ಜೆ.ಇ.ಇ ಮೈನ್ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ; ಕಾರ್ಕಳ ಜ್ಞಾನಸುಧಾ ಕಾಲೇಜಿನ ಅಭಯ್ ಕಾಮತ್ ಗೆ 675ನೇ ರ್ಯಾಂಕ್
ಕಾರ್ಕಳ: ಇಲ್ಲಿನ ಗಣಿತ ನಗರದ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿ ಅಭಯ್ ಕಾಮತ್ ಅವರು ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆ.ಇ.ಇ ಮೈನ್ನ ನಾಲ್ಕನೇ ಫೇಸ್ನಲ್ಲಿ ಗಣಿತ ಹಾಗೂ ಫಿಸಿಕ್ಸ್ ನಲ್ಲಿ ನೂರು ಪರ್ಸಂಟೈಲ್ನೊಂದಿಗೆ ರಾಷ್ಟ್ರಮಟ್ಟದಲ್ಲಿ 675 ನೇ ರ್ಯಾಂಕ್ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಒಟ್ಟು 9,39,008 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜ್ಞಾನಸುಧಾದ ಅಭಯ್ ಕಾಮತ್ 99.9499, ಶ್ರೇಯಸ್ ಪೈ 99.6929, ಅನೀಶ್ ಕುಂಬಾರ್ 99.5398, ಮನ್ವಿತ್ ಪ್ರಭು 99.4870, ಹಾಗೂ ಶ್ರೀಹರಿ ಪಾಡಿಗಾರ್ 99.1444 ರ್ಸಂಟೈಲ್ನೊಂದಿಗೆ 99 ಕ್ಕಿಂತ […]
ಅಂಬಲಪಾಡಿ: ಪಾದಚಾರಿ ರಸ್ತೆಯಲ್ಲಿ ರಾಶಿ ರಾಶಿ ತ್ಯಾಜ್ಯ; ಸೂಕ್ತ ಕ್ರಮಕ್ಕೆ ನಾಗರಿಕ ಸಮಿತಿ ಆಗ್ರಹ
ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ವ್ಯವಹಾರ ಕಾಂಪ್ಲೆಕ್ಸ್ ಬಳಿ, ಸರ್ವಿಸ್ ರಸ್ತೆಯ ಪಕ್ಕದ ಪಾದಚಾರಿ ರಸ್ತೆಯ ಮೇಲೆ, ಸಾರ್ವಜನಿಕರು ಪ್ಲಾಸ್ಟಿಕ್, ಕೋಳಿ ತ್ಯಾಜ್ಯ, ಹಸಿ ಮತ್ತು ಒಣ ತ್ಯಾಜ್ಯ, ಸತ್ತ ಪ್ರಾಣಿಗಳ ಕಳೇಬರಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ. ಪರಿಸರದಲ್ಲಿ ಗಬ್ಬು ವಾಸನೆ ಹಬ್ಬಿದ್ದು, ರೋಗವಾಹಕ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತ್ಯಾಜ್ಯ ವಿಲೇವಾರಿಗೊಳಿಸಬೇಕು. ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.
ದೇವಸ್ಥಾನ ಒಡೆಯುವ ಮೂಲಕ ಬಿಜೆಪಿಯ ನಿಜಬಣ್ಣ ಬಯಲು: ಶುಭದ ರಾವ್ ಟೀಕೆ
ಕಾರ್ಕಳ: ಹಿಂದುಗಳ ಧಾರ್ಮಿಕ ನಂಬಿಕೆಗಳಾದ ದೇವರು, ದೇವಸ್ಥಾನ, ಗೋವು ಮೊದಲಾದ ವಿಚಾರಗಳನ್ನೇ ತನ್ನ ರಾಜಕೀಯ ಬಂಡವಾಳವಾಗಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ದೇವಸ್ಥಾನವನ್ನೇ ಕೆಡವುದರ ಮೂಲಕ ತನ್ನ ಅವಕಾಶವಾದಿ ರಾಜಕಾರಣವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಟೀಕಿಸಿದ್ದಾರೆ. ಜನಪರ ಆಡಳಿವನ್ನು ನೀಡಿ ಜನರ ವಿಶ್ವಾಸವನ್ನು ಗಳಿಸಲಿಲ್ಲ, ಕೊನೆ ಪಕ್ಷ ಹಿಂದೂಗಳ ನಂಬಿಕೆಯ ಪ್ರತೀಕವಾದ ದೇವಸ್ಥಾನವನ್ನೂ ಉಳಿಸಲಿಲ್ಲ. ಯಾರಿಗೂ ಸಮಸ್ಯೆ ಇಲ್ಲದ ಪುರಾತನ ದೇವಸ್ಥಾನ ಒಡೆಯುವ ಅನಿವಾರ್ಯತೆ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಕಾರ್ಕಳ ಕ್ಷೇತ್ರದಾದ್ಯಂತ […]
ಕಾರ್ಕಳ: ನಿಟ್ಟೆ ಗ್ರಾಮದ ಬೊರ್ಗಲ್ ಗುಡ್ಡೆ ನಿವಾಸಿ ನಾಪತ್ತೆ
ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಬೊರ್ಗಲ್ ಗುಡ್ಡೆ ನಿವಾಸಿ ಶ್ಯಾಮ ಕೋಟ್ಯಾನ್ (65) ಸೆ.13ರಿಂದ ಕಾಣೆಯಾಗಿದ್ದಾರೆ. ಈ ವ್ಯಕ್ತಿ ಎಲ್ಲಿಯಾದರೂ ಕಂಡಲ್ಲಿ ಮೊಬೈಲ್ ನಂಬರ್ 97682 19432 ಅಥವಾ ಕಾರ್ಕಳ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ
ಕಟಪಾಡಿ: ಜಿಲ್ಲಾ ಅಲ್ಪಸಂಖ್ಯಾತ ಮೋರ್ಚ ಉಡುಪಿ ಜಿಲ್ಲೆ ಹಾಗೂ ಕಾಪು ಮಂಡಲದ ಅಲ್ಪಸಂಖ್ಯಾತ ಮೋರ್ಚ ಸಹಯೋಗದಲ್ಲಿ ಕಟಪಾಡಿ ಮಹಿಳಾಮಂಡಲ ಕಟ್ಟಡದಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ ನಡೆಯಿತು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚ ಅಧ್ಯಕ್ಷರಾದ ದಾವುದ್ ಅಬುಬಕ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ದಾವುದ್ ಅಬೂಬಕ್ಕರ್, ಬಿಜೆಪಿ ಯಾವತ್ತಿಗೂ ಅಲ್ಪಸಂಖ್ಯಾತರ ವಿರೋಧಿಯಲ್ಲ. ಇದಕ್ಕೆ ವೇದಿಕೆಯಲ್ಲಿರುವ ನಾವೆಲ್ಲರೂ ಉದಾಹರಣೆಯಾಗಿದ್ದು, ಅತ್ಯಂತ ಗೌರವಯುತವಾಗಿ ಪಕ್ಷ ನಮ್ಮನ್ನು ನಡೆಸಿಕೊಂಡು ಮಹತ್ತರ ಜವಾಬ್ದಾರಿ […]