ಸಚಿವನಾದದ್ದು ನನಗೆ ಹೆಮ್ಮೆ ನೀಡುವ ವಿಷಯ. ಅಂದಿನಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಪರ ಚಟುವಟಿಕೆಗಳು ನಡೆದಿದ್ದು, ಮುಂದೆಯೂ ಕೂಡ ಅನೇಕ ಅಭಿವೃದ್ಧಿ ಕೆಲಸಗಳು ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಮಂಗಳವಾರ ನಗರದ ಐ.ಎಮ್.ಎ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ […]