ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ

ಕಟಪಾಡಿ: ಜಿಲ್ಲಾ ಅಲ್ಪಸಂಖ್ಯಾತ ಮೋರ್ಚ ಉಡುಪಿ ಜಿಲ್ಲೆ ಹಾಗೂ ಕಾಪು ಮಂಡಲದ ಅಲ್ಪಸಂಖ್ಯಾತ ಮೋರ್ಚ ಸಹಯೋಗದಲ್ಲಿ ಕಟಪಾಡಿ ಮಹಿಳಾಮಂಡಲ ಕಟ್ಟಡದಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ ನಡೆಯಿತು.

ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚ ಅಧ್ಯಕ್ಷರಾದ ದಾವುದ್ ಅಬುಬಕ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ದಾವುದ್ ಅಬೂಬಕ್ಕರ್, ಬಿಜೆಪಿ ಯಾವತ್ತಿಗೂ ಅಲ್ಪಸಂಖ್ಯಾತರ ವಿರೋಧಿಯಲ್ಲ. ಇದಕ್ಕೆ ವೇದಿಕೆಯಲ್ಲಿರುವ ನಾವೆಲ್ಲರೂ ಉದಾಹರಣೆಯಾಗಿದ್ದು, ಅತ್ಯಂತ ಗೌರವಯುತವಾಗಿ ಪಕ್ಷ ನಮ್ಮನ್ನು ನಡೆಸಿಕೊಂಡು ಮಹತ್ತರ ಜವಾಬ್ದಾರಿ ನೀಡಿ ಗೌರವಿಸಿದೆ‌ ಎಂದರು.

ಬಳಿಕ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಅಲ್ಪಸಂಖ್ಯಾತರಿಗೆ ಸವಲತ್ತಿಗಾಗಿ ಅತೀ ಹೆಚ್ಚು ಅನುದಾನ ನಿಗದಿಪಡಿಲಸಲು ಪ್ರಾರಂಭಮಾಡಿದ್ದು ಯಡಿಯೂರಪ್ಪ ಸರಕಾರ. ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಲ್ಪಸಂಖ್ಯಾತರಿಗೆ ಅತೀ ಹೆಚ್ಚು ಸವಲತ್ತುಗಳನ್ನು ನೀಡುತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಆಗಿ ಇಟ್ಟು ಬಿಜೆಪಿಯ ಬಗ್ಗೆ ಭಯ ಹುಟ್ಟಿಸುವ ಕೆಲಸ ಮಾಡಿದ್ದು ಬಿಟ್ಟರೆ ಅಲ್ಪಸಂಖ್ಯಾತರ ಅಭಿವೃದ್ಧಿ ಮಾಡಲೇ ಇಲ್ಲ ಎಂದರು.

ಬಳಿಕ ಬಂಟ್ವಾಳದ ಬಿಕೆ ಹ್ಯಾರಿಸ್ ಅವರು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚ ಕಾರ್ಯದರ್ಶಿ ಸಲೀಂ ಅಂಬಾಗಿಲು, ರಾಜ್ಯ ಕಾರ್ಯಕರಿಣಿ ಸದಸ್ಯರಾದ ಗೀತಾಂಜಲಿ ಸುವರ್ಣ, ಜಿಲ್ಲಾ ಉಪಾಧ್ಯಕ್ಷರೂ, ಅಲ್ಪಸಂಖ್ಯಾತ ಮೋರ್ಚ ಉಸ್ತುವಾರಿಗಳಾದ ನಯನ ಗಣೇಶ್, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಕಾಪು ಮಂಡಲ ಅಲ್ಪಸಂಖ್ಯಾತ ಮೋರ್ಚ ಅಧ್ಯಕ್ಷರಾದ ಮಹಮ್ಮದ್ ಆಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆಸಿಫ್ ಕಟಪಾಡಿ, ಆಲ್ವಿನ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷರಾದ ಮಹಮ್ಮದ್ ಅಪ್ಸರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ಜೆರಾಲ್ಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರೆ ಬ್ಲಾಂಚ ಕರ್ನೆಲಿಯೋ ಧನ್ಯವಾದ ಸಮರ್ಪಿಸಿದರು.