ನೆನಪಿಡಿ, ನಿಮ್ಮ ಕಣ್ಣಿನ ಆರೋಗ್ಯ ಬಹಳ ಮುಖ್ಯ:ವಿಶ್ವ ದೃಷ್ಟಿ ದಿನದ ವಿಶೇಷ ಬರಹ

ಡಾ. ರೂಪಶ್ರೀ ರಾವ್

ಸರ್ವೇಂದ್ರಿಯಾಣಂ ನಯನಂ ಪ್ರದಾನಮ್ ಎಂಬ ಉಕ್ತಿಯಂತೆ ಕಣ್ಣಿನ ಮಹತ್ವ ಜಗತ್ತಿನ ಸೌಂದರ್ಯವನ್ನು ಅನುಭವಿಸಲು ಮಾನವನ ಜೀವನ ಸುಂದರವಾಗಲು ಅತೀ ಅಗತ್ಯ. ಕಣ್ಣು ಎಷ್ಟು ಶ್ರೇಷ್ಠವೋ ಅಷ್ಟೇ ಸೂಕ್ಷ್ಮ ಕೂಡ. ಕಣ್ಣಿನ ಮಹತ್ವ ಕಣ್ಣಿಲ್ಲದವನಿಗೆ ಕೇಳಿದರೆ ಹೇಳುವನು. ಕಣ್ಣಿನ ಸಮಸ್ಯೆ ಹುಟ್ಟಿದ ಮಗುವಿನಿಂದ ಹಿಡಿದು ಮುಪ್ಪಿನ ಕಾಲದವರೆಗೂ ಬರಬಹುದು. ಕಣ್ಣಿನ ಪೊರೆ ಸಮಾನ್ಯವಾಗಿ ಐವತ್ತನೇ ವಯಸ್ಸಿನಿಂದ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಪೊರೆ ಇದ್ದಲ್ಲಿ ಒಂದು ಶಸ್ತ್ರ ಚಿಕಿತ್ಸೆ ಮೂಲಕ ಅದನ್ನು ತೆಗೆದು ಕಣ್ಣಿನ ಒಳಭಾಗದಲ್ಲಿ ಲೆನ್ಸ್ ಅಳವಡಿಸಿದರೆ ದೃ‍‍‍ಷ್ಟಿ ಮತ್ತೆ ಕಾಣುತ್ತದೆ.

ಡಯಾಬಿಟೀಸ್ ಕಾಯಿಲೆ ಇದ್ದವರಲ್ಲಿ ಕಣ್ಣಿನ ರೆಟೆನಿ ಸಮಸ್ಯೆ ಬರಬಹುದು.ಡಯಾಬಿಟೀಸ್ ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಜೊತೆಗೆ ಕಣ್ಣನ್ನು ಆಗಾಗ ಪರೀಕ್ಷೆ ಮಾಡಿಕೊಳ್ಳಬೇಕು.ಉತ್ತರ ತಜ್ಙರಲ್ಲಿಯೇ ಇದನ್ನು ಪರೀಕ್ಷೆ ಮಾಡಿಸಿಕೊಳ್ಳಿ.೪೦ ನೇ ವರ್ಷದಿಂದ ವರ್ಷಕ್ಕೊಂದು ಸಲ ಕಣ್ಣಿನ ಒತ್ತಡ ಹಾಗೂ ನರಪರೀಕ್ಷೆ ಮಾಡಿಸಿಕೊಳ್ಳಿ.

ಅತೀಯಾದ ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆಯಿಂದ ಕಣ್ಣಿನ ದೃಷ್ಟಿ ಸಮಸ್ಯೆ ಬರುತ್ತದೆ.ಇದೀಗ ಹೊಸ ಜೀವನಶೈಲಿಯಿಂದಲೂ ಮಕ್ಕಳಲ್ಲಿಯೂ ಅತೀಯಾದ ಕಣ್ಣಿನ ಸಮಸ್ಯೆ ಬರುತ್ತಿದೆ. ತಲೆನೋವೂ ಕಾಣಿಸಿಕೊಳ್ಳುತ್ತಿದೆ.ಹಾಗಾಗಿ ಕಣ್ಣಿನ ಒತ್ತಡ ನಿವಾರಿಸಲು ಕಣ್ಣಿಗೆ ಆರಾಮ ನೀಡಬೇಕು ಮತ್ತು ಕಣ್ಣಿನ ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರ ಸೇವಿಸಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ