ಕಿನ್ನಿಮೂಲ್ಕಿ ಶ್ರೀ ಕೃಷ್ಣಮೂರ್ತಿ ಆಚಾರ್ಯ ಹಾಗೂ ಅವರ ಅಭಿಮಾನಿ ಬಳಗದಿಂದ ತಂಪು ಪಾನೀಯ ವ್ಯವಸ್ಥೆ

ಉಡುಪಿ: ಮೇ 14 ರಂದು ನಡೆದ ಸಹಬಾಳ್ವೆ ಉಡುಪಿ ಮತ್ತು ಕರ್ನಾಟಕದ ಸಮಸ್ತ ಸೌಹಾರ್ದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಸಾಮರಸ್ಯ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ತಂಪು ಪಾನೀಯ ವ್ಯವಸ್ಥೆಯನ್ನು ಮಾಡಿದ ಕಿನ್ನಿಮೂಲ್ಕಿ ಶ್ರೀ ಕೃಷ್ಣಮೂರ್ತಿ ಆಚಾರ್ಯ ಹಾಗೂ ಅವರ ಅಭಿಮಾನಿ ಬಳಗದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು

ಕರ್ತವ್ಯ ಪ್ರಜ್ಞೆಗೊಂದು ಅಪೂರ್ವ ನಿದರ್ಶನ: ಸ್ವಚ್ಛ ವಾಹಿನಿ ವಾಹನವನ್ನು ಖುದ್ದು ಚಲಾಯಿಸುವ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮಾಡುವ ಸ್ವಚ್ಛ ವಾಹಿನಿ ವಾಹನವನ್ನು ಖುದ್ದು ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಸಾ ಚಲಾಯಿಸಿ ಕರ್ತವ್ಯ ಪ್ರಜ್ಞೆಗೊಂದು ಉದಾಹರಣೆಯಾಗಿದ್ದಾರೆ. ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ತನ್ನ ಕರ್ತವ್ಯದ ಜೊತೆಗೆ ವಾಹನ ಚಾಲನೆಯ ಹೊಸ ಕೆಲಸವನ್ನು ಮೇ ಮೊದಲನೆ ವಾರದಿಂದ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ನಫೀಸಾ, ”ಮನೆಯಲ್ಲಿ ವಾಹನಗಳನ್ನು ಓಡಿಸುವ ನೈಪುಣ್ಯತೆ ಇರುವುದು ನನಗೆ […]

ಸಿಎ ಗಳಿಗಾಗಿ ಸಹಕಾರ ಸಂಘದ ಆಡಿಟ್ ಕುರಿತು ಕಾರ್ಯಾಗಾರ

ಉಡುಪಿ: ಐಸಿಎಐ ಸಂಸ್ಥೆಯ ಎಸ್ ಐ ಆರ್ ಸಿ ನ ಬೆಂಗಳೂರು ಶಾಖೆಯು ಸಿಎಗಳಿಗಾಗಿ ಸಹಕಾರ ಸಂಘದ ಆಡಿಟ್ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಹಕಾರಿ ಲೆಕ್ಕ ಪರಿಶೋಧನಾ ಇಲಾಖೆಯ ನಿರ್ದೇಶಕರಾದ ಆದರ್ಶ್ ಕುಮಾರ್ ಎನ್ ಆರ್ ಕೆಕಾಸ್ ಭಾಗವಹಿಸಿದ್ದರು. ಬೆಂಗಳೂರು ಶಾಖೆಯ ಅಧ್ಯಕ್ಷ ಸಿಎ. ಶ್ರೀನಿವಾಸ ಟಿ, ಸಿಎ ಕೋಥಾ ಎಸ್ ಶ್ರೀನಿವಾಸ್ ಸಿಸಿಎಂ, ಸಿಎ ಪನ್ನರಾಜ್ ಉಪಾಧ್ಯಕ್ಷ ಎಸ್‌ಐಆರ್‌ಸಿ ಸಿಎ ಗೀತಾ ಎಬಿ, ಆರ್‌ಸಿಎಂ, ಶ್ರೀ ಸಿಬಿ ಚಿಕ್ಕಾಡಿ, […]

ಪಿಎಸ್ಐ ನೇಮಕಾತಿ ಹಗರಣ: ಪ್ರಧಾನಿ ಮೋದಿಗೆ ರಕ್ತದಲ್ಲಿ ಬರೆದ ಅನಾಮಧೇಯ ಪತ್ರ ವೈರಲ್!

ಬೆಂಗಳೂರು : ಹಗರಣಗಳಿಂದ ಹತಾಶರಾಗಿರುವ ಪಿಎಸ್ಐ ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಎಸ್ಐ ಅಭ್ಯರ್ಥಿಗಳು ಬರೆದಿದ್ದಾರೆ ಎನ್ನಲಾಗುವ ಈ ಪತ್ರದಲ್ಲಿ ಯಾರದ್ದೇ ಹೆಸರು ಉಲ್ಲೇಖವಾಗಿಲ್ಲ. ರಾಜ್ಯದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಸುದ್ದಿಯ ನಡುವೆ, ಪಿಎಸ್ಐ ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ಸಂಚಲನ ಮೂಡಿಸಿದೆ. ಪಿಎಸ್ ಐ ಪರೀಕ್ಷೆಯ ಅಕ್ರಮದಿಂದಾಗಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಅನ್ಯಾಯ ಮಾಡಿದವರನ್ನ ಜೈಲಿಗೆ […]

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ: ರಾಜ್ಯದಲ್ಲಿನ 5 ವರ್ಷದೊಳಗಿನ ಪ್ರತಿ ಮೂರನೇ ಮಗುವಿನ ಬೆಳವಣಿಗೆ ಕುಂಠಿತ

ಬೆಂಗಳೂರು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ಮತ್ತು ಕ್ಷೀರ ಭಾಗ್ಯದಂತಹ ರಾಜ್ಯ ಸರ್ಕಾರದ ಯೋಜನೆಗಳ ಹೊರತಾಗಿಯೂ, ಕರ್ನಾಟಕದಲ್ಲಿ ಐದು ವರ್ಷದೊಳಗಿನ 35% ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಮೇ 3 ರಂದು ಬಿಡುಗಡೆ ಮಾಡಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ರ ಪ್ರಕಾರ, ರಾಜ್ಯದಲ್ಲಿನ 5 ವರ್ಷದೊಳಗಿನ ಪ್ರತಿ ಮೂರನೇ ಮಗುವಿನ ಬೆಳವಣಿಗೆ ಕುಂಠಿತವೆಂದು ತಿಳಿಸಲಾಗಿದೆ. ತೆಳ್ಳಗಿನ ತಾಯಂದಿರಿಗೆ ಜನಿಸುವ ಮಕ್ಕಳು ಕುಂಠಿತಗೊಳ್ಳುತ್ತಾರೆ ಮತ್ತು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಕುಂಠಿತಗೊಳ್ಳುವಿಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ವಯಸ್ಸಿಗಿಂತ ಗಿಡ್ಡವಾಗಿರುವುದು ಅಥವಾ […]