ವಿ.ಟಿ.ಯು ಮಟ್ಟದ ಚೆಸ್ ಚ್ಯಾಂಪಿಯನ್ ಶಿಪ್: ನಾಲ್ಕು ಪ್ರಶಸ್ತಿ ಗೆದ್ದ ನಿಟ್ಟೆ ವಿದ್ಯಾರ್ಥಿಗಳು

ನಿಟ್ಟೆ: ಜೂ. 21 ರಿಂದ 26 ರವರೆಗೆ ಚಿತ್ರದುರ್ಗದ ಎಸ್.ಜೆ.ಎಂ ತಾಂತ್ರಿಕ ಕಾಲೇಜಿನಲ್ಲಿ ನಡೆದ ವಿ.ಟಿ.ಯು ಮಟ್ಟದ ಚೆಸ್ ಚ್ಯಾಂಪಿಯನ್ಶಿಪ್ ನಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಲ್ಕು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಟ್ಟೆ ಕಾಲೇಜಿನ ಮಹಿಳಾ ಚೆಸ್ ತಂಡವು ರೆಸ್ಟ್ ಆಫ್ ಬೆಂಗಳೂರು ಝೋನ್ ವಿಭಾಗದಲ್ಲಿ ಪ್ರಥಮ ಸ್ಥಾನ, ಇಂಟರ್ ಝೋನ್ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಪುರುಷ ತಂಡವು ರೆಸ್ಟ್ ಆಫ್ ಬೆಂಗಳೂರು ಝೋನ್ ಮತ್ತು ಇಂಟರ್ ಝೋನ್ ವಿಭಾಗಗಳೆರಡರಲ್ಲೂ ದ್ವಿತೀಯ […]

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಮಣ್ಣು ಉಳಿಸಿ ಅಭಿಯಾನ

ಗಣಿತನಗರ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಈಶ ಫೌಂಡೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಮಣ್ಣು ಉಳಿಸಿ ಅಭಿಯಾನ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕ ಮತ್ತುನಿಟ್ಟೆ ಯುನಿವರ್ಸಿಟಿ ಪ್ರೊಫೆಸರ್ ಸಭ್ಯತ್ ಶೆಟ್ಟಿ, ಸದ್ಗುರು ಜಗ್ಗಿ ವಾಸುದೇವ್ ರವರು ಸಂಘಟಿಸಿ ನಡೆಸುತ್ತಿರುವ ವಿಶ್ವಮಟ್ಟದ ಮಣ್ಣು ಉಳಿಸಿ ಅಭಿಯಾನದ ಹಿನ್ನೆಲೆ, ಮಹತ್ವವನ್ನು ವಿವರಿಸಿದರು. ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕರಾದ ಯಶ್ ಶೆಟ್ಟಿ, ಮಂಗಳಾ ಚಂದ್ರಕಾಂತ್, ಪದ್ಮಜಾ, ರಾಜೇಶ್ ಪ್ರಭು, ಪ್ರೀತೇಶ್ […]

ಡಾ. ವಿ. ಎಸ್. ಆಚಾರ್ಯ ಮತ್ತು ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರಿಗೆ ಬಸ್ ಗಳ ವೇಳಾಪಟ್ಟಿ

ಉಡುಪಿ: ಉಡುಪಿಯ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆ.ಎಸ್.ಅರ್.ಟಿ.ಸಿ ನಿಗಮದ ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣದಿಂದ ಹಾಗೂ ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರ್ವಜನಿಕ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ವ್ಯಾಪ್ತಿಯ ಸ್ಥಳಗಳಾದ ನೆಲ್ಲಿಕಟ್ಟೆ, ಹೆಬ್ರಿ, ಹೊನ್ನಾಳ, ಮಂಚಕಲ್, ಕಾರ್ಕಳ, ಕೊಕ್ಕರ್ಣೆ, ಹೆರ್ಗ, ಶಿರ್ವ-ಮಂಚಕಲ್, ಹಂಪನಕಟ್ಟೆ, ಕೆಳಸಂಕ, ಮಲ್ಪೆಬೀಚ್, ಪಡುಕೆರೆ, ಇತ್ಯಾದಿ ಸ್ಥಳೀಯ ವಲಯಗಳಲ್ಲಿ ಕಾರ್ಯಾಚರಣೆಯಾಗುತ್ತಿರುವ ಸಾರಿಗೆಗಳ ವೇಳಾ ಪಟ್ಟಿ ಹೀಗಿದೆ. ಉಡುಪಿಯಿಂದ ಕಾರ್ಕಳಕ್ಕೆ 6:55, 10:02, 13:47, 16:51, 8:24, 11:32, 14:45, […]

ಸಹಕಾರಿ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದೆ: ಶಾಸಕ ಲಾಲಾಜಿ ಮೆಂಡನ್

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲು ಸಹಕಾರಿ ರಂಗವೇ ಮುಖ್ಯ ಕಾರಣ. ಬ್ಯಾಂಕಿಂಗ್, ಆರೋಗ್ಯ, ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಕೊಡುಗೆ ಅಪಾರ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು. ಸೋಮವಾರದಂದು ಪಡುಬಿದ್ರಿ ಮುಖ್ಯರಸ್ತೆಯ ಧನ್ವಂತರಿ ಕೃಪಾ ಅಂಚನ್ ಸಂಕೀರ್ಣದಲ್ಲಿ ಆರಂಭಗೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 23ನೇ ಪಡುಬಿದ್ರಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅತ್ಯಲ್ಪ ಅವಧಿಯಲ್ಲಿ […]

ಶಾಲಾ ಪಠ್ಯ ಪುಸ್ತಕ ವಿವಾದ: ಸರಿಪಡಿಸಿದ ಪಠ್ಯ ಪುಸ್ತಕಗಳನ್ನು ಉಚಿತ ಬುಕ್‌ಲೆಟ್ ರೂಪದಲ್ಲಿ ನೀಡಲು ನಿರ್ಧಾರ

ಬೆಂಗಳೂರು: ಪಠ್ಯಪುಸ್ತಕದಲ್ಲಿ ಕಂಡು ಬಂದ ತಪ್ಪುಗಳನ್ನು ತಿದ್ದುಪಡಿ ಮಾಡಿ ಹೊಸ ಪಠ್ಯಪುಸ್ತಕ ಮುದ್ರಿಸಿ ವಿತರಣೆ ಮಾಡಲು ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ. ಹೊಸ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಬುಕ್ ಲೆಟ್ ರೂಪದಲ್ಲಿ ವಿತರಿಸಲು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯು ತೀರ್ಮಾನಿಸಿದೆ. ತಿದ್ದುಪಡಿ ಮಾಡಿದ ಅಂಶಗಳ ಸಾಫ್ಟ್‌ ಪ್ರತಿಗಳನ್ನು ಜಾಲತಾಣದಲ್ಲಿ ಪ್ರಕಟಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈಗಾಗಲೇ ಪರಿಷ್ಕರಿಸಿರುವ ಪಠ್ಯಪುಸ್ತಕಗಳಲ್ಲಿ ಬಿಟ್ಟುಹೋದ ಅಂಶಗಳನ್ನು […]