ಕರಾವಳಿಯ ಪ್ರತ್ಯೇಕ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಸಾಧ್ಯತೆ

ಉಡುಪಿ: ಏಪ್ರಿಲ್ 26 ರಂದು ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಉಳಿದಂತೆ ಏಪ್ರಿಲ್ 27, 28, 29 ಮತ್ತು 30 ರಂದು ಹವಾಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.

ಕೋವಿಡ್-19 ನಾಲ್ಕನೇ ಅಲೆ ಹಿನ್ನೆಲೆ: ಮತ್ತೆ ಮಾಸ್ಕ್ ಬಳಕೆ ಕಡ್ಡಾಯವೆಂದ ಆರೋಗ್ಯ ಸಚಿವ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ನಿಯಂತ್ರಣದ ಕುರಿತು ಟಾಸ್ಕ್ ಫೋರ್ಸ್ ಸಭೆ ನಡೆದಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾರ್ಗಸೂಚಿ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಸಭೆ ನಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದೂ ಒಂದು ಎಂದಿರುವ ಅವರು ಈ ಬಗ್ಗೆ ಶೀಘ್ರವೆ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದ್ದಾರೆ. ಇದರ ಜೊತೆ ಸಭೆ […]

ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ಕಲೆಕ್ಷನ್: 800 ಕೋಟಿ ರೂಪಾಯಿ ದಾಟುವ ನಿರೀಕ್ಷೆ!!

ನಟ ಯಶ್ ಅವರ ಚಿತ್ರ ‘ಕೆಜಿಎಫ್: ಚಾಪ್ಟರ್ 2’ ಕ್ರೇಜ್ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ವಿಶ್ವಾದ್ಯಂತ ಬಾಕ್ಸ್ ಆಫೀಸ್ ಅನ್ನು ಕೊಳ್ಳೆಹೊಡೆಯುತ್ತಿರುವ ಈ ಚಿತ್ರ ಮೊದಲನೆ ವಾರದಲ್ಲಿ 720.31 ಕೋಟಿ ರೂಪಾಯಿಗಳನ್ನು ಗಲ್ಲಾ ಪೆಟ್ಟಿಗೆಯಿಂದ ಬಾಚಿಕೊಂಡಿದ್ದು, ಎರಡನೇ ವಾರಾಂತ್ಯದಲ್ಲಿ ಚಿತ್ರವು ಬರೋಬ್ಬರಿ 800 ಕೋಟಿ ರೂಪಾಯಿಗಳನ್ನು ದಾಟುವ ನಿರೀಕ್ಷೆ ಇದೆ. ಕೆಜಿಎಫ್ ಚಾಪ್ಟರ್ 2 ಗಳಿಕೆ: ಮೊದಲನೆ ವಾರ – ₹ 720.31 ಕೋಟಿ ಎರಡನೇ ವಾರ ದಿನ 1 – ₹ 30.18 ಕೋಟಿ ದಿನ […]

370 ನೇ ವಿಧಿಯ ರದ್ದತಿಯನ್ನು ಪ್ರಶ್ನಿಸುವ ಅರ್ಜಿಗಳ ಆಲಿಕೆ: 5 ನ್ಯಾಯಾಧೀಶರ ಪೀಠವನ್ನು ಮರು-ರಚಿಸಲು ಒಪ್ಪಿದ ಸುಪ್ರೀಂ ಕೋರ್ಟ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಬೇಸಿಗೆ ರಜೆಯ ನಂತರ ಆಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ರಾಜ್ಯದಲ್ಲಿ ನಡೆಸಲಾಗುತ್ತಿರುವ ಡಿಲಿಮಿಟೇಶನ್ ಕಸರತ್ತನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಶೇಖರ್ ನಾಫಡೆ ಅವರ ಸಲ್ಲಿಕೆಗಳನ್ನು […]

ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ: ಮಗು ಪಡೆಯಲು ದಂಬಾಲು ಬಿದ್ದ ಜನತೆ!

ಚಾಮರಾಜನಗರ: ಖಾಸಗಿ ಬಸ್ ನಿಲ್ದಾಣದಲ್ಲಿ ನವಜಾತ ಗಂಡು ಮಗುವನ್ನು ಬ್ಯಾಗ್ ನಲ್ಲಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ಭಾನುವಾರ (ಏಪ್ರಿಲ್ 24) ರಾತ್ರಿ ನಡೆದಿದ್ದು, ಮಗುವನ್ನು ಪಡೆಯಲು ಜನತೆ ದಂಬಾಲು ಬಿದ್ದಿರುವ ಬಗ್ಗೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು ಏಳು ದಿನಗಳ ಹಿಂದೆ ಜನಿಸಿರುವ ಹಸುಗೂಸೊಂದನ್ನು ಬಿಟ್ಟು ಹೋಗಲಾಗಿದೆ. ಯಾರೂ ಇಲ್ಲದ ಜಾಗದಲ್ಲಿ ಮಗು ಅಳುತ್ತಿದ್ದ ಶಬ್ದ ಕೇಳಿ ಬ್ಯಾಗ್ ಬಳಿ ಬಂದು ನೋಡಿದ ಸಾರ್ವಜನಿಕರಿಗೆ ಬ್ಯಾಗ್ ನೊಳಗೆ ನವಜಾತ ಗಂಡು […]