ಜೂನ್ 17 ರಿಂದ 19 ರ ವರೆಗೆ ಹಲಸು, ಜೇನು ಪ್ರದರ್ಶನ ಮತ್ತು ಮಾರಾಟ ಮೇಳ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಲಸು ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳವು ಜೂನ್ 17 ರಿಂದ 19 ರ ವರೆಗೆ ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆಯಲಿದೆ. ಮೇಳದಲ್ಲಿ ಹಲಸಿನ ವಿವಿಧ ತಳಿಗಳು, ಹಲಸಿನ ಆಹಾರ ಉತ್ಪನ್ನಗಳು ಹಾಗೂ ಮೌಲ್ಯ ವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಜೇನು ಪ್ರದರ್ಶನ […]

5G ತರಂಗಾಂತರ ಹರಾಜು ಪ್ರಕ್ರಿಯೆ ನಡೆಸಲು ಕೇಂದ್ರ ಸರಕಾರದ ಅನುಮೋದನೆ: ಜುಲೈ 26 ರಂದು ಹರಾಜು ಪ್ರಕ್ರಿಯೆಗೆ ಚಾಲನೆ

ನವದೆಹಲಿ: ಭಾರತದಲ್ಲಿ 5G ತರಂಗಾಂತರ ಹರಾಜನ್ನು ಸರ್ಕಾರ ಅನುಮೋದಿಸಿದೆ. 5G ಹರಾಜುಗಳನ್ನು ಜುಲೈ 26 ರಂದು ನಡೆಸಲಾಗುವುದು ಎಂದು ಹೇಳಲಾಗುತ್ತದೆ. 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ 72 GHz ಸ್ಪೆಕ್ಟ್ರಮ್ ಅನ್ನು ಹರಾಜಿಗೆ ಹಾಕಲಾಗುತ್ತದೆ. ವಿವಿಧ ಆವರ್ತನ ಬ್ಯಾಂಡ್‌ಗಳ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಯಲಿದೆ. ಭಾರತದಲ್ಲಿ 5G ಯು 4G ಗಿಂತ 10 ಪಟ್ಟು ವೇಗವಾಗಿರುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ದೂರಸಂಪರ್ಕ ಇಲಾಖಾ ಮಾಹಿತಿಯ ಪ್ರಕಾರ, ದೇಶದಾದ್ಯಂತ 13 ನಗರಗಳು ಆರಂಭದಲ್ಲಿ 5G ಅನ್ನು ಪಡೆಯಲಿವೆ. ಈ 13 […]

ಅಗ್ನಿಪಥ್ ಯೋಜನೆ ಎಂದರೇನು? ಅಗ್ನಿವೀರರಾಗಲು ಬೇಕಾಗುವ ಅರ್ಹತೆ ಮತ್ತು ಮಾನದಂಡಗಳೇನು? ಮಾಹಿತಿ ಇಲ್ಲಿದೆ

ಭಾರತೀಯ ಸೇನೆಯ ಮೂರು ಸೇವೆಗಳಲ್ಲಿ ಸೈನಿಕರನ್ನು ನೇಮಿಸಿಕೊಳ್ಳಲು ಸರ್ಕಾರ ಹೊಸ ಅಗ್ನಿಪಥ್ ಯೋಜನೆಯನ್ನು ಮಂಗಳವಾರ ಅನಾವರಣಗೊಳಿಸಿದೆ. ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿಯಿಂದ ಅನುಮತಿ ಪಡೆದಿರುವ ಹೊಸ ರಕ್ಷಣಾ ನೇಮಕಾತಿ ಸುಧಾರಣೆಯು ತಕ್ಷಣವೇ ಜಾರಿಗೆ ಬರಲಿದ್ದು, ಯೋಜನೆಯಡಿಯಲ್ಲಿ ನೇಮಕಗೊಂಡ ಸೈನಿಕರನ್ನು ‘ಅಗ್ನಿವೀರ್’ ಎಂದು ಕರೆಯಲಾಗುತ್ತದೆ. ಹೊಸ ವ್ಯವಸ್ಥೆಯು ಅಧಿಕಾರಿ ಶ್ರೇಣಿಗಿಂತ ಕೆಳಗಿನ ಸಿಬ್ಬಂದಿಗೆ ಮಾತ್ರ. 1. ಹೊಸ ಯೋಜನೆಯಡಿ, ವಾರ್ಷಿಕವಾಗಿ ಸುಮಾರು 45,000 ರಿಂದ 50,000 ಸೈನಿಕರನ್ನು ನೇಮಿಸಿಕೊಳ್ಳಲಾಗುವುದು ಮತ್ತು ಹೆಚ್ಚಿನವರು ಕೇವಲ ನಾಲ್ಕು ವರ್ಷಗಳಲ್ಲಿ ಸೇವೆಯನ್ನು ತೊರೆಯುತ್ತಾರೆ. […]

ಎಂ ಎಲ್ ಸಿ ಚುನಾವಣೆ : ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು

ಬೆಂಗಳೂರು: ಕರ್ನಾಟಕದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಎಂಎಲ್‌ಸಿ ಚುನಾವಣೆಯಲ್ಲಿ ಸತತ 8 ಬಾರಿ ಗೆದ್ದ ದೇಶದ ಮೊದಲ ಎಂಎಲ್‌ಸಿ ಎನ್ನುವ ಹೆಗ್ಗಳಿಕೆಗೆ ಹೊರಟ್ಟಿ ಪಾತ್ರವಾಗಿದ್ದಾರೆ. ಇನ್ನೂ 3 ಸ್ಥಾನಗಳಿಗೆ ಕೌಟಿಂಗ್ ನಡೆಯುತ್ತಿದ್ದು, ಕರ್ನಾಟಕದ ಮೇಲ್ಮನೆಯಲ್ಲಿ ಬಿಜೆಪಿ ಬಹುಮತದತ್ತ ಸಾಗುತ್ತಿದೆ.  

ಪಾವೊ ನೂರ್ಮಿ ಗೇಮ್ಸ್‌: ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ

ನವದೆಹಲಿ: ಟರ್ಕು (ಫಿನ್‌ಲ್ಯಾಂಡ್) ನಲ್ಲಿ ನಡೆದ 2022 ರ ಪಾವೊ ನೂರ್ಮಿ ಗೇಮ್ಸ್‌ನ ಪುರುಷರ ಜಾವೆಲಿನ್ ಥ್ರೋ ನಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. 24ರ ಹರೆಯದ ಚೋಪ್ರಾ ಮಂಗಳವಾರ (ಜೂನ್ 14) ದಂದು 89.30 ಮೀಟರ್ ದೂರ ಜಾವೆಲಿನ್ ಎಸೆದು ಹೊಸ ವೈಯಕ್ತಿಕ ಮತ್ತು ರಾಷ್ಟ್ರೀಯ ದಾಖಲೆಯನ್ನು ಮಾಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ನೀರಜ್ ರ ಅತ್ಯುತ್ತಮ ಎಸೆತದ ರಾಷ್ಟ್ರೀಯ ದಾಖಲೆ 87.58 ಮೀಟರ್ ಆಗಿತ್ತು. […]