ಮಂಗಳೂರು: ಕಂಕನಾಡಿಯ ಒಮೆಗಾ ಆಸ್ಪತ್ರೆ ಬಳಿ ಕಾಟನ್ ಕಿಂಗ್ ನ ಹೊಸ ಮಳಿಗೆ ಶುಭಾರಂಭ

ಮಂಗಳೂರು: ಶುಕ್ರವಾರ ಜುಲೈ 15 ರಂದು ಕಂಕನಾಡಿಯ ಒಮೆಗಾ ಆಸ್ಪತ್ರೆ ಬಳಿ ಬೈಪಾಸ್ ರಸ್ತೆಯಲ್ಲಿರುವ ರಾಜ್ಸಾನ್ ಕಾಂಪ್ಲೆಕ್ಸ್‌ನಲ್ಲಿ ಕಾಟನ್ ಡ್ರೆಸ್ ಮೆಟೀರಿಯಲ್ಸ್ ಮತ್ತು ಪುರುಷರ ರೆಡಿಮೇಡ್ ಉಡುಪುಗಳ ಸುಪ್ರಸಿದ್ಧ ಸಂಸ್ಥೆ ‘ಕಾಟನ್ ಕಿಂಗ್’ ನ ಹೊಸ ಶೋ ರೂಂ ಅನ್ನು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಸಹಾಯಕ ಧರ್ಮಗುರು ಫಾದರ್ ರೋನ್ಸನ್ ಪಿಂಟೋ ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಫಾ ರಾನ್ಸನ್, “ಒಬ್ಬ ವ್ಯಕ್ತಿಯು ಎತ್ತರಕ್ಕೇರಲು ಬಯಸಿದ್ದರೆ, ಅವನು ವಿನಮ್ರನಾಗಿರಬೇಕು ಮತ್ತು ಕಠಿಣ ಪ್ರಯತ್ನದಿಂದ ಶ್ರಮವಹಿಸಬೇಕು. ಕಠಿಣ ಪರಿಶ್ರಮವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ವಿವಿಧ ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ, ಮ್ಯಾಕ್ಸಿಮ್ ಅವರು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ” ಎಂದರು.

ಕಾರ್ಪೊರೇಟರ್ ಲ್ಯಾನ್ಸೆಲಾಟ್ ಪಿಂಟೊ ಮಾತನಾಡಿ, “ಮ್ಯಾಕ್ಸಿಮ್ ಅವರು ಜನರನ್ನು ಭೇಟಿಯಾಗುವಾಗ ಅವರ ಮುಖದಲ್ಲಿ ಸದಾ ನಗು ಇರುವುದರಿಂದ ಜನರು ಅವರಿಗೆ ಯಾವಾಗಲೂ ಹತ್ತಿರವಾಗುತ್ತಾರೆ. ವ್ಯವಹಾರವನ್ನು ಸುಧಾರಿಸಲು ಜನರ ಪ್ರತಿಕ್ರಿಯೆಯು ಪ್ರಮುಖ ಪಾತ್ರ ವಹಿಸುತ್ತದೆ” ಎಂದರು.

ಮಾಲೀಕ ಮ್ಯಾಕ್ಸಿಮ್ ಸಲ್ಡಾನ್ಹಾ, ಪತ್ನಿ ಗ್ರಾತಾ ಸಲ್ಡಾನ್ಹಾ, ಮಕ್ಕಳಾದ ಲಿಯೋನ್ ಮತ್ತು ಒನೆಲ್, ಕಟ್ಟಡದ ಮಾಲೀಕ ಯಶವಂತ್ ಕುಮಾರ್, ಸ್ಟ್ಯಾನಿ ಅಲ್ವಾರೆಸ್ ಮತ್ತು ಇತರರು ಉಪಸ್ಥಿತರಿದ್ದರು. ಮ್ಯಾಕ್ಸಿಮ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

ಮ್ಯಾಕ್ಸಿಮ್ ಸಲ್ಡಾನಾ ಅವರು ತನಿಷ್ಕ್ ಜ್ಯುವೆಲ್ಲರಿ ಶೋರೂಮ್, ವರ್ಲ್ಡ್ ಆಫ್ ಟೈಟಾನ್, ಟೈಟಾನ್ ಐ ಪ್ಲಸ್ ಶೋರೂಮ್‌ಗಳು ಮತ್ತು ಉಡುಪಿಯಲ್ಲಿ ಕಾಟಟ್ ಕಿಂಗ್ ಶೋರೂಮ್ ಮತ್ತು ಶಿವಮೊಗ್ಗದಲ್ಲಿ ಫಾಸ್ಟ್ ಟ್ರ್ಯಾಕ್ ಶೋರೂಮ್ ಅನ್ನು ಹೊಂದಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿನ ಕಾಟನ್ ಕಿಂಗ್ ಮಳಿಗೆ ಅವರ ಆರನೇ ಉದ್ಯಮವಾಗಿದೆ.

ವಿಳಾಸ:
ಮಂಗಳೂರು ಮಳಿಗೆ:
ರಾಜಸನ್ ಕಾಂಪ್ಲೆಕ್ಸ್,
ಕಂಕನಾಡಿ ಬೈಪಾಸ್ ರಸ್ತೆ,
ಒಮೆಗಾ ಆಸ್ಪತ್ರೆ ಹತ್ತಿರ, ಕಂಕನಾಡಿ,
ಮಂಗಳೂರು – 575002

ಉಡುಪಿ ಮಳಿಗೆ:
ಶ್ರೀರಾಮ ಕಟ್ಟಡ,
ಉಡುಪಿ ಸಿಟಿ ಬಸ್ ನಿಲ್ದಾಣದ ಹತ್ತಿರ
ಉಡುಪಿ – 576101