ಒಂದು ತಿಂಗಳಲ್ಲಿ 127 ಟನ್ ನಿಷೇಧಿತ ಪ್ಲಾಸ್ಟಿಕ್ ವಶ: 37 ಲಕ್ಷ ರೂಪಾಯಿ ದಂಡ ವಸೂಲಿ

ಸಾಂದರ್ಭಿಕ ಚಿತ್ರ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜುಲೈ ತಿಂಗಳೊಂದರಲ್ಲೇ ರಾಜ್ಯಾದ್ಯಂತ ಹಠಾತ್ ತಪಾಸಣೆ ನಡೆಸಿ 127.052 ಟನ್ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ ಮತ್ತು 37 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ. ಅಂಗಡಿಗಳು, ಉತ್ಪಾದನಾ ಘಟಕಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳ ಮೇಲಿನ ದಾಳಿಯಲ್ಲಿ, ಜುಲೈನಲ್ಲಿ 22,116 ತಪಾಸಣೆಗಳನ್ನು ನಡೆಸಲಾಗಿದ್ದು 15,629 ಉಲ್ಲಂಘನೆಗಳು ಕಂಡುಬಂದಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಹಿರಿಯ ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು ಡಿಎಚ್‌ಗೆ ನೀಡಿದ ಸಂದರ್ಶನದಲ್ಲಿ, ಸೂಕ್ತ ಪರ್ಯಾಯದ ಕೊರತೆಯಿಂದಾಗಿ ಏಕ ಬಳಕೆಯ ಪ್ಲಾಸ್ಟಿಕ್‌ಗೆ ಆದ್ಯತೆ ನೀಡಲಾಗುತ್ತಿದೆ. ಜೈವಿಕ ವಿಘಟನೀಯ ಚೀಲಗಳು ಮತ್ತು ಸಂಯೋಜಿತ ವಸ್ತುಗಳಂತಹ ಪರ್ಯಾಯಗಳ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಆದರೆ ಇವು ವಿರಳ ಮತ್ತು ದುಬಾರಿಯಾಗಿದೆ ಎಂದು ಹೇಳಿದ್ದಾರೆ.

ನೈಸರ್ಗಿಕ ಅಥವಾ ಅಡಿಕೆಯಿಂದ ತಯಾರಿಸಿದ ಬಟ್ಟಲುಗಳು ಮತ್ತು ತಟ್ಟೆಗಳು ಪ್ಲಾಸ್ಟಿಕ್ ಗೆ ಉತ್ತಮ ಪರ್ಯಾಯಗಳು ಆದರೆ ಅವುಗಳನ್ನು ಸೋರ್ಸಿಂಗ್ ಮಾಡುವುದು ಒಂದು ಸವಾಲಾಗಿದೆ. ಪ್ಲಾಸ್ಟಿಕ್ ಬಳಕೆ ಸ್ಥಿರವಾಗಿ ಕಡಿಮೆಯಾಗುತ್ತಿದೆ ಮತ್ತು ಜನರು ಹೆಚ್ಚು ಪರಿಸರ ಸ್ನೇಹಿ ಆಯ್ಕೆಗಳಿಗೆ ಬದಲಾಗಲು ಪ್ರಾರಂಭಿಸಿದ್ದಾರೆ.

ಉತ್ಪಾದನಾ ಘಟಕಗಳಿಗೆ ಮೊದಲ ಅಪರಾಧಕ್ಕೆ ಪ್ರತಿ ಟನ್‌ಗೆ ರೂ 5,000 ದಂಡ ವಿಧಿಸಲಾಗುತ್ತದೆ ಮತ್ತು ಮುಂದಿನ ಕೆಲವು ಅಪರಾಧಗಳಿಗೆ ಇದು ದ್ವಿಗುಣಗೊಳ್ಳಬಹುದು. ವ್ಯಕ್ತಿಗಳಿಗೆ ದಂಡವು ಮೊದಲ ಅಪರಾಧಕ್ಕೆ ರೂ 200 ಮತ್ತು ನಂತರದ ಅಪರಾಧಗಳಿಗೆ ದ್ವಿಗುಣಗೊಳ್ಳಬಹುದು. ಅಂಗಡಿಯ ಮಾಲೀಕರು ಮತ್ತು ವೈಯಕ್ತಿಕ ಬಳಕೆದಾರರಲ್ಲಿ ಅಪರಾಧಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಅಧಿಕಾರಿ ತಿಳಿಸಿದ್ದಾರೆ.