ಪಾವೊ ನೂರ್ಮಿ ಗೇಮ್ಸ್‌: ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ

ನವದೆಹಲಿ: ಟರ್ಕು (ಫಿನ್‌ಲ್ಯಾಂಡ್) ನಲ್ಲಿ ನಡೆದ 2022 ರ ಪಾವೊ ನೂರ್ಮಿ ಗೇಮ್ಸ್‌ನ ಪುರುಷರ ಜಾವೆಲಿನ್ ಥ್ರೋ ನಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. 24ರ ಹರೆಯದ ಚೋಪ್ರಾ ಮಂಗಳವಾರ (ಜೂನ್ 14) ದಂದು 89.30 ಮೀಟರ್ ದೂರ ಜಾವೆಲಿನ್ ಎಸೆದು ಹೊಸ ವೈಯಕ್ತಿಕ ಮತ್ತು ರಾಷ್ಟ್ರೀಯ ದಾಖಲೆಯನ್ನು ಮಾಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ನೀರಜ್ ರ ಅತ್ಯುತ್ತಮ ಎಸೆತದ ರಾಷ್ಟ್ರೀಯ ದಾಖಲೆ 87.58 ಮೀಟರ್ ಆಗಿತ್ತು.

ಪಾವೋ ನೂರ್ಮಿ ಗೇಮ್ಸ್‌ನಲ್ಲಿ ಫಿನ್‌ಲ್ಯಾಂಡ್‌ನ ಒಲಿವರ್ ಹೆಲಾಂಡರ್, ವೈಯಕ್ತಿಕ ಅತ್ಯುತ್ತಮ 89.83 ಮೀಟರ್‌ ಎಸೆತಗಳೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ.