ಭಾರತದ ಕೋವಿಡ್ -19 ಚುಚ್ಚುಮದ್ದು ಅಭಿಯಾನವನ್ನು ಶ್ಲಾಘಿಸಿದ ಮೈಕ್ರೋಸಾಫ್ಟ್ ದಿಗ್ಗಜ: ‘ಜಗತ್ತಿಗೆ ಒಂದು ಪಾಠ’ ಎಂದ ಬಿಲ್ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕೋವಿಡ್ -19 ವಿರುದ್ಧ ಚುಚ್ಚುಮದ್ದು ಅಭಿಯಾನದಲ್ಲಿ ಯಶಸ್ಸನ್ನು ಸಾಧಿಸಿರುವ ಭಾರತವನ್ನು ಶ್ಲಾಘಿಸಿದ್ದಾರೆ ಮತ್ತು ಆರೋಗ್ಯ ಫಲಿತಾಂಶವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿದ ಭಾರತದ ರೀತಿಯು ಜಗತ್ತಿಗೆ ಒಂದು ಪಾಠವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಮಾಂಡವಿಯಾ ಟ್ವೀಟ್‌ಗೆ ಟ್ವಿಟರ್‌ನಲ್ಲಿ ಉತ್ತರದ ರೂಪದಲ್ಲಿ ಗೇಟ್ಸ್ ಹೇಳಿಕೆ ಬಂದಿದೆ. ಮೇ 25 ರಂದು ಮನ್ಸುಖ್ ಮಾಂಡವಿಯಾ ವರ್ಲ್ಡ್ ಎಕನಾಮಿಕ್ ಫೋರಮ್ 2022 […]

ಕರಾವಳಿ ಹುಡುಗನ ಕ್ಯಾಮರಾ ಕಣ್ಣುಗಳ ಚಿನ್ನದ ಬೇಟೆ: ಅಮೃತ್ ಬೀಜಾಡಿಯವರ ‘ಥೈಯಂ’ ಛಾಯಾಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ!

ಕುಂದಾಪುರ: ಕರಾವಳಿಯ ಕುಂದಾಪುರದ ಛಾಯಾಗ್ರಾಹಕ ಅಮೃತ್ ಬೀಜಾಡಿಯವರ ‘ಥೈಯಂ’ ಛಾಯಾಚಿತ್ರಕ್ಕೆ ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಯ ಜೊತೆಗೆ ಚಿನ್ನದ ಪದಕ ಲಭಿಸಿದೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೃತ್ ಬೀಜಾಡಿಯ ಕೇರಳದಲ್ಲಿ ಸೆರೆಹಿಡಿದಿದ್ದ ಥೈಯಂ ಛಾಯಾಚಿತ್ರಕ್ಕೆ ಎಫ್ ಎಸ್ ಗೋಲ್ಡ್ ಮೆಡಲ್ ಮತ್ತು ಎಂಟು ಎಕ್ಸೆಪ್ಟನ್ಸ್ ಪ್ರಶಸ್ತಿಗಳು ದೊರಕಿವೆ. ಫೋಟೋಗ್ರಫಿಯನ್ನು ಹವ್ಯಾಸವಾಗಿ ಆರಂಭಿಸಿದ್ದ ಅಮೃತ್ ತದನಂತರ ಅದನ್ನೇ ವೃತ್ತಿಯಾಗಿ ಬೆಳೆಸಿಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಛಾಯಾಚಿತ್ರಗಳಿಗಾಗಿ ಈಗಾಗಾಲೇ ಹೆಸರುವಾಸಿಯಾಗಿರುವ ಅಮೃತ್, ಹೊಸತರ ತುಡಿತದಲ್ಲಿ ಸದಾ […]

ಭಾರತೀಯ ವಾಹನ ಉದ್ಯಮದಲ್ಲಿ ಟಾಟಾ ಮೋಟಾರ್ಸ್ ಮೈಲಿಗಲ್ಲು: ಕಳೆದ ಆರ್ಥಿಕ ವರ್ಷದಲ್ಲಿ 125 ಪೇಟೆಂಟ್‌ ಸಲ್ಲಿಸಿ ದಾಖಲೆ ನಿರ್ಮಾಣ

ನವದೆಹಲಿ: ಹಿಂದಿನ ಹಣಕಾಸು ವರ್ಷದಲ್ಲಿ, ಟಾಟಾ ಮೋಟಾರ್ಸ್ ಪವರ್‌ಟ್ರೇನ್ ನಾವೀನ್ಯತೆಗಳಿಗೆ ಸಂಬಂಧಿಸಿದಂತೆ ಒಟ್ಟು 125 ಪೇಟೆಂಟ್‌ಗಳನ್ನು ಸಲ್ಲಿಸಿದೆ ಎಂದು ಕಂಪನಿ ತಿಳಿಸಿದೆ. ನಿಗಮದ ಪ್ರಕಾರ, ಹಿಂದಿನ ಆರ್ಥಿಕ ವರ್ಷದಲ್ಲಿ ಸಲ್ಲಿಸಲಾದ ಪೇಟೆಂಟ್‌ಗಳ ಸಂಖ್ಯೆಯು ಕಂಪನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚಿನದಾಗಿದೆ. ಒಟ್ಟು 125 ಪೇಟೆಂಟ್‌ ಗಳಲ್ಲಿ, 56 ಪೇಟೆಂಟ್‌ಗಳನ್ನು 2021-22 ಹಣಕಾಸು ವರ್ಷದಲ್ಲಿ ಅನುಮೋದಿಸಲಾಗಿದೆ. “ಹೊಸ ಇಂಧನ ಪರಿಹಾರಗಳು, ಸುರಕ್ಷತೆ, ಉತ್ಪನ್ನ ಕಾರ್ಯಕ್ಷಮತೆ, ಮಾಲೀಕತ್ವದ ವೆಚ್ಚ ಮತ್ತು ಡಿಜಿಟಲೀಕರಣದ ಕ್ಷೇತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಹೊಸ ಮಾನದಂಡಗಳನ್ನು […]

ದುಡಿಮೆಯೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಪುನೀತ್ ಸಾಧನೆ ಶ್ಲಾಘನೀಯ: ಯಶ್ ಪಾಲ್ ಸುವರ್ಣ

ಮಲ್ಪೆ: ಮೀನುಗಾರಿಕಾ ಬಂದರಿನಲ್ಲಿ ಮುಂಜಾನೆ ಕೆಲಸಮಾಡಿ ಮಲ್ಪೆ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಸಿದ ಪುನೀತ್ ಸಾಧನೆ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದರು. ಮೀನು ಮಾರಾಟ ಫೆಡರೇಷನ್ ಹಂಗಾರಕಟ್ಟೆ ಶಾಖೆಯ ಬ್ಯಾಂಕಿಂಗ್ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪುನೀತ್ ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಫೆಡರೇಶನ್ ವತಿಯಿಂದ […]

ರಾಜ್ಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ

ಉಡುಪಿ: ಕರ್ನಾಟಕ ರಾಜ್ಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ 2021 -2022 ನೇ ಸಾಲಿನ ಮೊದಲ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಅಧ್ಯಕ್ಷರಾದ ವಿಮಲಾ ಎಸ್ ಬಾಯರಿ ಅವರು ವಹಿಸಿದ್ದರು. ರಾಜ್ಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಅಧ್ಯಕ್ಷೆ ‌ಚಂದ್ರಿಕಾ ಧಮ್ಮಳ್ಳಿ, […]