ಮದುವೆಗೆ ಒಪ್ಪಿದ್ದರೂ ಆತ ಮಗಳಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ: ಪ್ರಿಯಕರನಿಂದ ಹತ್ಯೆಯಾದ ಸೌಮಶ್ರೀ ತಾಯಿಯ ಅಳಲು
ಉಡುಪಿ: ಈಚೆಗೆ ಉಡುಪಿ ಹೊರವಲಯದ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಿಯಕರನೊಬ್ಬ ತನ್ನ ಪ್ರಿಯತಮೆಗೆ ಚೂರಿಯಿಂದ ಇರಿದು ಕೊಲೆಗೈದು ಬಳಿಕ ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡು ಘಟನೆಗೆ ಸಂಬಂಧಿಸಿದಂತೆ ಪ್ರಿಯತಮೆ ಸೌಮ್ಯಶ್ರೀಯ ಮನೆಯವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಸಂದೇಶ್ ಕುಲಾಲ್ (ಪ್ರಿಯಕರ) ಮತ್ತು ನನ್ನ ಮಗಳು ಪ್ರೀತಿಸುತ್ತಿದ್ದ ವಿಚಾರ ನಮಗೆ ಮೂರು ನಾಲ್ಕು ವರ್ಷಗಳ ಹಿಂದೆ ಗೊತ್ತಾಯಿತು. ಹಾಗಾಗಿ ನನ್ನ ಮಗಳನ್ನು ಮದುವೆ ಆಗುವಂತೆ ಐದಾರು ಬಾರಿ ಅವರ ಮನೆಗೆ ಹೋಗಿ ಕೇಳಿಕೊಂಡಿದ್ದೆವು. ಆದರೆ ಆತ […]
ಉಡುಪಿ: ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಆಧಾರ್ ಕಡ್ಡಾಯ
ಉಡುಪಿ: ಕೇರಳ ಹಾಗೂ ಮಹಾರಾಷ್ಟ್ರದ ಭಕ್ತರನ್ನು ಗುರುತಿಸುವ ಸಲುವಾಗಿ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಸ್ಪಿಬಿ ಮಹೇಶ್ ತಿಳಿಸಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಭಕ್ತರು ಕಡ್ಡಾಯವಾಗಿ 72 ಗಂಟೆ ಮೀರದ ಕೋವಿಡ್ ಆರ್ಟಿಪಿಸಿಆರ್ ನೆಗೆಟಿವ್ ವರದಿ ಸಲ್ಲಿಸಬೇಕು. ವರದಿ ಇಲ್ಲದ ಭಕ್ತರಿಗೆ ಸ್ಥಳದಲ್ಲೇ ಕೋವಿಡ್ ಪರೀಕ್ಷೆಗೊಳಪಡಿಸಿ, 7 ದಿನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುವುದು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮತ್ತೊಮ್ಮೆ […]
ಯಕ್ಷರಂಗದಲ್ಲಿ ಹುಮ್ಮಸ್ಸಿನಿಂದ ಗೆಜ್ಜೆ ಕಟ್ಟಿ ಕುಣಿಯುತ್ತಿರುವ ಮೂಡಬಿದ್ರೆಯ ಯುವ ಪ್ರತಿಭೆ “ಆದರ್ಶ್”
ಉಡುಪಿXPRESS:ಯಕ್ಷ ಸಿರಿ ಯಕ್ಷಗಾನ ಕ್ಷೇತ್ರ ಹಲವಾರು ಹೊಸ ಯುವ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ಕರಾವಳಿಯ ಜನಪ್ರಿಯ ತೆಂಕು ತಿಟ್ಟಿನಲ್ಲಿ ನವ ಪ್ರತಿಭೆಗಳು ಭರವಸೆ ಮೂಡಿಸುತ್ತಿದ್ದಾರೆ. ಅಂತಹ ಭರವಸೆಯ ಪ್ರತಿಭೆಗಳಲ್ಲಿ ಮೂಡಬಿದ್ರೆಯ ಆದರ್ಶ ವಿ. ಆಚಾರ್ಯ ಕೂಡ ಯಕ್ಷರಂಗದಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಯುವ ಪ್ರತಿಭೆ. ಮಂಗಳೂರಿನಲ್ಲಿ ಪ್ರಸ್ತುತ ಇಂಟಿರಿಯರ್ ಪದವಿ ಓದುತ್ತಿರುವ ಆದರ್ಶ್ ಗೆ ಬಾಲ್ಯದಿಂದಲೂ ಯಕ್ಷಗಾನ ಕುರಿತು ಅಪಾರ ಆಸಕ್ತಿ ಇತ್ತು. ಮನೆಯಲ್ಲಿಯೂ ಯಕ್ಷಗಾನದ ಕುರಿತ ಚರ್ಚೆ ಮತ್ತು ವಾತಾವರಣವಿರುವುದರಿಂದ ಇವರಲ್ಲಿಯೂ ಕ್ಷೇತ್ರದ ಕುರಿತ ಆಸಕ್ತಿ […]
ವಿದ್ಯುತ್ ಬಿಲ್ ನಲ್ಲಿ ಅಕ್ರಮ: ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ ಸಚಿವ ಸುನಿಲ್ ಕುಮಾರ್
ಬೆಂಗಳೂರು: ನಕಲಿ ವಿದ್ಯುತ್ ಬಿಲ್ ಸೃಷ್ಟಿಸಿ ಬೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ ಆರೋಪದಡಿ ಮೂವರು ಸಿಬ್ಬಂದಿಯನ್ನು ಇಂಧನ ಸಚಿವ ಸುನಿಲ್ ಕುಮಾರ್ ಅವರು ಅಮಾನತುಗೊಳಿಸಿದ್ದಾರೆ. ಅಮಾನತುಗೊಂಡ ಸಿಬ್ಬಂದಿಯನ್ನು ಮುಳಬಾಗಿಲು ಉಪವಿಭಾಗದ ಕಿರಿಯ ಸಹಾಯಕ ಮೆಹಬೂಬ್ ಪಾಷ, ಕಿರಿಯ ಸಹಾಯಕಿ ಗಾಯತ್ರಮ್ಮ ಹಾಗೂ ಕಿರಿಯ ಸಹಾಯಕಿ ಸುಜಾತಮ್ಮ ಎಂದು ಗುರುತಿಸಲಾಗಿದೆ. ಇವರು ಗ್ರಾಹಕರಿಗೆ ವಿದ್ಯುತ್ ಬಿಲ್ ವಿತರಿಸುವ ವೇಳೆಯಲ್ಲಿ ಕೆಲವು ಬಿಲ್ ಗಳನ್ನು ಮಾರ್ಪಾಟುಗೊಳಿಸಿ, ಅದರ ಮೊತ್ತವನ್ನು ಕಡಿಮೆಗೊಳಿಸುತ್ತಿದ್ದರು. ಆ ಮೂಲಕ ಬೆಸ್ಕಾಂಗೆ ಬರಬೇಕಿದ್ದ ಆದಾಯದಲ್ಲಿ ನಷ್ಟ […]
ಬಿಜೆಪಿ ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾ: ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾಗಿ ಗಂಗಾಧರ ಈದು ನೇಮಕ
ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾದ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರನ್ನಾಗಿ ಗಂಗಾಧರ ಗೌಡ ಈದು ಅವರನ್ನು ನೇಮಕ ಮಾಡಲಾಗಿದೆ. ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ನಿತ್ಯಾನಂದ ನಾಯ್ಕ್ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.