ಕುಂದಾಪುರ ವೆಂಕಟರಮಣ ಪದವಿ  ಪೂರ್ವ ಕಾಲೇಜಿನಲ್ಲಿ  ಪ್ರೇರಣಾ ಶಿಬಿರ

ಕುಂದಾಪುರ: ವೆಂಕಟರಮಣ ಪದವಿ  ಪೂರ್ವ ಕಾಲೇಜಿನಲ್ಲಿ ಮೇ 13 ಶುಕ್ರವಾರದಂದು  ದ್ವಿತೀಯ ಪಿಯುಸಿ  ವಿಜ್ಞಾನ ವಿಭಾಗದ  ವಿದ್ಯಾರ್ಥಿಗಳಿಗೆ  ಆಯೋಜಿಸಲಾಗಿದ್ದ ಪ್ರೇರಣಾ ಶಿಬಿರದಲ್ಲಿ ಕುಂದಾಪುರ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಕೋಟೇಶ್ವರ ಇಲ್ಲಿನ ವೈದ್ಯರುಗಳಾದ ಡಾ. ಅಕ್ಷತಾ  ಹಾಗೂ  ಡಾ. ವಾಣಿಶ್ರೀ ಐತಾಳ  ಮುಖ್ಯ ಅತಿಥಿಗಳಾಗಿ  ಆಗಮಿಸಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆಯನ್ನು ಸಾಧಿಸುವ  ಮಾರ್ಗಗಳು ಹಾಗೂ ಇಂದಿನ ವೈಜ್ಞಾನಿಕ ಕಂಪ್ಯೂಟರ್ ಯುಗದ  ಧಾವಂತದ  ಬದುಕಿನಲ್ಲಿ ವಿದ್ಯಾರ್ಥಿಗಳು ಮೊಬೈಲ್, ಇಂಟರ್ ನೆಟ್ ನ ಅತಿಯಾದ ಬಳಕೆಯಿಂದ  ದೂರ ಇರುವುದರ  ಮೂಲಕ  ಭವ್ಯ  ಭವಿಷ್ಯ  ರೂಪಿಸಿಕೊಳ್ಳುವುದು ಹೇಗೆ ಎನ್ನುವುದರ  ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ   ಉಪನ್ಯಾಸಕ  ಶ್ರೀ ಅಶೋಕ್  ಕಾರ್ಯಕ್ರಮ ನಿರೂಪಿಸಿದರು.