ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ವಾರಸುದಾರರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನ
ಉಡುಪಿ: ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರು ಪರಿಹಾರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ಮೇ 15 ಕ್ಕಿಂತ ಮೊದಲು ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣದಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನವಾಗಿದ್ದು, ಮೇ 16 ರ ನಂತರ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು 90 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಪ್ರಯೋಗಾಲಯದಿಂದ ಪಡೆದಿರುವ ಮೃತ ವ್ಯಕ್ತಿಯ ಪಾಸಿಟಿವ್ ರಿಪೋರ್ಟ್, ಸಂಬಂಧಿಸಿದ ಆಸ್ಪತ್ರೆಯ ರಿಪೋರ್ಟ್, ಕೋವಿಡ್ ದೃಢಪಟ್ಟ ರೋಗಿ […]
ಸಿದ್ದು ಹಿಂದೂ ವಿರೋಧಿ ಹೇಳಿಕೆಗಳೇ ಕಾಂಗ್ರೆಸ್ ಅಧ:ಪತನಕ್ಕೆ ನಾಂದಿ ಹಾಡಲಿದೆ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಮೈಯೆಲ್ಲಾ ಹಿಂದೂ ವಿರೋಧಿ ವಿಷ ತುಂಬಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ ಹೇಳಿಕೆಗಳೇ ಕಾಂಗ್ರೆಸ್ ಅಧ:ಪತನಕ್ಕೆ ನಾಂದಿ ಹಾಡಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಅಪ್ಪಟ ದೇಶ ಭಕ್ತ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಹೆಸರೆತ್ತಲೂ ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸಮಾಜ ಒಡೆಯುವ ದುಷ್ಕೃತ್ಯದಲ್ಲಿ ತೊಡಗಿರುವುದು ಜಗಜ್ಜಾಹೀರಾಗಿದೆ. ‘ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಬ್ಯಾನರ್ ಯಾಕೆ ಹಾಕಿದ್ದೀರಿ’ ಎಂದಿರುವ ಸಿದ್ದುಗೆ ಹಿಂದೂ ಏರಿಯಾಕ್ಕೆ […]
ಯೇ ಭಾರತ್ ಕಾ ತಿರಂಗಾ ಹೈ, ಕಭೀ ಜುಕೆಗಾ ನಹೀ: ಅಮೇರಿಕಾದಲ್ಲಿ ಅಲ್ಲು ಅರ್ಜುನ್ ಡೈಲಾಗ್ ಗೆ ಭಾರೀ ಮೆಚ್ಚುಗೆ
ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್‌ನಲ್ಲಿ ನಟ ಅಲ್ಲು ಅರ್ಜುನ್ ಅವರು ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಪುಷ್ಪಾ ಡೈಲಾಗ್ ರೀತಿಯಲ್ಲಿ “ಯೇ ಭಾರತ್ ಕಾ ತಿರಂಗಾ ಹೈ, ಕಭೀ ಜುಕೆಗಾ ನಹೀ” ಎಂದಿದ್ದಾರೆ. ಇದರ ವಿಡೀಯೋ ತುಣುಕೊಂದು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಅಲ್ಲು ಅರ್ಜುನ್ ಡೈಲಾಗ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪುಷ್ಪಾ ಖ್ಯಾತಿಯ ತೆಲುಗು ನಟ ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿದ್ದರು. ಅಲ್ಲಿ ಅವರು ಅಮೇರಿಕಾದಲ್ಲಿನ ಭಾರತೀಯರು ಆಯೋಜಿಸಿದ್ದ ಅತ್ಯಂತ ಪ್ರಸಿದ್ಧ ವಾರ್ಷಿಕ […]
ಮಾತೃ ಛಾಯಾ ಶಿಶು ಮಂದಿರದ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ
ಪಿತ್ರೋಡಿ: ಉದ್ಯಾವರದ ಮಾತೃ ಮಂಡಲಿಯ ಅಂಗಸಂಸ್ಥೆ ಮಾತೃ ಛಾಯಾ ಶಿಶು ಮಂದಿರ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತೃ ಮಂಡಲಿ ಟ್ರಸ್ಟಿಗಳಾದ ನಯನಾ ಗಣೇಶ್, ಸುಮತಿ ಯು ಮೈಂದನ್ , ಬೇಬಿ ಟಿ.ಬಂಗೇರ,ಮಾತೃ ಛಾಯಾ ಶಿಶು ಮಂದಿರದ ಅಧ್ಯಕ್ಷೆ ಗುಲಾಬಿ ಡಿ.ಸನಿಲ್, ಪ್ರೇಮ ಶಿವದಾಸ್, ಚಂದ್ರಾವತಿ ಭಾಸ್ಕರ್, ಸಬಿತ ಮೈಂದನ್,ಕುಸುಮ ವಿಶ್ವನಾಥ್,ಮಮತಾ, ವಿನುತಾ ಹಾಗೂ ಮಾತಾಜಿ ಯಮುನಾ ಉಪಸ್ಥಿತರಿದ್ದರು.
ಭಾರತ ಸರ್ಕಾರದ ಪ್ರತಿನಿಧಿಯ ಹತ್ಯೆ ಸಂಚು ರೂಪಿಸಿದ್ದ ಐಸಿಸ್ ಆತ್ಮಹತ್ಯಾ ಬಾಂಬರ್ ರಷ್ಯಾದಲ್ಲಿ ಬಂಧನ
ಮಾಸ್ಕೋ: ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಭಾರತ ಸರ್ಕಾರದ ಪ್ರತಿನಿಧಿಯ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಐಸಿಸ್ ಆತ್ಮಹತ್ಯಾ ಬಾಂಬರ್ ಅನ್ನು ಬಂಧಿಸಿದೆ ಎಂದು ರಷ್ಯಾದ ಮಾಧ್ಯಮದಲ್ಲಿ ವರದಿಯಾಗಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ದಾಯೆಶ್ ಭಯೋತ್ಪಾದಕ ಭಾರತದ ಗಣ್ಯ ನಾಯಕರೊಬ್ಬರ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದ ಎನ್ನಲಾಗಿದೆ. ಸದ್ಯ ಹೊರ ಬರುತ್ತಿರುವ ಮಾಹಿತಿಗಳ ಪ್ರಕಾರ ಬಂಧಿತ ಭಯೋತ್ಪಾದಕ ಟರ್ಕಿಯಲ್ಲಿ ಐಸಿಸ್ ಗೆ ದಾಖಲಾಗಿದ್ದ. ರಷ್ಯಾದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಅಂತರಾಷ್ಟ್ರೀಯ […]