ಯು ಪಿ ಎಸ್ ಸಿ ಫಲಿತಾಂಶ: ಬಾಲಕಿಯರದ್ದೇ ಮೇಲುಗೈ, ಮೊದಲ ಮೂರು ಸ್ಥಾನಗಳು ಹುಡುಗಿಯರ ಪಾಲು

ಸೋಮವಾರ ಯು ಪಿ ಎಸ್ ಸಿ ಫಲಿತಾಂಶ ಪ್ರಕಟವಾಗಿದ್ದು, ಮೊದಲ ಮೂರು ಸ್ಥಾನಗಳನ್ನು ಹುಡುಗಿಯರು ಪಡೆದುಕೊಂಡಿದ್ದಾರೆ. ಶ್ರುತಿ ಶರ್ಮಾ ಮೊದಲ ಸ್ಥಾನ, ಅಂಕಿತಾ ಅಗರ್ವಾಲ್ ಎರಡನೇ ಸ್ಥಾನ ಮತ್ತು ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪ್ರಕಾರ, ಸುಮಾರು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ತೇರ್ಗಡೆಯಾಗದವರ ಬಗ್ಗೆ ಸಹಾನುಭೂತಿ ವ್ಯಕ್ತ ಪಡಿಸಿರುವ ಪ್ರಧಾನಿ , “ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗದವರ ನಿರಾಶೆಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಆದರೆ ಇವರು […]

ಹಾರ್ದಿಕ್ ಪಾಂಡ್ಯ ಭವಿಷ್ಯದ ಟೀಂ ಇಂಡಿಯಾ ನಾಯಕ: ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಭಿಲಾಷೆ

ನವದೆಹಲಿ: ಚೊಚ್ಚಲ ಪಂದ್ಯದಲ್ಲೇ ಗುಜರಾತ್ ಟೈಟಾನ್ಸ್‌ ಐಪಿಎಲ್ 2022 ಟ್ರೋಫಿ ಎತ್ತಲು ಕಾರಣನಾದ ತಂಡದ ನಾಯಕ ಹಾರ್ದಿಕ್ ಪಾಂಡ್ಯನನ್ನು ಭವಿಷ್ಯದ ಟೀಂ ಇಂಡಿಯಾ ನಾಯಕನಾಗಿ ನೋಡಲು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಬಯಸುತ್ತಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೈಟಾನ್ಸ್ ಏಳು ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಲೀಗ್ ಟೇಬಲ್‌ನಲ್ಲಿಯೂ ಅಗ್ರಸ್ಥಾನದಲ್ಲಿದ್ದು ಪ್ರತಿಷ್ಠಿತ ಐಪಿಎಲ್ 2022 ಟ್ರೋಫಿಯನ್ನು ಬಗಲಿಗೆ ಹಾಕಿಕೊಂಡಿತು. ಪಾಂಡ್ಯ ಅವರ ನಾಯಕತ್ವದ ಕೌಶಲ್ಯವನ್ನು ಹಲವಾರು ಪ್ರಸ್ತುತ ಮತ್ತು ಮಾಜಿ […]

ಬಿಹಾರದ ಜಮುಯಿಯಲ್ಲಿ 230 ಮಿಲಿಯನ್ ಟನ್ ಚಿನ್ನದ ನಿಕ್ಷೇಪ? ಇರುವೆಗಳಿಂದ ಬಯಲಾಯಿತು ಚಿನ್ನದ ರಹಸ್ಯ!!

ಬಿಹಾರ: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸುಮಾರು 230 ಮಿಲಿಯನ್ ಟನ್ ಚಿನ್ನ ಇರುವ ಬಗ್ಗೆ ಸಮೀಕ್ಷೆಯನ್ನು ಹೊಂದಿದೆ. ಚಿನ್ನದ ಜೊತೆಗೆ ಸುಮಾರು 37.6 ಟನ್ ಖನಿಜ ಅದಿರು ಕೂಡ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಮುಯಿ ಜಿಲ್ಲೆಯಲ್ಲಿ ಚಿನ್ನದ ಹುಡುಕಾಟ ನಡೆಸಲು ನಿತೀಶ್ ಕುಮಾರ್ ಸರ್ಕಾರ ಇತ್ತೀಚೆಗೆ ನಿರ್ಧರಿಸಿದ್ದು, ಈ ಕುರಿತು ಕೇಂದ್ರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ದೇಶದ ಶೇ.44ರಷ್ಟು ಚಿನ್ನದ ನಿಕ್ಷೇಪ ಈ ಪ್ರದೇಶವೊದರಲ್ಲೆ ಇದೆ ಎಂದು […]

ಕೈ ಶಸ್ತ್ರಚಿಕಿತ್ಸೆಯ ಪ್ರವರ್ತಕ ಡಾ ಭಾಸ್ಕರಾನಂದ ಕುಮಾರ್ ಗೆ ಐ ಎಫ್ ಎಸ್ ಎಸ್ ಎಚ್ ಪ್ರಶಸ್ತಿ

ಉಡುಪಿ: ಇಂಡಿಯನ್ ಸೊಸೈಟಿ ಫಾರ್ ಸರ್ಜರಿ ಆಫ್ ದಿ ಹ್ಯಾಂಡ್ ಸಂಸ್ಥೆಯು ಕೈ ಶಸ್ತ್ರಚಿಕಿತ್ಸೆಯ ಪ್ರವರ್ತಕ ಡಾ ಭಾಸ್ಕರಾನಂದ ಕುಮಾರ್ ಅವರನ್ನು ಐ ಎಫ್ ಎಸ್ ಎಸ್ ಎಚ್ ( ಇಂಟರ್ ನ್ಯಾಷನಲ್ ಫ಼ೆಡರೇಶನ್ ಆಫ್ ಸೊಸೈಟೀಸ್ ಫಾರ್ ಸರ್ಜರಿ ಆಫ್ ಹ್ಯಾಂಡ್) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದು, ಐ ಎಫ್ ಎಸ್ ಎಸ್ ಎಚ್ ಸಂಸ್ಥೆಯ ನಾಮನಿರ್ದೇಶನ ಸಮಿತಿಯು ಅದನ್ನು ಅನುಮೋದಿಸಿದೆ. ಜೂನ್ 6 ರಂದು ಲಂಡನ್ ನ ಐ ಎಫ್ ಎಸ್ ಎಸ್ ಎಚ್ ಕಾಂಗ್ರೆಸ್‌ನ […]

ಕೋವಿಡ್ -19ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು 4,000 ರೂಪಾಯಿ: ಪ್ರಧಾನಿ ಮೋದಿ

ದೆಹಲಿ: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ಪ್ರಯೋಜನಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ -19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದೈನಂದಿನ ಅಗತ್ಯಗಳನ್ನು ಪೂರೈಸಲು ವಿವಿಧ ಯೋಜನೆಗಳ ಮೂಲಕ 4,000 ರೂಪಾಯಿಗಳನ್ನು ನೀಡಲಾಗುವುದು ಎಂದು ಸೋಮವಾರ ಘೋಷಿಸಿದರು. ವೃತ್ತಿಪರ ಕೋರ್ಸ್‌ಗಳಿಗಾಗಿ, ಉನ್ನತ ಶಿಕ್ಷಣಕ್ಕಾಗಿ ಯಾರಿಗಾದರೂ ಶಿಕ್ಷಣ ಸಾಲದ ಅಗತ್ಯವಿದ್ದರೆ, ಪಿಎಂ ಕೇರ್ಸ್ ಅದಕ್ಕೆ ಸಹಾಯ ಮಾಡುತ್ತದೆ. ಇದಲ್ಲದೆ, 18 ರಿಂದ 23 ವರ್ಷದೊಳಗಿನವರಿಗೆ ಸ್ಟೈಫಂಡ್ ನೀಡಲಾಗುವುದು ಎಂದು ಅವರು ಹೇಳಿದರು. “ನಾನು ಮಕ್ಕಳೊಂದಿಗೆ […]