ಇತಿಹಾಸ ಗೊತ್ತಿದ್ದಾಗ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ : ಪ್ರತಾಪ್ ಸಿಂಹ

ಉಡುಪಿ: ಇತಿಹಾಸ ಗೊತ್ತಿದ್ದಲ್ಲಿ ಮಾತ್ರ ಇತಿಹಾಸವನ್ನು ಸೃಷ್ಠಿಸಲು ಸಾಧ್ಯ. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಪ್ರತಿಯೊಬ್ಬರು ತಿಳಿಯುವುದರೊಂದಿಗೆ ದೇಶ ಪ್ರೇಮವನ್ನು ಹಾಗೂ ದೇಶಾಭಿಮಾನವನ್ನು ಬೆಳೆಸಿಕೊಂಡು ನಾವು ಪಡೆದಿರುವ ಸಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು. ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. […]

ಉಡುಪಿಯಲ್ಲಿ ಸದ್ಗುರು ಭಾರತ ಸ್ವಾಗತ ಕಾರ್ಯಕ್ರಮ

ಉಡುಪಿ: ಇಲ್ಲಿನ ಮಣ್ಣು ಉಳಿಸಿ ಸ್ವಯಂಸೇವಕರು ಮೇ 28 ರಂದು ಉಡುಪಿಯ ಕಾರ್ ಸ್ಟ್ರೀಟ್‌ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಭಾರತ ಪ್ರಯಾಣದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ನಡೆಸಿದರು. ಮಣ್ಣು ಉಳಿಸುವ ಉಪಕ್ರಮವನ್ನು ಉತ್ತೇಜಿಸಲು ಜಗತ್ತಿನಾದ್ಯಂತ ಭೇಟಿ ನೀಡಿದ ನಂತರ ಸದ್ಗುರುಗಳು ದೇಶಕ್ಕೆ ಮರಳಿದ್ದು ಅವರನ್ನು ಸ್ವಾಗತಿಸಲು ಈ ಕಾರ್ಯಕ್ರಮವನ್ನು ನಡೆಸಲಾಯಿತು. ಮಹೇಶ್ ರಾವ್ ಅವರಿಂದ ರಂಗೋಲಿ, ಶ್ವೇತಾ ಹೆಬ್ಬಾರ್ ಮತ್ತು ತಂಡದಿಂದ ಜಾನಪದ ನೃತ್ಯ, ಅರ್ಜುನ್ ಮತ್ತು ಧೀರಜ್ ಅವರಿಂದ ಯಕ್ಷಗಾನ, ಝೇಂಕಾರ್ ತಂಡದ ಭಜನೆ, ಅಂಬಾ […]

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರ ಉದ್ಘಾಟನೆ

ಮಣಿಪಾಲ: ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗ ಮತ್ತು ಹಿಮೋಫಿಲಿಯಾ ಸೊಸೈಟಿ, ಮಣಿಪಾಲ ಇವುಗಳ ಸಹಯೋಗದೊಂದಿಗೆ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರವನ್ನು ಮೇ 28 ರಂದು ಉದ್ಘಾಟಿಸಲಾಯಿತು. ಹಿಮೋಫಿಲಿಯಾ ಅನುವಂಶಿಕ ಮತ್ತು ಗುಣಪಡಿಸಲಾಗದ ಜೀವಮಾನವಿಡೀ ಇರುವ ರಕ್ತಸ್ರಾವದ ಕಾಯಿಲೆಯಾಗಿದೆ. ಇದು ಹತ್ತು ಸಾವಿರ ಪುರುಷರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ. ಹಿಮೋಫಿಲಿಯಾ ರೋಗಿಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಅಂಶಗಳ ಕೊರತೆ ಅಥವಾ ಅನುಪಸ್ಥಿತಿಯಿಂದ ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವುದಿಲ್ಲ. ಈ ಪುನರಾವರ್ತಿತ ರಕ್ತಸ್ರಾವದ […]