ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರ, ದೊಡ್ಡಣ್ಣಗುಡ್ಡೆ ಇದರ 16 ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಉಡುಪಿ: ಶ್ರಿ ಚಕ್ರಪೀಠ ಸುರಪೂಜಿತ, ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರ, ದೊಡ್ಡಣ್ಣಗುಡ್ಡೆ ಇದರ 16 ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ದಿನಾಂಕ 15 ಮೇ ರವಿವಾರದಿಂದ 17 ಮೇ ಮಂಗಳವಾರದವರೆಗೆ ನಡೆಯಲಿದೆ.

ಮೇ 15 ರವಿವಾರದಂದು ಸಂಜೆ 6 ರಿಂದ ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ವಾಸ್ತು ರಾಕ್ಷೋಘ್ನಾದಿ ಪ್ರಕ್ರಿಯೆ, ಆದಿವಾಸ ಪ್ರಕ್ರಿಯೆ ಜರುಗಲಿದೆ.

ಮೇ16 ಸೋಮವಾರದಂದು ಬೆಳಿಗ್ಗೆ 7ರಿಂದ ಸಪರಿವಾರ ದೇವರುಗಳ ಪ್ರಧಾನ ಹೋಮ, ಕಲಶಾಭಿಷೇಕ. ಬೆಳಿಗ್ಗೆ 9.32ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಪಂಚವಿಂಶತಿ ದ್ರವ್ಯ ಮಿಳಿತ ಅಷ್ಟೋತ್ತ ಶತ ಬ್ರಹ್ಮ ಕುಂಭಾಭಿಷೇಕ, ಪ್ರಸನ್ನ ಪೂಜೆ, ಮಹಾ ಪೂಜೆ, ಪಲ್ಲ ಪೂಜೆ, ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ 7 ರಿಂದ ಆರಾಧನಾ ರಂಗಪೂಜೆ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ವಸಂತ ಪೂಜೆ, ರಾತ್ರಿ ಪೂಜೆ, ಪ್ರಸಾದ ವಿತರಣೆ

ಮೇ 17 ಮಂಗಳವಾರದಂದು ಸಂಜೆ 8 ರಿಂದ ಶ್ರೀ ಚಾಂಡಿಕಾಯಾಗ, ಬ್ರಾಹ್ಮಣ ಸುವಾಸಿನಿ ಆರಾಧನೆ, ಕುಮಾರಿ ಪೂಜೆ, ಮಹಾ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿರುವುದು.

ಸರ್ವರಿಗೂ ಆದರದ ಸ್ವಾಗತ ಬಯಸುವ ಶ್ರೀ ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿಗಳು