ಮಂಚಿ: ಬೃಹತ್ ಗಾತ್ರದ ಹೆಬ್ಬಾವು ಸೆರೆ

ಮಣಿಪಾಲ: ಇಲ್ಲಿನ ಮಂಚಿ ರಾಜೀವನಗರದ ಆರನೇ ಅಡ್ಡ ರಸ್ತೆಯಲ್ಲಿ ಬಹೃತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಹೆಬ್ಬಾವು ಬಂದಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಧೀರ್ ಶೇರಿಗಾರ್ ಮಂಚಿ ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಲೋಕೇಶ್ ಭಂಡಾರಿ ಹಾಗೂ ಶಿವಪ್ರಸಾದ್ ರಾಜೀವನಗರ ಹಾವನ್ನು ಹಿಡಿಯಲು ಸಹಕರಿಸಿದರು. ಬಳಿಕ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಮಂಚಿ ರಾಜೀವನಗರ ಪರಿಸರದಲ್ಲಿ ಹೆಬ್ಬಾವುಗಳ ಸಂಚಾರ ಹೆಚ್ಚಾಗಿದ್ದು, ಆಗಾಗ ಪತ್ತೆಯಾಗುತ್ತಿದೆ. ಜನವಸತಿ ಪ್ರದೇಶದ ಸಮೀಪವೇ ಅರಣ್ಯ ಇರುವುದರಿಂದ ಹೆಬ್ಬಾವುಗಳು ಆಹಾರ ಹುಡುಕಿಕೊಂಡು ನಾಡಿಗೆ […]

ಉಡುಪಿಯಲ್ಲಿ ಭಾರೀ ವರ್ಷಧಾರೆ: ದಿಢೀರ್ ಮಳೆಗೆ ಹೈರಾಣಾದ ಜನ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಐದು ತಾಸುಗಳಿಂದ ವಿಪರೀತ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ‌. ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಎಡೆಬಿಡದೆ ಸುರಿದಿದ್ದು, ವರುಣನ ಹೊಡೆತಕ್ಕೆ ಕೆಲಸ ಮುಗಿಸಿ ಮನೆಗೆ ಹೋಗುವ ಜನರು ಹೈರಾಣಾದರು. ರಸ್ತೆಯಲ್ಲೇ ನೀರು ಹರಿದ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಮಣಿಪಾಲ, ಈಶ್ವರ ನಗರದಿಂದ ಪರ್ಕಳ ಅತ್ರಾಡಿ ವರೆಗಿನ ರಸ್ತೆಯ ಮೇಲೆ ನೀರು ಸಾಗುತ್ತಿದ್ದ ಪರಿಣಾಮ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ […]

ಉಡುಪಿ: ವೃತ್ತಿ ಸಂಸ್ಥೆಯಿಂದ ಉಚಿತ ಪಾರ್ಲರ್ ತರಬೇತಿ

ಉಡುಪಿ: ವೃತ್ತಿ ಸಂಸ್ಥೆ ವತಿಯಿಂದ 5 ದಿನಗಳ ತಾಂತ್ರಿಕ ತರಬೇತಿ ಮತ್ತು 1 ದಿನದ ವ್ಯಾಪಾರ ಅಭಿವೃದ್ಧಿ ಕುರಿತ ತರಬೇತಿ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗುವುದು. ಈ ತರಬೇತಿಯಲ್ಲಿ ಒಟ್ಟು 15 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ. ಮಾನದಂಡಗಳು: 1. ಸ್ವಂತ ಪಾರ್ಲರ್ ಮನೆ ಅಥವಾ ನಿಶ್ಚಿತ ಸ್ಥಳದಲ್ಲಿದ್ದು ಅಭಿವೃದ್ಧಿ ಹೊಂದುವ ಇಚ್ಛೆ ಇರುವ ಉಡುಪಿ ನಿವಾಸಿಗಳಿಗಳಾಗಿರಬೇಕು. 6 ತಿಂಗಳಿನಿಂದ ಪಾರ್ಲರ್ ನಡೆಸುತ್ತಿರಬೇಕು. 2. ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು (ಇಂತಹ ಪಾರ್ಲರ್ ಮಹಿಳೆಯರ ಅಭಿವೃದ್ಧಿ Godrej ಕಂಪನಿಯ […]

ಕೊಲ್ಲೂರು ದೇವಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕುಟುಂಬ ಸಮೇತರಾಗಿ ಮಂಗಳವಾರ ಭೇಟಿ ನೀಡಿ, ಮೂಕಾಂಬಿಕೆಯ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ಶ್ರೀಧರ್ ಅಡಿಗ ಅವರ ನೇತೃತ್ವದಲ್ಲಿ ದೇವಳದ ವಿಶೇಷ ಪೂಜೆ ಚಂಡಿಕಾ ಹೋಮದಲ್ಲಿ ಭಾಗಿಯಾದರು. ದೇವಸ್ಥಾನದ ವತಿಯಿಂದ ಗೃಹ ಸಚಿವ ದಂಪತಿಗಳಿಗೆ ಗೌರವಿಸಲಾಯಿತು. ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ಸೇನಾಪುರ, […]

ಚಲಿಸುತ್ತಿದ್ದ ಬಸ್ಸಿನಡಿ ಸಿಲುಕಿ ತಾಯಿ-ಮಗು ಮೃತ್ಯು

ಉಪ್ಪಿನಂಗಡಿ: ಚಲಿಸುತ್ತಿದ್ದ ಬಸ್ಸಿನಡಿ ಬಿದ್ದು ತಾಯಿ -ಮಗು ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿ ಮಂಗಳವಾರ ನಡೆದಿದೆ ಮೃತರನ್ನು ಬೆಳ್ತಂಗಡಿ ತಾಲ್ಲೂಕು ಸಾಹಿದ (25) ಮತ್ತು ಅವರ ಪುತ್ರ ಸಾಹಿಲ್(1) ಎಂದು ಗುರುತಿಸಲಾಗಿದೆ. ತಾಯಿ-ಮಗು ರಸ್ತೆ ದಾಟುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ಇವರ ಮೇಲೆ ಹರಿದಿದೆ ಎನ್ನಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.