ನಿಟ್ಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ನಿಟ್ಟೆ: ಜುಲೈ 12 ರಂದು ನಿಟ್ಟೆ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಿಟ್ಟೆ ಕಾಲೇಜಿನ ಸಂಭ್ರಮ ಸಭಾಂಗಣದಲ್ಲಿ ನೆರವೇರಿತು. 2023-24 ನೇ ಸಾಲಿನ ಪದಗ್ರಹಣ ಅಧಿಕಾರಿಯಾಗಿ ರೋಟರಿ ಜಿಲ್ಲೆ 3182 ನ ಗವರ್ನರ್ ಬಿ.ಸಿ. ಗೀತಾರವರು ಪದಗ್ರಹಣವನ್ನು ನೆರವೇರಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ನೂತನ ಅಧ್ಯಕ್ಷ ರೋ.ಡಾ.ಸುದೀಪ ಕೆ.ಬಿ, ಕಾರ್ಯದರ್ಶಿ ರೋ.ಡಾ.ಕೃಷ್ಣ ಪ್ರಸಾದ್ ಮತ್ತು ತಂಡದವರು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ರೋ.ಡಾ.ಸುದೀಪ ಕೆ.ಬಿ ಮಾತನಾಡಿ, ಮುಂದಿನ ಜನಾಂಗಕ್ಕೆ ಶುದ್ದ ಗಾಳಿ, ನೀರು, ನೆಲದ ಪ್ರಕೃತಿಯನ್ನು […]
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ 2 ಲಕ್ಷ ರೂ ಹಣದ ಕಟ್ಟು ವಾಪಸ್ ಎಸೆತ: ಹಣ ಬೇಡ, ಸಮಾಜದಲ್ಲಿ ಶಾಂತಿ ಬೇಕು ಎಂದ ಮಹಿಳೆ
ಕೆರೂರು: ಬಾಗಲಕೋಟೆಯ ಕೆರೂರಿನಲ್ಲಿ ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ನಾಲ್ವರಲ್ಲಿ ಒಬ್ಬರ ಕುಟುಂಬದ ಸದಸ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ 2 ಲಕ್ಷ ರೂ. ಗಳ ಹಣದ ಕಟ್ಟನ್ನು ಅವರ ಕಾರಿನ ಮೇಲೆ ವಾಪಸ್ ಎಸೆದಿದ್ದಾರೆ. ಇಷ್ಟು ದಿನ ಕಳೆದರೂ ಯಾವೊಬ್ಬ ನಾಯಕನೂ ಭೇಟಿಗೆ ಬಾರದಿರುವುದಕ್ಕೆ ಗಾಯಾಳುಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. #WATCH | Karnataka: A woman, whose husband was injured in recent Kerur violence, threw the money that was […]
ಮಂಗಳೂರು: ಕಂಕನಾಡಿಯ ಒಮೆಗಾ ಆಸ್ಪತ್ರೆ ಬಳಿ ಕಾಟನ್ ಕಿಂಗ್ ನ ಹೊಸ ಮಳಿಗೆ ಶುಭಾರಂಭ
ಮಂಗಳೂರು: ಶುಕ್ರವಾರ ಜುಲೈ 15 ರಂದು ಕಂಕನಾಡಿಯ ಒಮೆಗಾ ಆಸ್ಪತ್ರೆ ಬಳಿ ಬೈಪಾಸ್ ರಸ್ತೆಯಲ್ಲಿರುವ ರಾಜ್ಸಾನ್ ಕಾಂಪ್ಲೆಕ್ಸ್‌ನಲ್ಲಿ ಕಾಟನ್ ಡ್ರೆಸ್ ಮೆಟೀರಿಯಲ್ಸ್ ಮತ್ತು ಪುರುಷರ ರೆಡಿಮೇಡ್ ಉಡುಪುಗಳ ಸುಪ್ರಸಿದ್ಧ ಸಂಸ್ಥೆ ‘ಕಾಟನ್ ಕಿಂಗ್’ ನ ಹೊಸ ಶೋ ರೂಂ ಅನ್ನು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಸಹಾಯಕ ಧರ್ಮಗುರು ಫಾದರ್ ರೋನ್ಸನ್ ಪಿಂಟೋ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಫಾ ರಾನ್ಸನ್, “ಒಬ್ಬ ವ್ಯಕ್ತಿಯು ಎತ್ತರಕ್ಕೇರಲು ಬಯಸಿದ್ದರೆ, ಅವನು ವಿನಮ್ರನಾಗಿರಬೇಕು ಮತ್ತು ಕಠಿಣ ಪ್ರಯತ್ನದಿಂದ ಶ್ರಮವಹಿಸಬೇಕು. ಕಠಿಣ ಪರಿಶ್ರಮವು […]
ಕಾಪು ಸರ್ಕಾರಿ ಪಾಲಿಟೆಕ್ನಿಕ್: ಪ್ರವೇಶಾತಿ ಅವಧಿ ವಿಸ್ತರಣೆ
ಉಡುಪಿ: ಕಾಪುವಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸುಗಳಿಗೆ ಕಡಿಮೆ ಪ್ರವೇಶ ಶುಲ್ಕದೊಂದಿಗೆ ಪ್ರವೇಶ ದಾಖಲಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 30 ರ ವರೆಗೆ ವಿಸ್ತರಿಸಲಾಗಿದೆ. ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೇ. 35 ಅಂಕ ಪಡೆದಿರುವ ಅರ್ಹ ಅಭ್ಯರ್ಥಿಗಳು ಆಟೋಮೇಷನ್ ಅಂಡ್ ರೊಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಅಂಡ್ ಬಿಗ್ ಡೇಟಾ ಎಂಬ ಕೋರ್ಸುಗಳಲ್ಲಿ ಬಾಕಿ ಉಳಿದಿರುವ ಸೀಟುಗಳಿಗೆ ಸೂಕ್ತ ದಾಖಲಾತಿಗಳೊಂದಿಗೆ ನೇರವಾಗಿ […]
ಜುಲೈ 25 ರ ನಂತರ ಜಿಲ್ಲೆಯಾದ್ಯಂತ ಕಾರ್ಮಿಕರ ಇ-ಶ್ರಮ್ ನೋಂದಣಿ
ಉಡುಪಿ: ಜುಲೈ 25 ರ ನಂತರ ಜಿಲ್ಲೆಯಾದ್ಯಂತ ಕಾರ್ಮಿಕರ ಇ-ಶ್ರಮ್ ನೋಂದಣಿ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಗೆ ಸೇರ್ಪಡೆ ಮಾಡುವ ಕುರಿತಂತೆ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ, ಅರ್ಹ ಕಾರ್ಮಿಕರನ್ನು ನೋಂದಣಿ ಮಾಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಕುರಿತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಸೂಚಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಯಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ ಹಾಗೂ ಅಸಂಘಟಿತ […]