ಮುಲ್ಕಿ: ಉಚಿತ ಪಾರ್ಲರ್ ತರಬೇತಿ; ಅರ್ಜಿ ಆಹ್ವಾನ
ಉಡುಪಿ: ವೃತ್ತಿ ಸಂಸ್ಥೆಯ ವತಿಯಿಂದ 5 ದಿನಗಳ ತಾಂತ್ರಿಕ ತರಬೇತಿ ಮತ್ತು 2 ದಿನಗಳ ವ್ಯಾಪಾರ ಅಭಿವೃದ್ಧಿ ಕುರಿತ ತರಬೇತಿಯನ್ನು ಸುರತ್ಕಲ್, ಮುಲ್ಕಿಯಲ್ಲಿ ಹಮ್ಮಿಕೊಳ್ಳಲಾಗುವುದು. ಈ ತರಬೇತಿಯಲ್ಲಿ ಒಟ್ಟು 15-30 ಮಂದಿಗೆ ಭಾಗವಹಿಸಲು ಅವಕಾಶವಿದೆ. ಮಾನದಂಡಗಳು: 1. ಸ್ವಂತ ಪಾರ್ಲರ್ ಮನೆ ಅಥವಾ ನಿಶ್ಚಿತ ಸ್ಥಳದಲ್ಲಿರಬೇಕು. ಅಭಿವೃದ್ಧಿ ಹೊಂದುವ ಇಚ್ಛೆ ಇರಬೇಕು. 6 ತಿಂಗಳಿನಿಂದ ಪಾರ್ಲರ್ ನಡೆಸುತ್ತಿರಬೇಕು. ಸುರತ್ಕಲ್, ಮುಲ್ಕಿಯ ನಿವಾಸಿಗಳಾಗಿರಬೇಕು. 2. ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು. (ಇಂತಹ ಪಾರ್ಲರ್ ಮಹಿಳೆಯರ ಅಭಿವೃದ್ಧಿ Godrej […]
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಹ ಪ್ರಭಾರಿಯಾಗಿ ಸಚಿವೆ ಶೋಭಾ ಕರಂದ್ಲಾಜೆ ನೇಮಕ
ನವದೆಹಲಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಸಹ ಪ್ರಭಾರಿಯನ್ನಾಗಿ ಬಿಜೆಪಿ ನಿಯುಕ್ತಿಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ದಾ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಉಡುಪಿ: ಓಂ ಶಿವಂ ಎಂಟರ್ ಪ್ರೈಸಸ್ ಶಾಪ್ ನಲ್ಲಿ ಅಕೌಂಟ್ಸ್ ನೋಡಿಕೊಳ್ಳಲು ಸಮರ್ಥ ಅಭ್ಯರ್ಥಿಯೊಬ್ಬರು ಬೇಕಾಗಿದ್ದಾರೆ
ಉಡುಪಿ: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಓಂ ಶಿವಂ ಎಂಟರ್ ಪ್ರೈಸಸ್ ಶಾಪ್ ನಲ್ಲಿ ಅಕೌಂಟ್ಸ್ ನೋಡಿಕೊಳ್ಳಲು ಸಮರ್ಥ ಅಭ್ಯರ್ಥಿಯೊಬ್ಬರು ಬೇಕಾಗಿದ್ದಾರೆ. ಅರ್ಹತೆ: ಅಕೌಂಟ್ಸ್ ಹಾಗೂ ಟ್ಯಾಲಿ ಗೊತ್ತಿರಬೇಕು. ಎರಡು ವರ್ಷ ಕೆಲಸ ಮಾಡಿರುವ ಅನುಭವ ಇರಬೇಕು. ಯುವಕರಿಗೆ ಮಾತ್ರ ಅವಕಾಶ. ಸ್ಥಳೀಯರಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿಗೆ 9880771927 ಸಂಪರ್ಕಿಸಬಹುದು.
ಕೊಡವೂರು: ನಿವೃತ್ತ ಶಿಕ್ಷಕಿ ಮಲ್ಲಿಕಾ ದೇವಿಯವರಿಗೆ ಸನ್ಮಾನ
ಕೊಡವೂರು: ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಯುವಕ ಸಂಘ,ಶ್ರೀ ದುರ್ಗಾ ಮಹಿಳಾ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಳೆದ 36 ವರ್ಷಗಳಿಂದ ಕೊಡವೂರು ಶಾಲಾ ಶಿಕ್ಷಕಿಯಾಗಿ ಅನುಪಮ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಮಲ್ಲಿಕಾ ದೇವಿಯವರ ಸನ್ಮಾನ ಕಾರ್ಯಕ್ರಮ ಸ್ಥಳೀಯ ವಿಪಶ್ರೀ ಸಭಾಂಗಣದಲ್ಲಿ ನಡೆಯಿತು. ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಶಿಕ್ಷಕರು […]
ಆ್ಯಂಕರ್ ಅನುಶ್ರೀಗೆ ಮತ್ತೆ ಡ್ರಗ್ಸ್ ಕೇಸ್ ಕಂಟಕ: ಚಾರ್ಜ್ ಶೀಟ್ ನಲ್ಲಿ ಗಂಭೀರ ಆರೋಪ ಉಲ್ಲೇಖ
ಮಂಗಳೂರು: ಆ್ಯಂಕರ್ ಕಂ ನಟಿ ಅನುಶ್ರೀ ಮತ್ತೆ ಡ್ರಗ್ಸ್ ಕೇಸ್ ಕಂಟಕ ಎದುರಾಗಿದೆ. ಸಿಸಿಬಿ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ಶೀಟ್ ನಲ್ಲಿ ಅನುಶ್ರೀ ವಿರುದ್ಧ ಗಂಭೀರ ಆರೋಪ ದಾಖಲಾಗಿದೆ. ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಚಾರ್ಜ್ಶೀಟ್ ನಲ್ಲಿ ಆರೋಪಿ ನಂಬರ್ 2 ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಅನುಶ್ರೀ ಡ್ರಗ್ಸ್ ಸೇವನೆ ಮಾತ್ರ ಅಲ್ಲ, ಡ್ರಗ್ ಸಾಗಾಟ ಕೂಡ ಮಾಡುತ್ತಿದ್ದರು. ನಮ್ಮ ರೂಮಿಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. Ecstasy ಮಾತ್ರೆಗಳನ್ನ ತರುತ್ತಿದ್ದಾಗಿ […]