ಬಾಹ್ಯಾಕಾಶದಲ್ಲಿಯೂ ಹಾರುತ್ತಿದೆ ತ್ರಿವರ್ಣ ಧ್ವಜ: ಇಸ್ರೋದಿಂದ ಎಸ್.ಎಸ್.ಎಲ್.ವಿ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭೂಮಿಯ ವೀಕ್ಷಣಾ ಉಪಗ್ರಹವನ್ನು ಹೊತ್ತೊಯ್ಯುವ ತನ್ನ ಚಿಕ್ಕ ವಾಣಿಜ್ಯ ರಾಕೆಟ್ ಮತ್ತು 750 ಶಾಲಾ ಬಾಲಕಿಯರು ನಿರ್ಮಿಸಿದ ‘ಆಜಾದಿ ಸ್ಯಾಟ್’ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದೆ. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಬಾಹ್ಯಾಕಾಶ ಸಂಸ್ಥೆಯ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್.ಎಸ್.ಎಲ್.ವಿ) – ಎಸ್.ಎಸ್.ಎಲ್.ವಿ-ಡಿ1/ಇಒಎಸ್ 02 ಬಗ್ಗೆ ಮಾಹಿತಿ ನೀಡಿದರು.