ರೈಲ್ವೆಯಲ್ಲಿ 4103 ಅಪ್ರೆಂಟಿಸ್‌ ಹುದ್ದೆ: ಅರ್ಜಿ ಆಹ್ವಾನ

ಸೌಥ್‌ ಸೆಂಟ್ರಲ್‌ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 4103 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇದು ನೇರ ನೇಮಕಾತಿಯಾಗಿರುತ್ತದೆ. ಹುದ್ದೆಗಳ ವಿವರ: ಫಿಟ್ಟರ್, ಟರ್ನರ್‌, ಎಲೆಕ್ಟ್ರಿಷಿಯನ್, ಮೆಕ್ಯಾನಿಸ್ಟ್‌, ಪ್ಲಂಬರ್‌, ಪೇಂಟರ್‌. ಒಟ್ಟು ಹುದ್ದೆಗಳ ಸಂಖ್ಯೆ: 4103 ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಐಟಿಐ ವಿದ್ಯಾರ್ಹತೆಯನ್ನು ಮುಗಿಸಿರಬೇಕು. ತರಬೇತಿ ಭತ್ಯೆ: ಭಾರತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುವುದು. ವಯೋಮಿತಿ ಸಡಿಲಿಕೆ: ಅಕ್ಟೋಬರ್‌ 2021ಕ್ಕೆ ಅನ್ವಯವಾಗುವಂತೆ […]

ಕುಂದಾಪುರ: ಅ.16ಕ್ಕೆ ನ್ಯೂ ಅರ್ಚನಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಶುಭಾರಂಭ

ಕುಂದಾಪುರ: ಕುಂದಾಪುರ ಎನ್.ಎಚ್. 66ರ ಗಾಂಧಿ ಮೈದಾನದ ಎದುರಿನ ಆರ್.ಕೆ. ಕಟ್ಟಡದಲ್ಲಿ ಇದೇ ಅ.16ರಂದು ನೂತನ “ನ್ಯೂ ಅರ್ಚನಾ ಬಾರ್ ಆ್ಯಂಡ್ ರೆಸ್ಟೋರೆಂಟ್” ಉದ್ಘಾಟನೆಗೊಳ್ಳಲಿದೆ. ಹೋಟೆಲ್, ಲಾಡ್ಜ್, ಹಾಲ್ ಹಾಗೂ ಬಾರ್ ಒಳಗೊಂಡಿರುವ ಅತ್ಯಂತ ಸುಸಜ್ಜಿತ ರೆಸ್ಟೋರೆಂಟ್ ಇದಾಗಿದೆ. ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ವಿವಿಧ ವೆರೈಟಿಯ ಫುಡ್ ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿ Proprietor ಎಚ್.ಎಸ್. ಸಂತೋಷ್ ಪೂಜಾರಿ ಮೊಬೈಲ್ ಸಂಖ್ಯೆ 91485 21226 ಸಂಪರ್ಕಿಸಬಹುದು.

ಈದು: ಇಂದು ವನದುರ್ಗಾ ದೇವಸ್ಥಾನದ ನವರಾತ್ರಿ ಉತ್ಸವ

ಈದು: ಶ್ರೀ ವನದುರ್ಗಾ ದೇವಸ್ಥಾನ ಈದು ಕೇರ ಇದರ ನವರಾತ್ರಿ ಉತ್ಸವ ಇಂದು (ಅ.14) ದೇವಸ್ಥಾನದಲ್ಲಿ ಜರಗಲಿದೆ. ಉತ್ಸವದ ಪ್ರಯುಕ್ತ ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಹೂವಿನ ಪೂಜೆ ಸಹಿತ ಇನ್ನಿತರ ಸೇವೆಗಳಿಗೆ ಅವಕಾಶ ಇದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ನೆನಪಿಡಿ, ನಿಮ್ಮ ಕಣ್ಣಿನ ಆರೋಗ್ಯ ಬಹಳ ಮುಖ್ಯ:ವಿಶ್ವ ದೃಷ್ಟಿ ದಿನದ ವಿಶೇಷ ಬರಹ

ಡಾ. ರೂಪಶ್ರೀ ರಾವ್ ಸರ್ವೇಂದ್ರಿಯಾಣಂ ನಯನಂ ಪ್ರದಾನಮ್ ಎಂಬ ಉಕ್ತಿಯಂತೆ ಕಣ್ಣಿನ ಮಹತ್ವ ಜಗತ್ತಿನ ಸೌಂದರ್ಯವನ್ನು ಅನುಭವಿಸಲು ಮಾನವನ ಜೀವನ ಸುಂದರವಾಗಲು ಅತೀ ಅಗತ್ಯ. ಕಣ್ಣು ಎಷ್ಟು ಶ್ರೇಷ್ಠವೋ ಅಷ್ಟೇ ಸೂಕ್ಷ್ಮ ಕೂಡ. ಕಣ್ಣಿನ ಮಹತ್ವ ಕಣ್ಣಿಲ್ಲದವನಿಗೆ ಕೇಳಿದರೆ ಹೇಳುವನು. ಕಣ್ಣಿನ ಸಮಸ್ಯೆ ಹುಟ್ಟಿದ ಮಗುವಿನಿಂದ ಹಿಡಿದು ಮುಪ್ಪಿನ ಕಾಲದವರೆಗೂ ಬರಬಹುದು. ಕಣ್ಣಿನ ಪೊರೆ ಸಮಾನ್ಯವಾಗಿ ಐವತ್ತನೇ ವಯಸ್ಸಿನಿಂದ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಪೊರೆ ಇದ್ದಲ್ಲಿ ಒಂದು ಶಸ್ತ್ರ ಚಿಕಿತ್ಸೆ ಮೂಲಕ ಅದನ್ನು ತೆಗೆದು ಕಣ್ಣಿನ ಒಳಭಾಗದಲ್ಲಿ ಲೆನ್ಸ್ […]

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿನ್ನಲೇಬೇಕಾದ ಆಹಾರವಿದು:ವಿಶ್ವ ದೃಷ್ಟಿ ದಿನದ ಸ್ಪೆಷಲ್

ನಿಮ್ಮ ಕಣ್ಣುಗಳು ಸುಂದರ ಮತ್ತು ಆರೋಗ್ಯವಾಗಿರಬೇಕೆಂದರೆ ಹೆಚ್ಚೇನು ಕಷ್ಟ ಪಡುವ ಅಗತ್ಯವಿಲ್ಲ. ಉತ್ತಮ ಆಹಾರ ಕ್ರಮ, ಒಳ್ಳೆ ನಿದ್ದೆ ಮತ್ತು ಕೆಲವು ನೈಸರ್ಗಿಕ ವಿಧಾನ ಅನುಸರಿಸಿದರೆ ಸಾಕು, ನಿಮ್ಮ ಕಣ್ಣನ್ನು ಹಲವು ಸೋಂಕುಗಳಿಂದ ದೂರವಿರಿಸಿ ಕಣ್ಣಿನ ದೃಷ್ಟಿ ದೀರ್ಘಕಾಲ ಚೈತನ್ಯವಾಗಿರುವಂತೆ ನೋಡಿಕೊಳ್ಳಬಹುದು. ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಸೇವಿಸಬೇಕೆಂದು ತಿಳಿದುಕೊಳ್ಳೋಣ: ವಿಟಮಿನ್ಸ್: ಕಣ್ಣಿಗೆ ಅಗತ್ಯವಿರುವ ವಿಟಮಿಮ್ ಎ, ಇ ಮತ್ತು ಸಿ ದಿನನಿತ್ಯ ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಕ್ಯಾರೆಟ್, ಸೇಬು, ಕಿತ್ತಳೆ, ದ್ರಾಕ್ಷಿ ಹಣ್ಣುಗಳು ಕಣ್ಣಿನ ಪೋಷಣೆಗೆ […]