ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಗುರುರಾಜ ಪೂಜಾರಿಗೆ ಅದ್ದೂರಿ ಸ್ವಾಗತ: ಜಿಲ್ಲಾಡಳಿತದಿಂದ ಸನ್ಮಾನ ಕಾರ್ಯಕ್ರಮ
ಉಡುಪಿ: ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಜಿಲ್ಲೆಗೆ ಆಗಮಿಸಿದ ಕುಂದಾಪುರದ ಗುರುರಾಜ ಪೂಜಾರಿ ಅವರನ್ನು ಇಂದು ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧಿ ಮೈದಾನದ ಬಳಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಿಲಾಧಿಕಾರಿ ಕೂರ್ಮಾರಾವ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಪೌರಾಯುಕ್ತ ಡಾ.ಉದಯ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ […]
ವಿಶ್ವ ಕೊಂಕಣಿ ಕೇಂದ್ರ: ಸಿಎ ಇಂಟರ್ ಮೀಡಿಯೆಟ್ ಸೂಪರ್ 25 ಉಚಿತ ಕ್ರ್ಯಾಶ್ ಕೋರ್ಸ್ ಉದ್ಘಾಟನಾ ಸಮಾರಂಭ
ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಸಿಎ ಆಕಾಂಕ್ಷಿಗಳನ್ನು ಆಧರಿಸುವ ನಿಟ್ಟಿನಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಂಗಳೂರಿನಲ್ಲಿ ಸಿಎ ಇಂಟರ್ ರಿಪೀಟರ್ಸ್ ಗಾಗಿ ‘ಸೂಪರ್ 25’ ಎಂಬ ಉಚಿತ ಕ್ರ್ಯಾಶ್ ಕೋರ್ಸನ್ನು ಉದ್ಘಾಟಿಸಲಾಯಿತು. ಈ 9 ದಿನಗಳ ಸೂಪರ್ 25 ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ರಾಜ್ಯದ ಬೇರೆ ಬೇರೆ ಭಾಗಗಳಿಂದ 24 ಸಿಎ ಆಕಾಂಕ್ಷಿಗಳು ಭಾಗವಹಿಸಿದ್ದು ನುರಿತ ಅಧ್ಯಾಪಕರಿಂದ ಅಧ್ಯಾಪನ, ಅಧ್ಯಯನ ಸಾಮಾಗ್ರಿಗಳ ಪೂರೈಕೆ ಜೊತೆಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನೂ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. […]
ಬಾಹ್ಯಾಕಾಶದಲ್ಲಿಯೂ ಹಾರುತ್ತಿದೆ ತ್ರಿವರ್ಣ ಧ್ವಜ: ಇಸ್ರೋದಿಂದ ಎಸ್.ಎಸ್.ಎಲ್.ವಿ ಯಶಸ್ವಿ ಉಡಾವಣೆ
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭೂಮಿಯ ವೀಕ್ಷಣಾ ಉಪಗ್ರಹವನ್ನು ಹೊತ್ತೊಯ್ಯುವ ತನ್ನ ಚಿಕ್ಕ ವಾಣಿಜ್ಯ ರಾಕೆಟ್ ಮತ್ತು 750 ಶಾಲಾ ಬಾಲಕಿಯರು ನಿರ್ಮಿಸಿದ ‘ಆಜಾದಿ ಸ್ಯಾಟ್’ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದೆ. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಬಾಹ್ಯಾಕಾಶ ಸಂಸ್ಥೆಯ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್.ಎಸ್.ಎಲ್.ವಿ) – ಎಸ್.ಎಸ್.ಎಲ್.ವಿ-ಡಿ1/ಇಒಎಸ್ 02 ಬಗ್ಗೆ ಮಾಹಿತಿ ನೀಡಿದರು. CONGRATULATIONS !!SSLV-D1/EOS-02 Mission : #ISRO launches the smallest commercial rocket to unfurl […]
ಒಂದು ತಿಂಗಳಲ್ಲಿ 127 ಟನ್ ನಿಷೇಧಿತ ಪ್ಲಾಸ್ಟಿಕ್ ವಶ: 37 ಲಕ್ಷ ರೂಪಾಯಿ ದಂಡ ವಸೂಲಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜುಲೈ ತಿಂಗಳೊಂದರಲ್ಲೇ ರಾಜ್ಯಾದ್ಯಂತ ಹಠಾತ್ ತಪಾಸಣೆ ನಡೆಸಿ 127.052 ಟನ್ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ ಮತ್ತು 37 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ. ಅಂಗಡಿಗಳು, ಉತ್ಪಾದನಾ ಘಟಕಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳ ಮೇಲಿನ ದಾಳಿಯಲ್ಲಿ, ಜುಲೈನಲ್ಲಿ 22,116 ತಪಾಸಣೆಗಳನ್ನು ನಡೆಸಲಾಗಿದ್ದು 15,629 ಉಲ್ಲಂಘನೆಗಳು ಕಂಡುಬಂದಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಹಿರಿಯ ಕೆಎಸ್ಪಿಸಿಬಿ ಅಧಿಕಾರಿಯೊಬ್ಬರು ಡಿಎಚ್ಗೆ ನೀಡಿದ ಸಂದರ್ಶನದಲ್ಲಿ, ಸೂಕ್ತ ಪರ್ಯಾಯದ ಕೊರತೆಯಿಂದಾಗಿ ಏಕ […]
ಆಗಸ್ಟ್ 11ರಂದು ಉದ್ಯೋಗ ವಿನಿಮಯ ಕಛೇರಿಯಲ್ಲಿ ಮಿನಿ ಉದ್ಯೋಗ ಮೇಳ
ಉಡುಪಿ: ಶ್ರೀ ಸಾಯಿ ಎಂಟರ್ ಪ್ರೈಸಸ್ ಪ್ರೈ.ಲಿ., ಭಂಡಾರಿ ಪವರ್ ಲೈನ್ಸ್ ಪ್ರೈ.ಲಿ., ಆಕ್ಸಿಸ್ ಬ್ಯಾಂಕ್, ಬಿ.ಎಸ್.ಎಲ್ ಇಂಡಿಯನ್ ಪ್ರೈ.ಲಿ ಮತ್ತು ರಿಲಯನ್ಸ್ ಜಿಯೋ ಪೈ.ಲಿ ಕಂಪನಿಗಳ ವತಿಯಿಂದ ಆಗಸ್ಟ್ 11ರಂದು ಬೆಳಗ್ಗೆ 10.30 ಕ್ಕೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್ […]