ಮಣಿಪಾಲ: ಶ್ರೀ ಶಾರದಾ ಮ್ಹಾಂಟೇಸ್ಸರಿ/ ನರ್ಸರಿ ಟೀಚರ್ಸ್ ತರಬೇತಿ ಸಂಸ್ಥೆಯ ನೂತನ ಕಾರ್ಯಾಲಯ ಉದ್ಘಾಟನೆ
ಮಣಿಪಾಲ: ಭಾರತ್ ಸೇವಕ್ ಸಮಾಜ್ ಹಾಗೂ ಶಾರದಾ ವಿಕಾಸ್ ಟ್ರಸ್ಟ್ ಬೆಂಗಳೂರು ಇದರ ಜಂಟಿ ಸಹಯೋಗದಲ್ಲಿ ಉಡುಪಿ- ಕುಂಜಿಬೆಟ್ಟುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಶಾರದಾ ಮ್ಹಾಂಟೇಸ್ಸರಿ/ ನರ್ಸರಿ ಟೀಚರ್ಸ್ ತರಬೇತಿ ಸಂಸ್ಥೆಯ ಸ್ಥಳಾಂತರ ಕಾರ್ಯಕ್ರಮ ಸೋಮವಾರ ನಡೆಯಿತು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ಕ್ರಿಸ್ಟಲ್ ಬಿಜ್ಸ್ ಹಬ್ ಕಟ್ಟಡದ ಮೊದಲನೇ ಮಹಡಿಗೆ ಸ್ಥಳಾಂತರಗೊಂಡ ಸಂಸ್ಥೆಯನ್ನು ವಾಸ್ತುತಜ್ಞ, ಅಧ್ಯಾಪಕ ಶ್ರೀಪತಿ ಆಚಾರ್ಯ ಅಂಬಲಪಾಡಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ವಿಶಾಲ ಸಂಕೀರ್ಣದಲ್ಲಿ ಮುನ್ನಡಿಯಿಡುವ ಈ ಸಂಸ್ಥೆಯು ನಿರಂತರ ಕಲಿಕಾ ಸಾಮರ್ಥ್ಯವನ್ನು […]
2 ರಿಂದ 18 ವರ್ಷದೊಳಗಿನ ಮಕ್ಕಳಿಗೂ ಕೊರೊನಾ ಲಸಿಕೆ; ತಜ್ಞರ ಸಲಹಾ ಸಮಿತಿ ಅನುಮೋದನೆ
ನವದೆಹಲಿ: 2 ರಿಂದ 18 ವರ್ಷದೊಳಗಿನ ಮಕ್ಕಳಿಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಸಿಗಲಿದ್ದು, ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ನೀಡಲು ತಜ್ಞರ ಸಲಹಾ ಸಮಿತಿ (Subject Expert Committee) ಅನುಮೋದನೆ ನೀಡಿದೆ. ಈ ಮೂಲಕ ಪೋಷಕರ ಆತಂಕ ದೂರಾದಂತಾಗಿದೆ. ದೇಶದಲ್ಲಿ ಇದುವರೆಗೂ ಶೇಕಡಾ 60 ರಷ್ಟು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಇತ್ತೀಚಿಗೆ ಐಸಿಎಂಆರ್ ನಡೆಸಿದ ಸೆರೊಸರ್ವೇ ಹೇಳಿದೆ. ಜೊತೆಗೆ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದೂ ಸಹ ತಜ್ಞರು […]
ತೆಂಕುತಿಟ್ಟಿನ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ
ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಭಾಗವತ, ಗಾನ ಗಂಧರ್ವರೆಂದೇ ಖ್ಯಾತರಾಗಿದ್ದ ಪದ್ಯಾಣ ಗಣಪತಿ ಭಟ್ ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಇಂದು ಬೆಳಿಗ್ಗೆ 7.30ಕ್ಕೆ ಹೃದಯಾಘಾತಕ್ಕೊಳಗಾಗಿ ವಿಧಿವಶರಾದರು ಎಂದು ತಿಳಿದುಬಂದಿದೆ. ಗಣಪತಿ ಭಟ್ಟರು ಸುಮಾರು 4 ದಶಕಗಳಿಗೂ ಹೆಚ್ಚು ಕಾಲ ಯಕ್ಷರಂಗದಲ್ಲಿ ಭಾಗವತರಾಗಿ ಮೆರೆದಿದ್ದರು. ಸುರತ್ಕಲ್, ಕರ್ನಾಟಕ, ಹೊಸನಗರ, ಎಡನೀರು, ಹನುಮಗಿರಿ ಸೇರಿದಂತೆ ಹಲವು […]