ಆ್ಯಂಕರ್ ಅನುಶ್ರೀಗೆ ಮತ್ತೆ ಡ್ರಗ್ಸ್ ಕೇಸ್ ಕಂಟಕ: ಚಾರ್ಜ್ ಶೀಟ್ ನಲ್ಲಿ ಗಂಭೀರ ಆರೋಪ ಉಲ್ಲೇಖ

ಮಂಗಳೂರು: ಆ್ಯಂಕರ್ ಕಂ ನಟಿ ಅನುಶ್ರೀ ಮತ್ತೆ ಡ್ರಗ್ಸ್ ಕೇಸ್ ಕಂಟಕ ಎದುರಾಗಿದೆ. ಸಿಸಿಬಿ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್​​ಶೀಟ್ ನಲ್ಲಿ ಅನುಶ್ರೀ ವಿರುದ್ಧ ಗಂಭೀರ ಆರೋಪ ದಾಖಲಾಗಿದೆ.

ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಚಾರ್ಜ್​​ಶೀಟ್ ನಲ್ಲಿ ಆರೋಪಿ ನಂಬರ್ 2 ಕಿಶೋರ್​ ಅಮನ್ ಶೆಟ್ಟಿ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಅನುಶ್ರೀ ಡ್ರಗ್ಸ್​ ಸೇವನೆ ಮಾತ್ರ ಅಲ್ಲ, ಡ್ರಗ್ ಸಾಗಾಟ ಕೂಡ ಮಾಡುತ್ತಿದ್ದರು. ನಮ್ಮ ರೂಮಿಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. Ecstasy ಮಾತ್ರೆಗಳನ್ನ ತರುತ್ತಿದ್ದಾಗಿ ಕಿಶೋರ್ ಶೆಟ್ಟಿ ಹೇಳಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ಚಾರ್ಜ್​​ಶೀಟ್​ನಲ್ಲಿ ತನಿಖಾಧಿಕಾರಿಗಳು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.