ಗುರು ಎನ್ನುವುದು ಗುರುತರ ಜವಾಬ್ದಾರಿಯನ್ನು ಹೊಂದಿರುವ ಸ್ಥಾನ: ಪ್ರೊ.ಕೆ.ವಿ.ರಾವ್

ಮಣಿಪಾಲ: ಮಕ್ಕಳೊಂದಿಗೆ ಮಗುವಾಗಿ ಮಿತ್ರನಾಗಿ ಸಮಾನ ಮನಸ್ಕರಾಗಿ ಸಮನ್ವಯಕಾರನಾಗಿ ಸಮಸ್ಯೆಗಳ ಪರಿಹಾರಕನಾಗಿ ಗುರು ದುಡಿದರೆ ತನ್ನ ಶಿಷ್ಯನಲ್ಲಿ ಅಡಗಿರುವ ಪ್ರತಿಭೆಯನ್ನು ಅರಳಿಸಬಹುದು. ಗುರು ಎನ್ನುವುದು ಗುರುತರ ಜವಾಬ್ದಾರಿಯನ್ನು ಹೊಂದಿರುವ ಸ್ಥಾನ. ಪ್ರಪಂಚದ ಆಗುಹೋಗುಗಳ ಸ್ಪಷ್ಟೀಕರಣ ಕೊಡುವ, ಸತ್ಯವನ್ನು ಹುಡುಕುವ ಪ್ರಯತ್ನ ಮತ್ತು ಉತ್ಸಾಹವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಆತನ ಆದ್ಯ ಕರ್ತವ್ಯ. ಅಸಾಧ್ಯವಾದುದನ್ನು ಸಾಧಿಸುವ ಛಲವು ಬೆಳವಣಿಗೆಗೆ ಮಾರಕವಾಗಬಹುದು. ಸಾಧ್ಯವಿರುವ ಗುರಿಯಡೆಗೆ ಸ್ಪಷ್ಟತೆ ಮತ್ತು ಸಿದ್ಧತೆ ಮಾಡಿಕೊಡುವ ಕೌಶಲ್ಯ ಗುರುವಿಗಿರಬೇಕಾಗುತ್ತದೆ ಎಂದು ಕಂಪ್ಯೂಟರ್ ವಿಜ್ಞಾನಿ ಫ್ರೊ. ಕೆ.ವಿ.ರಾವ್ ಅವರು […]

ಹಿರಿಯಡ್ಕ: ಜುಲೈ 17 ರಂದು ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹಿರಿಯಡ್ಕ: ಜುಲೈ 17 ಭಾನುವಾರದಂದು ಸಂಜೆ 7-00 ಗಂಟೆಗೆ ಲಯನ್ಸ್ ಕ್ಲಬ್ ಹಿರಿಯಡ್ಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹಿರಿಯಡ್ಕ ಪೊಲೀಸ್ ಸ್ಟೇಷನ್ ಎದುರು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದ ರಜತರಶ್ಮಿ ಆಡಿಟೋರಿಯಂನಲ್ಲಿ ಜರುಗಲಿದೆ. ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಎ ರವೀಂದ್ರನಾಥ್ ಹೆಗ್ಡೆ, ಲಯನ್ಸ್ ಕ್ಲಬ್ ಹರ್ಷ ಅಧ್ಯಕ್ಷೆ ಲ. ದೀಪ್ತಿ ಎನ್ ಶೆಟ್ಟಿ, ಪದಗ್ರಹಣಾಧಿಕಾರಿ ಡಾ. ನೇರಿ ಕಾರ್ನೆಲಿಯೋ ಹಾಗೂ ನಿಕಟಪೂರ್ವ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಖಜಾಂಜಿಗಳು ಉಪಸ್ಥಿತರಿರಲಿದ್ದಾರೆ.

ಸಿ.ಎ. ಫೈನಲ್ ಪರೀಕ್ಷೆ: ತ್ರಿಶಾ ವಿದ್ಯಾರ್ಥಿಯ ಸಾಧನೆ

ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜೂನ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತೀರ್ಥಹಳ್ಳಿಯ ನಾಗಾನಂದ ಮಲ್ಯ ಇವರು ಉತ್ತೀರ್ಣರಾಗಿದ್ದಾರೆ.ಇವರು ಬೆಂಗಳೂರಿನ ಬಿ.ವಿ.ಸಿ. ಮತ್ತು ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ಅನ್ನು ಪೂರೈಸಿದ್ದು, ಸಿಎಯ ಐಪಿಸಿಸಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ನಾಗಾನಂದ ತೀರ್ಥಹಳ್ಳಿಯ ಶ್ರೀನಿವಾಸ ಮಲ್ಯ ಮತ್ತು ಸಾಧನಾ ಮಲ್ಯ ದಂಪತಿಯ ಪುತ್ರ.

ಗ್ರಾಹಕರ ಮೇಲೆ ಜಿಎಸ್‌ಟಿ ದರ ಏರಿಕೆ ಬರೆ: ಜುಲೈ 18 ರಿಂದ ದೈನಂದಿನ ಅವಶ್ಯಕ ವಸ್ತುಗಳು ಆಗಲಿವೆ ತುಟ್ಟಿ

ನವದೆಹಲಿ:ಮುಂದಿನ ವಾರದಿಂದ ಹಾಲು, ಅಕ್ಕಿ, ಮೊಸರು, ಇತರೆ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆಯಾಗಲಿದೆ. ಜಿಎಸ್‌ಟಿ ಕೌನ್ಸಿಲ್ ತನ್ನ 47 ನೇ ಸಭೆಯಲ್ಲಿ ಹಲವಾರು ದೈನಂದಿನ ಅಗತ್ಯ ವಸ್ತುಗಳ ದರವನ್ನು ಹೆಚ್ಚಿಸಲು ಸರ್ವಾನುಮತದಿಂದ ನಿರ್ಧರಿಸಿದೆ. ಈ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆ ಜುಲೈ 18, ಸೋಮವಾರದಿಂದ ಜಾರಿಗೆ ಬರಲಿದೆ. ಕಾನೂನು ಮಾಪನಶಾಸ್ತ್ರ ಕಾಯಿದೆಯ ಪ್ರಕಾರ ಪೂರ್ವ-ಪ್ಯಾಕ್ ಮಾಡಲಾದ ಮತ್ತು ಮೊದಲೇ ಲೇಬಲ್ ಮಾಡಲಾದ ಮೊಸರು, ಮಜ್ಜಿಗೆ ಮತ್ತು ಬೆಣ್ಣೆ, ಹಾಲು, ಪನೀರ್ ಇಂತಹ ವಸ್ತುಗಳ ಮೇಲೆ […]

ಸಿಂಗಾಪುರ ಓಪನ್: ಫೈನಲ್‌ ಪ್ರವೇಶಿಸಿದ ಪಿ.ವಿ ಸಿಂಧು

ಭಾರತದ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು 21-15, 21-7 ಸೆಟ್‌ಗಳಿಂದ ಜಪಾನಿನ ಶಟ್ಲರ್ ಸೈನಾ ಕವಾಕಮಿ ವಿರುದ್ಧ ನೇರ ಗೆಲುವು ಸಾಧಿಸುವ ಮೂಲಕ ಸಿಂಗಾಪುರ ಓಪನ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕೇವಲ ಅರ್ಧಗಂಟೆಯಲ್ಲಿ ಮುಗಿದ ಪಂದ್ಯದಲ್ಲಿ ಸಿಂಧು ತಮ್ಮ ಎದುರಾಳಿಯನ್ನು ಸೋಲಿಸಿದ್ದಾರೆ ಪಂದ್ಯಾವಳಿಯಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿ ಸಿಂಧು ಭಾಗವಹಿಸಿದ್ದಾರೆ.