ಕಾರ್ಕಳ: ಎಂಪಿಎಂ ಕಾಲೇಜಿನಲ್ಲಿ ಬಿಬಿಎ 5ನೇ ಸೆಮಿಸ್ಟರ್ ನ ಕಾರ್ಯಾಗಾರ

ಕಾರ್ಕಳ: ವಿದ್ಯಾರ್ಥಿಗಳಿಗೆ ಕಾಲೇಜು ಜೀವನದಲ್ಲಿ ಶಿಕ್ಷಣದ ಜೊತೆಗೆ ಇನ್ನಿತರ ಕಾರ್ಯಚಟುವಟಿಕೆಗಳಲ್ಲಿಯೂ ತೊಡಗುವಂತೆ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಪದವೀಧರರಾಗಿ ಹೊರಹೋಗುವಾಗ ಅವರಲ್ಲಿ ಒಂದೊಂದು ಪ್ರತಿಭೆ ಇರಬೇಕು. ಆ ಪ್ರತಿಭೆ ಹೇಗಿರಬೇಕೆಂದರೆ, ಮುಂದೊಂದು ದಿನ ಸಂಸ್ಥೆಯ ಉದ್ಯೋಗ ನಮ್ಮನ್ನು ಹುಡುಕಿಕೊಂಡು ಬರುವಂತಿರಬೇಕು ಎಂದು ಉದ್ಯಮಿ ಹರೀಶ್ ಹೆಗ್ಡೆ ತಿಳಿಸಿದರು.

ಅವರು ಕಾರ್ಕಳ ಎಂಪಿಎಂ ಸರಕಾರಿ ಕಾಲೇಜಿನಲ್ಲಿ ನ.19 ರಂದು ಆಯೋಜಿಸಲಾದ ಬಿಬಿ ಎ 5 ನೇ ಸೆಮಿಷ್ಟರ್ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಪ್ರಾಂಶುಪಾಲರಾದ ಶ್ರೀವರ್ಮಾ ಅಜ್ರಿ ಮಾತನಾಡಿ, ವಿದ್ಯಾರ್ಥಿಗಳ ಆಸಕ್ತಿ ಹಾಗೂ ಪ್ರತಿಭೆಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಮತ್ತು ಎಲ್ಲಾ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಮಿಂಚಬೇಕು, ಸ್ವಂತ ಉದ್ದಿಮೆಗಳನ್ನು ಸೃಷ್ಟಿಸಿಕೊಳ್ಳುವಂತೆ ಉಪನ್ಯಾಸಕರು ಬೋಧಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಜ್ಯೋತಿ ಎಲ್ ಜನ್ನೆ ಸ್ವಾಗತಿಸಿದರು. ವಿದ್ಯಾದರ್ ಹೆಗ್ಡೆ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ನೀಡಿದರು. ಕಾರ್ಯಾಗಾರದ ಸಂಯೋಜಕಿ ಸಂಧ್ಯಾ ಭಂಡಾರಿ ಉಪಸ್ಥಿತರಿದ್ದರು.

Forum of Business Management Teacher’s ( FOBMAT) ನ ಕಾರ್ಯದರ್ಶಿಯಾದ ಪ್ರಕಾಶ್ ಬಿ ವಂದಿಸಿದರು. ಕಾಲೇಜು ಉಪನ್ಯಾಸಕಿ ಸುಷ್ಮಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು. ಇವರಿಗೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.