ಉಡುಪಿ: ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ಸಮಾರೋಪ ಸಮಾರಂಭ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ (ರಿ) ಉಡುಪಿ ಇವರ ಸಂಯೋಜನೆಯಲ್ಲಿ ನಡೆಯುತ್ತಿರುವ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಭಾನುವಾರದಂದು ನಡೆಯಿತು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,’ಮಟ್ಟಿ ಮುರಳೀಧರ ರಾವ್’ ಪ್ರಶಸ್ತಿಯನ್ನು, ಹಿರಿಯ ಅರ್ಥಧಾರಿಗಳಾದ ಎಸ್.ಎಂ.ಹೆಗಡೆ ಮುಡಾರೆ ಇವರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅವರ ಪುತ್ರಿ ಸ್ವೀಕರಿಸಿದರು. ‘ಪೆರ್ಲ ಕೃಷ್ಣ ಭಟ್’ಪ್ರಶಸ್ತಿಯನ್ನು ಜಾನಪದ ವಿದ್ವಾಂಸ ,ಅರ್ಥಧಾರಿಗಳಾದ ಕೆ.ಎಲ್.ಕುಂಡಂತಾಯ ಇವರಿಗೆ ನೀಡಲಾಯಿತು. ಉಡುಪಿಯ ಮೂಲದ ಯಕ್ಷಗಾನ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ […]

ಕೇರಳಕ್ಕೆ ಮುಂಚಿತವಾಗಿ ಆಗಮಿಸಿದ ಮಾನ್ಸೂನ್: ಜೂನ್ 2 ರೊಳಗೆ ಕರ್ನಾಟಕಕ್ಕೆ ಮುಂಗಾರು ಮಳೆಯ ಸಿಂಚನ

ಬೆಂಗಳೂರು: ನೈಋತ್ಯ ಮಾನ್ಸೂನ್ ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚಿತವಾಗಿ ಭಾನುವಾರವೆ ಕೇರಳಕ್ಕೆ ಆಗಮಿಸಿದ್ದು, ಜೂನ್ 2 ರ ವೇಳೆಗೆ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದು ನಾಲ್ಕು ತಿಂಗಳ ಅವಧಿಯ ಸಾಮಾನ್ಯ ಮಳೆಗಾಲದ ಮುನ್ಸೂಚನೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೇರಳ, ತಮಿಳುನಾಡು, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಭಾರೀ ಮಳೆ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಬೆಳಿಗ್ಗೆ 8.30 ಕ್ಕೆ ದಾಖಲಿಸಿದ ಮಾಹಿತಿಯು ತೋರಿಸಿದೆ. ಕೇರಳದ 14 ಹವಾಮಾನ ಕೇಂದ್ರಗಳಲ್ಲಿ […]

ಅಯೋಧ್ಯೆ ತೆರಳುವ ಮಾರ್ಗದಲ್ಲಿ ಬಸ್-ಟ್ರಕ್ ಮುಖಾಮುಖಿ: ಕರ್ನಾಟಕದ 7 ಪ್ರಯಾಣಿಕರು ಮೃತ್ಯುವಶ, 9 ಮಂದಿ ಗಾಯಾಳು

ಬಹ್ರೈಚ್‌: ಕರ್ನಾಟಕದಿಂದ 16 ಜನರನ್ನು ಅಯೋಧ್ಯೆಗೆ ಹೊತ್ತೊಯ್ಯುತ್ತಿದ್ದ ಬಸ್ ಒಂದು ಬಹ್ರೈಚ್‌ನ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಪ್ರಯಾಣಿಕರು ಅಸುನೀಗಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಈ ಯುಪಿ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಉತ್ತರ ಪ್ರದೇಶದ ಬಹ್ರೈಚ್-ಲಖಿಂಪುರ ಹೆದ್ದಾರಿಯಲ್ಲಿ ಪ್ರವಾಸಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ […]

ಮೇ 31: ಕೇಂದ್ರದ ಯೋಜನಾ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ರಾಷ್ಟ್ರವ್ಯಾಪಿ ಆನ್ಲೈನ್ ಸಂವಾದ-ಚರ್ಚೆ

ಉಡುಪಿ: ರಾಷ್ಟ್ರವು ಭಾರತ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ ಸ್ವತಂತ್ರ ಭಾರತದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸುಸಂದರ್ಭದ ಸ್ಮರಣಾರ್ಥವಾಗಿ ಮಾನ್ಯ ಪ್ರಧಾನ ಮಂತ್ರಿಯವರು ಭಾರತ ಸರ್ಕಾರದ ಒಂಭತ್ತು ಮಂದಿ ಸಚಿವರು/ಇಲಾಖೆಗಳನ್ನು ಒಳಗೊಂಡ 16 ಯೋಜನೆಗಳು/ಕಾರ್ಯಕ್ರಮಗಳ ಕುರಿತು ಫಲಾನುಭವಿಗಳೊಂದಿಗೆ ಇದೇ ಮೇ, 31 ರಂದು ಚರ್ಚೆಯನ್ನು ನಡೆಸುವರು. ಪ್ರಧಾನಿಯವರು ಯಾವ ಯೋಜನೆಗಳ ಫಲಾನುಭವಿಗಳೊಂದಿಗೆ ಪರಸ್ಪರ ಸಂವಾದ ಪ್ರತಿಕ್ರಿಯೆಯಲ್ಲಿ ಭಾಗವಹಿಸುವರೋ ಅಂತಹ ಯೋಜನೆಗಳ ಪಟ್ಟಿಯನ್ನು ಇದರೊಂದಿಗೆ ಅಡಕಗೊಳಿಸಲಾಗಿದೆ. ಈ ಯೋಜನೆಗಳು ನಮ್ಮ ಜನರ ಪೈಕಿ ಕಡು ಬಡವರನ್ನು ಒಳಗೊಳ್ಳುತ್ತಿರುವುದರಿಂದ ಇದಕ್ಕೆ ‘ಗರೀಬ್ […]