ವೈರಲ್ ಆಗ್ತಿದೆ “ಗರುಡ ಗಮನ ವೃಷಭ ವಾಹನ” ದಿಂದ ಪ್ರೇರಿತವಾದ ಕಾರ್ಕಳ ನೀರೆಯ ಈ ಹುಡುಗರ ಟ್ರೈಲರ್

ರಾಜ್ ಬಿ ಶೆಟ್ಟಿ ಮತ್ತು ವೃಷಭ್ ಶೆಟ್ಟಿ ಅಭಿನಯದ ಹೊಸ ಸಿನಿಮಾ, “ಗರುಡ ಗಮನ ವೃಷಭ ವಾಹನ” ಶುಕ್ರವಾರವಷ್ಟೇ ರಿಲೀಸ್ ಆಗಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಕೂಡ ಸಖತ್ ಹಿಟ್ ಆಗಿದ್ದು, ಕನ್ನಡಿಗರ ಅಪಾರ ಗಮನ ಸೆಳೆದಿತ್ತು. ಈ ಸಿನಿಮಾದ ಟ್ರೈಲರ್ ನಿಂದ ಪ್ರೇರಿತರಾಗಿ ಕಾರ್ಕಳ ನೀರೆಯ  ತಂಡವೊಂದು ಅಂತದ್ದೇ ಒಂದು ಆಕರ್ಷಕ ಟ್ರೈಲರ್ ಅನ್ನು ಯುಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದು, ದಿನದಿಂದ ದಿನಕ್ಕೆ ವೈರಲ್ ಆಗ್ತಿದೆ. ಅಂದ ಹಾಗೆ ಈ ಟ್ರೈಲರ್ ಗೆ  ಕಾನ್ಸೆಪ್ಟ್, […]

ಗಂಡಸರ ಸಮಸ್ಯೆ ಬಗ್ಗೆ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ? ಗಂಡಸರ ಮಾನಸಿಕ ಆರೋಗ್ಯ ಕುಸಿಯುತ್ತಿದೆ!

“ನೀನು ಗಂಡು ಹುಡ್ಗ, ನೀನು ಅಳೋ ಹಾಗಿಲ್ಲ” “ಗಂಡಸರು ಅಂದ್ರೆ ಮನಸ್ಸು ಗಟ್ಟಿ ಇರತ್ತೆ ನಿಮ್ಗೆ.. ಯಾವುದೇ ರೀತಿ ಸಹಾಯ ಬೇಕಾಗಲ್ಲ” ಇಂತಹ ಮಾತುಗಳನ್ನು ದಿನನಿತ್ಯ ನಾವು ಕೇಳುತ್ತಲೇ ಇರುತ್ತೇವೆ. ಪುರುಷರು ಅಂದ್ರೆ ಮಾನಸಿಕವಾಗಿ ತುಂಬಾ ಗಟ್ಟಿ, ಅವರಿಗೆ ಯಾವುದೇ ರೀತಿಯ ಮಾನಸಿಕ ತೊಂದರೆಗಳು ಬರುವುದಿಲ್ಲ ಎಂಬ ಭಾವನೆ ಬಹುತೇಕರಿಗೆ ಇದೆ. ಇಂದು ನವೆಂಬರ್ ೧೯ನ್ನು ವಿಶ್ವ ಪುರುಷರ ದಿನವನ್ನಾಗಿ ಆಚರಣೆ ಮಾಡುತ್ತೇವೆ. ಈ ಸಂದರ್ಭದಲ್ಲಿ ಪುರುಷರ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೊಂದಿ, ನಮ್ಮಲ್ಲಿರುವ ತಪ್ಪು […]

ಉಡುಪಿ: ರಾಜ್ ಟವರ್ ಹತ್ತಿರದ ಗೋದಾಮಿನಲ್ಲಿ ಅಗ್ನಿ ಅವಘಡ; ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲು

ಉಡುಪಿ: ಸಿಟಿ ಬಸ್ ನಿಲ್ದಾಣ ಬಳಿಯ ರಾಜ್ ಟವರ್ ನ ಹಿಂದುಗಡೆ ಶಾಪ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಇಂದು ಸಂಜೆ ನಡೆದಿದೆ. ಗೋದಾಮಿನಲ್ಲಿ ಹಳೆಯ ಗುಜುರಿ ವಸ್ತುಗಳನ್ನು ತುಂಬಿಸಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಟಯರ್, ಸೀಟು ಕವರ್ ಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದೆ. ಎರಡು ಅಗ್ನಿಶಾಮಕ ವಾಹನಗಳಲ್ಲಿ ಅಗ್ನಿ ನಂದಿಸುವ ಕಾರ್ಯ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

ಕಾರ್ಕಳ: ಎಂಪಿಎಂ ಕಾಲೇಜಿನಲ್ಲಿ ಬಿಬಿಎ 5ನೇ ಸೆಮಿಸ್ಟರ್ ನ ಕಾರ್ಯಾಗಾರ

ಕಾರ್ಕಳ: ವಿದ್ಯಾರ್ಥಿಗಳಿಗೆ ಕಾಲೇಜು ಜೀವನದಲ್ಲಿ ಶಿಕ್ಷಣದ ಜೊತೆಗೆ ಇನ್ನಿತರ ಕಾರ್ಯಚಟುವಟಿಕೆಗಳಲ್ಲಿಯೂ ತೊಡಗುವಂತೆ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಪದವೀಧರರಾಗಿ ಹೊರಹೋಗುವಾಗ ಅವರಲ್ಲಿ ಒಂದೊಂದು ಪ್ರತಿಭೆ ಇರಬೇಕು. ಆ ಪ್ರತಿಭೆ ಹೇಗಿರಬೇಕೆಂದರೆ, ಮುಂದೊಂದು ದಿನ ಸಂಸ್ಥೆಯ ಉದ್ಯೋಗ ನಮ್ಮನ್ನು ಹುಡುಕಿಕೊಂಡು ಬರುವಂತಿರಬೇಕು ಎಂದು ಉದ್ಯಮಿ ಹರೀಶ್ ಹೆಗ್ಡೆ ತಿಳಿಸಿದರು. ಅವರು ಕಾರ್ಕಳ ಎಂಪಿಎಂ ಸರಕಾರಿ ಕಾಲೇಜಿನಲ್ಲಿ ನ.19 ರಂದು ಆಯೋಜಿಸಲಾದ ಬಿಬಿ ಎ 5 ನೇ ಸೆಮಿಷ್ಟರ್ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಪ್ರಾಂಶುಪಾಲರಾದ […]

ರಸ್ತೆಯಲ್ಲಿ‌ ಸಿಕ್ಕಿದ ಪರ್ಸ್ ವಾರಸುದಾರರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಸುಧೀರ್ ಶೇರಿಗಾರ್

ಸುಧೀರ್ ಶೇರಿಗಾರ್           ಸಂತೋಷ್ ಆಚಾರ್ಯ ಮಣಿಪಾಲ: ರಸ್ತೆಯಲ್ಲಿ‌ ಸಿಕ್ಕಿದ ₹20 ಸಾವಿರ ನಗದುಳ್ಳ ಪರ್ಸ್ ಅನ್ನು ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಸುಧೀರ್ ಶೇರಿಗಾರ್ ಮಂಚಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ಮೂರು ದಿನಗಳ ಹಿಂದೆ ಮಣಿಪಾಲ ರಾಜೀವನಗರದಿಂದ ಪ್ರಗತಿನಗರಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ನಗದುಳ್ಳ ಪರ್ಸ್ ಸುಧೀರ್ ಅವರಿಗೆ ಸಿಕ್ಕಿತ್ತು. ಬಳಿಕ ಪರ್ಸ್ ಕಳೆದುಕೊಂಡ ವ್ಯಕ್ತಿಗಾಗಿ ಸಂಪರ್ಕಿಸಿದ್ದಾರೆ. ಸ್ನೇಹಿತರ ಮೂಲಕ‌ ಪರ್ಸ್ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಮಾಡಿದ್ದು, ಅಲೆವೂರು ಮರ್ಣೆಯ ಸಂತೋಷ್ ಆಚಾರ್ಯ […]