ಬ್ರಹ್ಮಾವರ: ನಾಳೆ (ಜ.11) ವೈಜ್ಞಾನಿಕ ತೆಂಗು ಬೆಳೆ ನಿರ್ವಹಣೆ ಕಾರ್ಯಾಗಾರ

ಬ್ರಹ್ಮಾವರ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರು, ಗ್ರಾಮ ಪಂಚಾಯತ್ ಐರೋಡಿ ಹಾಗೂ ಕಲ್ಪಸಿರಿ ಎಂಟರ್‌ ಪ್ರೈಸಸ್, ಸಾಸ್ತಾನ ಇವರ ಆಶ್ರಯದಲ್ಲಿ ವೈಜ್ಞಾನಿಕ ತೆಂಗು ಬೆಳೆ ನಿರ್ವಹಣೆ ಕಾರ್ಯಾಗಾರವು ಸಾಸ್ತಾನ ಚೆನ್ನಕೇಶವ ಕಲ್ಯಾಣ ಮಂಟಪದಲ್ಲಿ ಜ.11ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಎಚ್. ಎಸ್. ಅವರು ವೈಜ್ಞಾನಿಕ ತೆಂಗು ಬೇಸಾಯ […]

ಕೋಟ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

  ಕೋಟ: ಬ್ರಹ್ಮಾವರ ತಾಲ್ಲೂಕಿನ ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. 60 ವರ್ಷ ಪ್ರಾಯದ ನರಸಿಂಹ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿರುವ ಅಳಿಯ ವಿನೋದ ಎಂಬವರ ಮನೆ ಇಂದು ಬಂದಿದ್ದರು. ವಿನೋದ ಅವರು ಮಾವ ನರಸಿಂಹ ಅವರಿಗೆ  ಊಟ ಹಾಕಿದ್ದರು. ಊಟ ಮಾಡಿದ ಬಳಿಕ ಮನೆಯ ಹೊರಗೆ ಕುಳಿತಿದ್ದ ನರಸಿಂಹ ಅವರು ಬೆಳಿಗ್ಗೆ ಸುಮಾರು 10 ಗಂಟೆಗೆ ಮನೆಯ ಬಳಿ […]

ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಸಿಎಂ ಟ್ವೀಟ್ ಮಾಡಿ ತಿಳಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ.

ಸೀಮಿತ ಕಲಾತಂಡಗಳೊದಿಗೆ ಸರಳವಾಗಿ ಪರ್ಯಾಯೋತ್ಸವ ಮೆರವಣಿಗೆ ನಡೆಸಲು ತೀರ್ಮಾನ: ನಗರದಲ್ಲಿ ಸಚಿವ ಸುನಿಲ್ ಕುಮಾರ್

ಕೋವಿಡ್ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಭಾವೀ ಪರ್ಯಾಯ ಶ್ರೀಗಳ ಅಪೇಕ್ಷೆಯಂತೆ ಸೀಮಿತ ಕಲಾತಂಡಗಳೊದಿಗೆ ಪರ್ಯಾಯೋತ್ಸವ ಮೆರವಣಿಗೆ, ಧಾರ್ಮಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ನಗರ ಜಿಪಂ ಸಭಾಂಗಣದಲ್ಲಿ ನಡೆದ ಪರ್ಯಾಯೋತ್ಸವ ಸಮಿತಿ ಹಾಗೂ ಅಧಿಕಾರಿಗಳ ಸಭೆಯ ಬಳಿಕ, ಸಚಿವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.  ಸಾರ್ವಜನಿಕರ ಪ್ರವೇಶಕ್ಕೆ ನಿಬಂಧನೆ ಹಾಕಲಾಗಿದ್ದು, ಹೆಚ್ಚು ಜನ ಸೇರಿದಂತೆ ಈಗಾಗಲೇ ಮನವಿ ಮಾಡಲಾಗಿದೆ. […]

ಉಡುಪಿ: ಹಿಂದೂ ದೇವರ ಅವಹೇಳನ ಖಂಡಿಸಿ ನಾಳೆ (ಜ.11) ಜಿಲ್ಲೆಯ ಧಾರ್ಮಿಕ‌ ಕ್ಷೇತ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಉಡುಪಿ: ಕರಾವಳಿಯಾದ್ಯಂತ ನಡೆಯುತ್ತಿರುವ ಹಿಂದೂ ದೇವರ ಅವಹೇಳನ, ಅಪಹಾಸ್ಯ ಹಾಗೂ ದೇವಸ್ಥಾನಗಳನ್ನು ಅಪವಿತ್ರಗೊಳಿಸಿ ವಿಕೃತಿ ಮೆರೆದಿರುವಂತಹ ಕೃತ್ಯಗಳನ್ನು ಖಂಡಿಸಿ ಜ.11 ರಂದು ಉಡುಪಿ ಜಿಲ್ಲೆಯಾದ್ಯಂತ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಭಜರಂಗದಳದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕರಾವಳಿ ಭಾಗದಲ್ಲಿ ಹಲವಾರು ಸಮಯಗಳಿಂದ ದೇವರ, ದೈವಗಳಿಗೆ ಅಪಹಾಸ್ಯ, ನಿಂದನೆ […]