ವಿಶ್ವ ಕೊಂಕಣಿ ಕೇಂದ್ರ: ಸಿಎ ಇಂಟರ್ ಮೀಡಿಯೆಟ್ ಸೂಪರ್ 25 ಉಚಿತ ಕ್ರ್ಯಾಶ್ ಕೋರ್ಸ್ ಉದ್ಘಾಟನಾ ಸಮಾರಂಭ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಸಿಎ ಆಕಾಂಕ್ಷಿಗಳನ್ನು ಆಧರಿಸುವ ನಿಟ್ಟಿನಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಂಗಳೂರಿನಲ್ಲಿ ಸಿಎ ಇಂಟರ್ ರಿಪೀಟರ್ಸ್ ಗಾಗಿ ‘ಸೂಪರ್ 25’ ಎಂಬ ಉಚಿತ ಕ್ರ್ಯಾಶ್ ಕೋರ್ಸನ್ನು ಉದ್ಘಾಟಿಸಲಾಯಿತು.

ಈ 9 ದಿನಗಳ ಸೂಪರ್ 25 ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ರಾಜ್ಯದ ಬೇರೆ ಬೇರೆ ಭಾಗಗಳಿಂದ 24 ಸಿಎ ಆಕಾಂಕ್ಷಿಗಳು ಭಾಗವಹಿಸಿದ್ದು ನುರಿತ ಅಧ್ಯಾಪಕರಿಂದ ಅಧ್ಯಾಪನ, ಅಧ್ಯಯನ ಸಾಮಾಗ್ರಿಗಳ ಪೂರೈಕೆ ಜೊತೆಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನೂ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ.ನಂದಗೋಪಾಲ್ ಶೆಣೈ ಈ ಹೊಸ ಪಯಣಕ್ಕೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

ಕ್ರ್ಯಾಶ್ ಕೋರ್ಸಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ತ್ರಿಶಾ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್
ಅಭಿನಂದಿಸಿದರು.

ಈ ಸಂದರ್ಭದಲ್ಲಿ ತ್ರಿಶಾ ಮತ್ತು ಡಬ್ಲ್ಯುಕೆಸಿಯ ಟ್ರಸ್ಟಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸಿಇಒ ಗುರುದತ್ ಬಂಟ್ವಾಳ್ಕರ್ ಉದ್ಘಾಟನಾ ಕಾರ್ಯಕ್ರಮವನ್ನು ನಿರೂಪಿಸಿದರು, ಕ್ಷಮತಾ ಸಂಚಾಲಕ ಹಾಗೂ ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಸಿಎ ಗಿರಿಧರ್ ಕಾಮತ್ ವಂದಿಸಿದರು.

ಈ ಕಾರ್ಯಕ್ರಮವನ್ನು ವಿದ್ಯಾ ಕಲ್ಪಕ ಮತ್ತು ತ್ರಿಶಾ ಕ್ಲಾಸಸ್ ಸಂಪೂರ್ಣವಾಗಿ ಪ್ರಾಯೋಜಿಸುತ್ತಿವೆ.