ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ಹುಟ್ಟುಹಬ್ಬದ ಪ್ರಯುಕ್ತ “ಬೃಹತ್ ರಕ್ತದಾನ ಶಿಬಿರ”

ಉಡುಪಿ: ಮಾಜಿ ಸಚಿವ  ಪ್ರಮೋದ್ ಮಧ್ವರಾಜ್‌ರವರ ಹುಟ್ಟುಹಬ್ಬದ ಸಲುವಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ “ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಅ.17  ಬೆಳಿಗ್ಗೆ 9 ಗಂಟೆಯಿಂದ ನಡೆಯಲಿದೆ. ಈ ಪ್ರಯುಕ್ತ ಬೆಳಿಗ್ಗೆ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವರಾದ  ಪ್ರಮೋದ್ ಮಧ್ವರಾಜ್‌ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಇಂದ್ರಾಳಿ ಜಯಕರ ಶೆಟ್ಟಿ, ಅಧ್ಯಕ್ಷರು ತುಳು ಕೂಟ(ರಿ) ಉಡುಪಿ ಹಾಗೂ  ಜನಾರ್ದನ ತೋನ್ಸೆ, ಮಾಜಿ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ ಇವರು ಆಗಮಿಸಲಿರುವರು ಹಾಗೂ […]

ಭಾರತೀಯ ಅಂಚೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಖಾಲಿ ಇದೆ ವಿವಿಧ ಹುದ್ದೆಗಳು:ಅರ್ಜಿ ಸಲ್ಲಿಸಿ

ಭಾರತೀಯ ಅಂಚೆ ಇಲಾಖೆಯಲ್ಲಿ(Indian Postal Department) ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪೋಸ್ಟ್ ಜಾಬ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೆಹಲಿ ಅಂಚೆ ವೃತ್ತದಲ್ಲಿ(Delhi Post Circle) ಅಂಚೆ ಸಹಾಯಕ, ವಿಂಗಡಣೆ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಪೋಸ್ಟ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕ್ರೀಡಾ ಕೋಟಾದಲ್ಲಿ ಈ ಹುದ್ದೆಗಳನ್ನು ಬದಲಾಯಿಸಲಾಗುತ್ತಿದ್ದು, ಒಟ್ಟು 221 ಹುದ್ದೆಗಳಿವೆ. ಇವುಗಳು ಕ್ರೀಡಾ ಕೋಟಾದಲ್ಲಿ ಭರ್ತಿ ಮಾಡಲಾಗುತ್ತಿರುವ ಹುದ್ದೆಗಳಾಗಿರುವುದರಿಂದ ಅಧಿಸೂಚನೆಯಲ್ಲಿ ನೀಡಿರುವ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದವರು ಮಾತ್ರ ಅರ್ಜಿ ಸಲ್ಲಿಸಬೇಕು. […]

ರಾಜ್ಯದಲ್ಲಿ ಕೊರೋನಾ ಇಳಿಕೆ: ಸಹಜ ಸ್ಥಿತಿಗೆ ಮರಳುತ್ತಿವೆ ಜಿಲ್ಲೆಗಳು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಇಳಿಕೆ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 310 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 29,82,399ಕ್ಕೆ ಏರಿಕೆಯಾಗಿದೆ. 347 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟಾರೇ ಗುಣಮುಖರಾದವರ ಸಂಖ್ಯೆ 29,34,870ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ 9,578 ಸಕ್ರಿಯ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ

ಯಕ್ಷಾಭಿನಯ ಬಳಗ: ಬಡಗುತಿಟ್ಟು ಯಕ್ಷಗಾನ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ: ಯಕ್ಷಾಭಿನಯ ಬಳಗ ಮಂಗಳೂರು ಇದರ ಮೂರನೇ ವರ್ಷದ ಬಡಗುತಿಟ್ಟು ಯಕ್ಷಗಾನ ತರಬೇತಿ ಶಿಬಿರವು ಮಂಗಳೂರು ನಗರದ ಕಾಪಿಕಾಡಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಯಕ್ಷಗಾನ ಸಂಘಟಕ ಡಾ. ಮಂಟಪ ಮನೋಹರ ಉಪಾದ್ಯಾಯರು ದೀಪ ಪ್ರಜ್ವಲಿಸಿ ತರಗತಿಯನ್ನು ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಯಕ್ಷಶ್ರೀ ಐರೋಡಿ ಮಂಜುನಾಥ್ ಕುಲಾಲ್, ಸಂಘದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ದೇವು ಹನೆಹಳ್ಳಿ ಸತ್ಯನಾರಾಯಣ ರಾವ್ ಮತ್ತು ಶ್ರೀಮತಿ ಭಾಗ್ಯಪ್ರಕಾಶ್ ಉಡುಪ, ಕಾರ್ಯದರ್ಶಿ ಸಂತೋಷ್ […]