ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಲಘು ಕಂಪನದ ಅನುಭವ

ಮಂಗಳೂರು: ಮಂಗಳವಾರ ಬೆಳಗ್ಗೆ  ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಲಘು ಕಂಪನದ ಅನುಭವವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಜೂನ್ 25 ರಂದು ಸಂಭವಿಸಿದ ಭೂಕಂಪನದಂತೆಯೇ, ಸುಳ್ಯ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆ 7.45 ರ ಸುಮಾರಿಗೆ ಕಂಪನದ ಅನುಭವವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಪಾಜೆ, ಅರಂತೋಡು, ಪೆರಾಜೆ, ಜಾಲ್ಸೂರು, ಉಬರಡ್ಕ, ತೊಡಿಕಾನ, ಮಿತ್ತೂರು ನಿವಾಸಿಗಳಿಗೆ ಕಂಪನದ ಅನುಭವವಾಗಿದೆ. ನಡುಕ ನಾಲ್ಕು ಸೆಕೆಂಡುಗಳ ಕಾಲ ನಡೆಯಿತು ಎನ್ನಲಾಗಿದೆ. ಈ ಬಗ್ಗೆ ವೊಲ್ಕಾನೋ ಡಿಸ್ಕವರಿಯಲ್ಲಿ ಮಾಹಿತಿ […]

ಜು.1 ರಿಂದ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ

ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್, ಪ್ಲಾಸ್ಟಿಕ್ ಬಂಟಿಂಗ್ಸ್, ಪ್ಲಾಸ್ಟಿಕ್ ಫ್ಲೆಕ್ಸ್, ಪ್ಲೇಟ್, ಪ್ಲಾಸ್ಟಿಕ್ ಧ್ವಜ, ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಸ್ಪೂನ್, ಅಂಟಿಕೊಳ್ಳುವ ಫಿಲ್ಮ್, ಎಲ್ಲಾ ದಪ್ಪದ ಡೈನಿಂಗ್ ಟೇಬಲ್ ನಲ್ಲಿ ಹರಡುವ ಬಳಸುವ ಪ್ಲಾಸ್ಟಿಕ್ ಹಾಳೆ, ಸ್ಟ್ರಾ, ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳ ಜೊತೆಗೆ ಹೆಚ್ಚುವರಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಇಯರ್ ಬಡ್, ಬಲೂನ್‌ಗೆ ಬಳಸುವ […]

ದಮನಿತ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಾಗಾರ

ಉಡುಪಿ: ದಮನಿತ ಮಹಿಳೆಯರಿಗೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಯೋಜನೆಗಳ ಪ್ರಯೋಜನಗಳನ್ನು ಅವರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಶಾಂತವೀರ ಶಿವಪ್ಪ ಹೇಳಿದರು. ಅವರು ಇಂದು ಉಡುಪಿ ಜಿಲ್ಲಾ ಏಡ್ಸ್ ತಡೆಗಟ್ಟುವ ಘಟಕದಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ […]

ಆರ್.ಎಸ್.ಬಿ ಸಭಾಭವನದ ಮುಂಭಾಗದಲ್ಲಿ ಆರ್.ಎಸ್.ಬಿ ವೃತ್ತ ನಾಮಕರಣ: ಆಕ್ಷೇಪಣೆ ಆಹ್ವಾನ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ ಆರ್.ಎಸ್.ಬಿ ಸಭಾಭವನದ ಮುಂಭಾಗದಲ್ಲಿ ವೃತ್ತ ನಿರ್ಮಿಸಿ, ಆರ್.ಎಸ್.ಬಿ ವೃತ್ತ ಎಂದು ನಾಮಕರಣ ಮಾಡಲು ಮಣಿಪಾಲದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದ್ದು, ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭಾ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ವಿಶ್ವ ನಾಯಕರಿಗೆ ಭಾರತೀಯ ಸಂಸ್ಕೃತಿಯ ವಿಧ ವಿಧ ಕಲಾಕೃತಿ ಉಡುಗರೆ ನೀಡಿದ ಪ್ರಧಾನಿ ಮೋದಿ

ಜರ್ಮನಿಯ ಜಿ-7 ಶೃಂಗ ಸಭೆಯಲ್ಲಿ ಪಾಲ್ಗೊತ್ತಿರುವ ಪ್ರಧಾನಿ ಮೋದಿ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಉತ್ತರ ಪ್ರದೇಶದ ನಿಜಾಮಾಬಾದ್‌ನ ಕಪ್ಪು ಮಡಿಕೆಗಳನ್ನು, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರಿಗೆ ಛತ್ತೀಸ್‌ಗಢದಿಂದ ರಾಮಾಯಣ ಥೀಮ್‌ನೊಂದಿಗೆ ಡೋಕ್ರಾ ಕಲಾಕೃತಿಯನ್ನು ಮತ್ತು ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್‌ಗೆ ನಂದಿಯ ಮೂರ್ತಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಯುಪಿಯ ಲಕ್ನೋದಿಂದ ಜರ್ದೋಜಿ ಬಾಕ್ಸ್‌ನಲ್ಲಿ ಇತ್ತರ್ ಬಾಟಲಿ, ಯುಪಿಯ ಬುಲಂದ್‌ಶಹರ್‌ನಿಂದ ಯುಕೆ ಪಿಎಂ ಬೋರಿಸ್ ಜಾನ್ಸನ್‌ಗೆ ಪ್ಲಾಟಿನಂ ಬಣ್ಣದ ಕೈಯಿಂದ […]