ಕಲ್ಸಂಕ ಟ್ರಾಫಿಕ್ ಮಧ್ಯೆ ನಿಂತಿದ್ದ ಅಂಬ್ಯುಲೆನ್ಸ್ ನಲ್ಲಿ ಧಿಢೀರ್ ಬೆಂಕಿ: ಆತಂಕ ಸೃಷ್ಟಿ

ಉಡುಪಿ: ಉಡುಪಿ ನಗರದ ಕಲ್ಸಂಕ ಸಮೀಪ ಮುಖ್ಯ ರಸ್ತೆಯಲ್ಲಿ ಅಂಬ್ಯುಲೆನ್ಸ್ ವಾಹನದಲ್ಲಿ ಧಿಡೀರ್ ಬೆಂಕಿ ಕಾಣಿಸಿಕೊಂಡು ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಸೋಮವಾರ ಸಂಜೆ ನಡೆದಿದೆ. ಸಿಟಿ ಬಸ್ಟ್ಯಾಂಡ್ ಕಲ್ಸಂಕ ರಸ್ತೆಯಲ್ಲಿ ಎಂದಿನಂತೆ ಟ್ರಾಫಿಕ್ ಜಾಮ್ ಆಗಿದ್ದು, ಈ ಮಧ್ಯೆ ಟ್ರಾಫಿಕ್ ನಲ್ಲಿ ನಿಂತಿದ್ದ ಅಂಬ್ಯುಲೆನ್ಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಟ್ರಾಫಿಕ್ ಪೊಲೀಸರು, ಸಾರ್ವಜನಿಕರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಆಗ್ನಿಶಮಾಕ‌ ದಳಕ್ಕೆ ಮಾಹಿತಿ ನೀಡಿದ್ದು, ಕೆಲವೇ […]

ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆ? ಮುಗಿಯುವುದೆ ಶತಮಾನಗಳಿಂದ ಕಾಯುತ್ತಿರುವ ನಂದಿಯ ಪ್ರತೀಕ್ಷೆ?

ಉತ್ತರಪ್ರದೇಶ: ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆಯ ಕೊನೆಯ ದಿನ, ಬಾವಿಯೊಳಗೆ ಶಿವಲಿಂಗ ಕಂಡುಬಂದಿದೆ ಎಂದು ವಕೀಲ ವಿಷ್ಣು ಜೈನ್ ಪ್ರತಿಪಾದಿಸಿದ್ದಾರೆ. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಆಜ್ ತಕ್/ಇಂಡಿಯಾ ಟುಡೇ ಟಿವಿ ಜೊತೆ ಫೋನ್ ಮೂಲಕ ಶಿವಲಿಂಗದ ಬಗ್ಗೆ ಮಾತನಾಡಿದ ಜೈನ್, ಅದರ ರಕ್ಷಣೆಗಾಗಿ ನಾಗರಿಕ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ. ಇದಾದ ಕೆಲವೇ ಗಂಟೆಗಲ್ಲಿ ನಾಗರಿಕ ನ್ಯಾಯಾಲಯವು ವಿವಾದಿತ ಪ್ರದೇಶವನ್ನು ಸೀಲ್ ಮಾಡಿ ಜನರ ಪ್ರವೇಶವನ್ನು ನಿಷೇಧಿಸಲು ಆದೇಶ […]

ಮೇ 17 ರಿಂದ 21ವರೆಗೆ ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ: ಕರ್ನಾಟಕ ಕರಾವಳಿಯ ವಿವಿಧ ಭಾಗಗಳಲ್ಲಿ ಮೇ 17 ರಿಂದ 21ವರೆಗೆ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉದ್ದಕ್ಕೂ ಸಮುದ್ರದಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ತಲುಪುವ ಸಾಧ್ಯತೆ ಇರುವುದರಿಂದ ಮುಂದಿನ 24 ಗಂಟೆಗಳವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮೇ 19 ರಂದು 205 ಮಿಮೀ, ಮೇ 18 ಮತ್ತು 20 ರಂದು 115 ಮಿಮೀ ಹಾಗೂ ಮೇ 17 ಮತ್ತು […]

ಉಡುಪಿ ಹುಡುಗನ ಪ್ಯಾನ್ ಇಂಡಿಯಾ ಕಮಾಲ್!! ಪಂಚ ಭಾಷೆಯಲ್ಲಿ ಬಿಡುಗಡೆಯಾಯಿತು ‘ಚಾರ್ಲಿ777’ ಟ್ರೈಲರ್!! ಎರಡೇ ಗಂಟೆಗಳಲ್ಲಿ ಟ್ರೈಲರ್ ವೈರಲ್

ಉಡುಪಿ: ಅವಿಭಜಿತ ದ.ಕ ಜಿಲ್ಲೆಯವರಿಗೆ ಪಕ್ಕದ ಮನೆಯ ಹುಡುಗನಂತಿರುವ ರಕ್ಷಿತ್ ಶೆಟ್ಟಿ ಅಭಿನಯಿಸಿರುವ, ಕೆ. ಕಿರಣ್ ರಾಜ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಚಾರ್ಲಿ777’ ಟ್ರೈಲರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಪಂಚ ಭಾಷೆಯಲ್ಲಿ ಏಕಕಾಲಕ್ಕೆ ಚಾರ್ಲಿ777 ಟ್ರೇಲರ್ ಬಿಡುಗಡೆಯಾಗಿದ್ದು, ‘ಕೆ.ಜಿ.ಎಫ್ 2’ ಬಳಿಕದ ಪ್ಯಾನ್ ಇಂಡಿಯಾ ಚಲನ ಚಿತ್ರ ಇದಾಗಲಿದೆ. ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಎಂಬ ಒಂದು ನಾಯಿಯ ಸುತ್ತ ಗಿರಕಿ ಹೊಡೆಯುವ ಕಥಾ ಹಂದರ ಹೊಂದಿರುವ […]

ಸಿಎ ಗಳಿಗಾಗಿ 3 ದಿನಗಳ ರೆಸಿಡೆನ್ಶಿಯಲ್ ರಿಫ್ರೆಶ್ ಕೋರ್ಸ್ ಆಯೋಜನೆ

ಮಡಿಕೇರಿ: ಐಸಿಎಐ ಯ ಎಸ್ ಐ ಆರ್ ಸಿ ಯ ಬೆಂಗಳೂರು ಶಾಖೆಯು ಮಂಗಳೂರು ಮತ್ತು ಉಡುಪಿ ಶಾಖೆಯೊಂದಿಗೆ ಜಂಟಿಯಾಗಿ ಸಿಎ ಮತ್ತು ಕುಟುಂಬದ ಸದಸ್ಯರುಗಳಿಗಾಗಿ 3 ದಿನಗಳ ರೆಸಿಡೆನ್ಶಿಯಲ್ ರಿಫ್ರೆಶ್ ಕೋರ್ಸ್ ಅನ್ನು ಆಯೋಜಿಸಿತ್ತು. ಕಾರ್ಯಕ್ರಮವು ಮೇ 6 ರಿಂದ 8 ವರೆಗೆ ಮಡಿಕೇರಿಯ ಪ್ಯಾಡಿಂಗ್‌ಟನ್ ರೆಸಾರ್ಟ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಅಪ್ಪಚ್ಚು ರಂಜನ್, ಬೆಂಗಳೂರು ಶಾಖೆಯ ಅಧ್ಯಕ್ಷ ಸಿ.ಎ. ಶ್ರೀನಿವಾಸ ಟಿ, ಸಿಎ ಪ್ರಸನ್ನ ಶೆಣೈ, ಮಂಗಳೂರು ಶಾಖೆಯ ಅಧ್ಯಕ್ಷ, ಸಿಎ […]