ಬ್ರಹ್ಮಾವರ: ನಾಳೆ (ಜ.11) ವೈಜ್ಞಾನಿಕ ತೆಂಗು ಬೆಳೆ ನಿರ್ವಹಣೆ ಕಾರ್ಯಾಗಾರ

ಬ್ರಹ್ಮಾವರ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರು, ಗ್ರಾಮ ಪಂಚಾಯತ್ ಐರೋಡಿ ಹಾಗೂ ಕಲ್ಪಸಿರಿ ಎಂಟರ್‌ ಪ್ರೈಸಸ್, ಸಾಸ್ತಾನ ಇವರ ಆಶ್ರಯದಲ್ಲಿ ವೈಜ್ಞಾನಿಕ ತೆಂಗು ಬೆಳೆ ನಿರ್ವಹಣೆ ಕಾರ್ಯಾಗಾರವು ಸಾಸ್ತಾನ ಚೆನ್ನಕೇಶವ ಕಲ್ಯಾಣ ಮಂಟಪದಲ್ಲಿ ಜ.11ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಎಚ್. ಎಸ್. ಅವರು ವೈಜ್ಞಾನಿಕ ತೆಂಗು ಬೇಸಾಯ ಬಗ್ಗೆ,

ಡಾ. ಸಚಿನ್, ಯು. ಎಸ್, ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ವಿಷಯ: ತೆಂಗಿನಲ್ಲಿ ಬರುವ ಕೀಟ ಮತ್ತು ರೋಗದ ಪರಿಚಯ ಹಾಗೂ ಹತೋಟಿ ಕ್ರಮಗಳು ಹಾಗೂ ಸತ್ಯನಾರಾಯಣ ಉಡುಪ, ಅಧ್ಯಕ್ಷರು ಉಕಾಸ ಜಪ್ತಿ ಗ್ರಾಮ ವಿಷಯ: ತೆಂಗಿನ ಮರದಿಂದ ಕಲ್ಪರಸ ಉತ್ಪಾದನೆ ಕುರಿತು ಮಾಹಿತಿ ನೀಡುವರು.