ಮಾಹಿ 41ನೇ ಹುಟ್ಟು ಹಬ್ಬಕ್ಕೆ 41 ಫೀಟ್ ಕಟೌಟ್ ಹಾಕಿ ಸಂಭ್ರಮಿಸಿದ ವಿಜಯವಾಡಾ ಅಭಿಮಾನಿಗಳು

ವಿಜಯವಾಡಾ: ಭಾರತ ಕಂಡ ಅತ್ಯುತ್ತಮ ಕ್ರಿಕೆಟ್ ಕ್ಯಾಪ್ಟನ್ ಗಳಲ್ಲಿ ಒಬ್ಬರಾದ ಕೂಲ್ ಕ್ಯಾಪ್ಟನ್ ಥಲಾ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 41ನೇ ವರ್ಷದ ಹುಟ್ಟು ಹಬ್ಬವನ್ನಾಚರಿಸುತ್ತಿದ್ದಾರೆ. ಧೋನಿ ಹುಟ್ಟು ಹಬ್ಬಕ್ಕೆ ಇಡೀ ದೇಶವೆ ಅವರಿಗೆ ಶುಭಾಶಯಗಳ ಸುರಿಮಳೆಯನ್ನು ಸುರಿಸುತ್ತಿದೆ. ತಮ್ಮ ಧೋನಿ ಅಭಿಮಾನಕ್ಕೆ ಸಾಕ್ಷಿ ಎನ್ನುವಂತೆ, ವಿಜಯವಾಡದ ಜಿಲ್ಲೆಯೊಂದರಲ್ಲಿ ಅಭಿಮಾನಿಗಳು ಮಾಹಿಯ 41 ಅಡಿ ಕಟೌಟ್ ಹಾಕಿ ಮಾಜಿ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಕಟೌಟ್‌ನಲ್ಲಿ ಧೋನಿ ಬಹು ಪ್ರಖ್ಯಾತ ಹೆಲಿಕಾಪ್ಟರ್ ಶಾಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ […]
ವಿಶ್ವ ಯುವ ಕೌಶಲ್ಯ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಉಡುಪಿ: ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ವಿಶ್ವ ಯುವ ಕೌಶಲ್ಯ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಆಯೋಜಿಸಲಾಗಿರುತ್ತದೆ. ಪದವಿ ಪೂರ್ವ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಷಯ: ಕೈಗಾರಿಕಾ ಶೈಕ್ಷಣಿಕ ಒಗ್ಗೂಡುವಿಕೆಯಿಂದ ಕೌಶಲ್ಯದ ಅಂತರವನ್ನು ಕಡಿಮೆ ಮಾಡುವುದು, ಶಕ್ತಿಯುತ ಹಾಗೂ ಸುಸ್ಥಿರ ಬೆಳವಣಿಗೆಗಾಗಿ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಮಾರ್ಗಗಳು, ಕೌಶಲ್ಯ ಮತ್ತು ಸಾಮರ್ಥ್ಯಗಳ ಮೇಲೆ ಕೇಂದ್ರೀಕೃತವಾದ ಉನ್ನತ ಶಿಕ್ಷಣದ […]
ಕಾಡಮಲ್ಲಿಗೆ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ

ಉಡುಪಿ: ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ಇವರ ನಾಲ್ವರು ಮಕ್ಕಳಲ್ಲಿ ವಿಶ್ವನಾಥ ರೈ ಒಬ್ಬರು. ಇವರು 28-2-1949 ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದರು. ಶಿಕ್ಷಣ 2 ನೇ ತರಗತಿ. ಇಬ್ಬರು ಅಕ್ಕಂದಿರು ಒಬ್ಬಾಕೆ ತಂಗಿ. ಅಚ್ಚುತ ಮಣಿಯಾಣಿಯವರಿಂದ ಯಕ್ಷ ನಾಟ್ಯಾಭ್ಯಾಸ ಮಾಡಿ ತನ್ನ 9ನೇ ವರ್ಷ ಪ್ರಾಯದಲ್ಲಿ ರಂಗಪ್ರವೇಶ ಮಾಡಿದ್ದರು. ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ ಭರತನಾಟ್ಯವನ್ನೂ ಕಲಿತಿದ್ದರು. ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ ಚಿನ್ನದ ಉಂಗುರದ ಸನ್ಮಾನ ಸ್ವೀಕರಿಸಿದ್ದಾರೆ. ಕರ್ನಾಟಕ ಮೇಳ […]
ಅಪ್ಪಟ ಸ್ವದೇಶೀ ನಿರ್ಮಿತ ನಮ್ಮ ಊರಿನ ಬ್ರ್ಯಾಂಡ್ ಕ್ಯಾಂಪ್ಕೋ ಚಾಕಲೇಟ್!!

ಆಗಿನ್ನೂ ದೇಶದಲ್ಲಿ ಕ್ಯಾಡ್ ಬರೀಸ್, ನೆಸ್ಲೆ ಕಿಟ್ ಕ್ಯಾಟ್ ನಂತಹ ಕಂಪನಿಗಳು ಮನೆ ಮಾತಾಗಿರಲಿಲ್ಲ. ನಾವು ಸಣ್ಣವರಿದ್ದಾಗ ನಾಲ್ಕಾಣೆ, ಎಂಟಾಣೆಯ ಚಿಕ್ಕ ಪುಟ್ಟ ಚಾಕಲೇಟುಗಳೇ ನಮಗೆ ಕ್ಯಾಡ್ ಬರಿ, ಕಿಟ್ ಕ್ಯಾಟ್ ಆಗಿದ್ದವು. ಮುಂಬೈ ಅಥವಾ ವಿದೇಶದಿಂದ ಯಾರಾದರೂ ಊರಿಗೆ ಬಂದಾಗ ಮಾತ್ರ ಫೈವ್ ಸ್ಟಾರ್, ಕ್ಯಾಡ್ ಬರಿಯಂತಹ ಚಾಕಲೇಟುಗಳ ದರ್ಶನ ಭಾಗ್ಯ ನಮಗಾಗುತ್ತಿತ್ತು. ಆಗ ಬರುತ್ತಿದ್ದ ಅದೆಷ್ಟೋ ಚಾಕಲೇಟುಗಳಲ್ಲಿ ನೀಲಿ ಬಣ್ಣದ ಜರಿಯಲ್ಲಿ ಒಂದು ಕೆಂಪು ಹೃದಯದ ಚಿತ್ರವಿರುವ ಕ್ಯಾಂಪ್ಕೋ ಚಾಕಲೇಟ್ ಅತ್ಯಂತ ಪ್ರಸಿದ್ದವಾಗಿತ್ತು. […]
ಸಾಮಾಜಿಕ ಜಾಲತಾಣದಲ್ಲಿ ರಜೆ ಬಗ್ಗೆ ಸುಳ್ಳು ಸುದ್ದಿ: ಜಿಲ್ಲಾಡಳಿತದಿಂದ ಸೈಬರ್ ಠಾಣೆಯಲ್ಲಿ ದೂರು ದಾಖಲು

ಉಡುಪಿ: ಹವಾಮಾನ ಇಲಾಖೆಯ ಮುನ್ಸೂಚನೆ ಹಾಗೂ ಜಿಲ್ಲೆಯಲ್ಲಿ ಆಗುತ್ತಿರುವ ಮಳೆಯ ಪರಿಸ್ಥಿತಿಗೆ ಅನುಗುಣವಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ರಜೆ ಘೋಷಿಸಿ, ಆದೇಶಿಸುತ್ತಿರುವ ಆದೇಶ ಪ್ರತಿಯಲ್ಲಿನ ದಿನಾಂಕಗಳನ್ನು ತಿದ್ದುಪಡಿ ಮಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಕಿಡಿಗೇಡಿಗಳ ವಿರುದ್ದ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತವು ನಗರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದೆ. ಜಿಲ್ಲಾ ದಂಡಾಧಿಕಾರಿಗಳು ದಿನಾಂಕ.1-7-2022 ರಂದು ಜಿಲ್ಲಾ ವ್ಯಾಪ್ತಿಯಲ್ಲಿ ಮಳೆ ಹೆಚ್ಚಳವಾಗಿರುವ ಕಾರಣ ಹಾಗೂ ಹವಾಮಾನ […]