ಕೋಟ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ
ಕೋಟ: ನಿನ್ನೆ ನಾಪತ್ತೆಯಾಗಿದ್ದ ವಕ್ವಾಡಿ ನವನಗರ ನಿವಾಸಿ ರವಿಚಂದ್ರ ಕುಲಾಲ್ (33) ಶವ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. ಕುಂದಾಪುರ ತಾಲೂಕಿನ ವಕ್ವಾಡಿ-ಕಾಳಾವರ ರಸ್ತೆ ಸಮೀಪದ ಸರಕಾರಿ ಹಾಡಿಯಲ್ಲಿ ರವಿಚಂದ್ರನ ಶವ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ತನ್ನ ಆಟೋ ರಿಕ್ಷಾವನ್ನು ವಕ್ವಾಡಿ ನವನಗರ ತಿರುವಿನಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದನು. ರವಿಚಂದ್ರ ಹಾಕಿದ್ದ ವಾಟ್ಸಾಪ್ ಸ್ಟೇಟಸ್ ನಿಂದ ಅನುಮಾನಗೊಂಡ ಸ್ನೇಹಿತರು ಹಾಗೂ ಮನೆಯವರು ಸತತವಾಗಿ ಕರೆ ಮಾಡಿದ್ದರು. ಆದರೆ, ರವಿಚಂದ್ರ ಯಾವುದೇ ಕರೆ ಸ್ವೀಕರಿಸಿರಲಿಲ್ಲ. ಕೊನೆಗೆ ಸ್ನೇಹಿತರು, ಮನೆಯವರು […]
ಮಂಗಳೂರು: ಆತ್ಮಹತ್ಯೆ ಮಾಡಿಕೊಂಡ ದಂಪತಿಗಳ ಕೋವಿಡ್ ವರದಿ ನೆಗೆಟಿವ್
ಮಂಗಳೂರು: ಕೋವಿಡ್ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದ ಉದ್ಯಮಿ ರಮೇಶ್ ಹಾಗೂ ಗುಣವತಿ ಸುವರ್ಣ ದಂಪತಿಗಳ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಕೋವಿಡ್ ಬಂದಿದೆ ಎಂಬ ಆತಂಕದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಮರಣೋತ್ತರ ಪರೀಕ್ಷೆಗೂ ಮುನ್ನ ನಡೆಸಿದ ಮೃತದೇಹದ ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ. ಮಂಗಳೂರು ಹೊರವಲಯದ ಕುಳಾಯಿ ರಹಜಾ ಅಪಾರ್ಟ್ಮೆಂಟ್ ನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ‘ಕೋವಿಡ್ ನಿಂದಾಗಿ ಭಯ ಕಾಡುತ್ತಿದೆ. ಜೀವನವೇ ಬೇಡ […]
ಕ್ರಾಂತಿಕಾರಿ ಹೋರಾಟಗಾರರ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ: ವಿಜಯ ಕೊಡವೂರು
ಉಡುಪಿ: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಮತ್ತು ಉಡುಪಿ ಚಾನೆಲ್ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಯಿತು. 8, 9, 10ನೇ ತರಗತಿ ಮಕ್ಕಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಚಂದ್ರಶೇಖರ್ ಅಜಾದ್ ವಿಷಯದಲ್ಲಿ ಹಾಗೂ ಪಿಯುಸಿ-ಪದವಿ ವಿದ್ಯಾರ್ಥಿಗಳಿಗೆ ವೀರ ಸಾವರ್ಕರ್ ಮತ್ತು ಡಾ. ಹೆಡ್ಗೆವಾರ್ ಜೀವನ ಚರಿತ್ರೆಯ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ಸಹಿತ ವಿವಿಧ ಕಡೆಗಳ ವಿದ್ಯಾರ್ಥಿಗಳು ಭಾಷಣ […]
ಕಟಪಾಡಿ ಗ್ರಾಪಂನಿಂದ ಎರೆಹುಳು ಗೊಬ್ಬರ ಘಟಕ ಸ್ಥಾಪನೆಗೆ ಚಾಲನೆ
ಕಟಪಾಡಿ: ಕಟಪಾಡಿ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನದಡಿ ‘ಎರೆಹುಳು ಗೊಬ್ಬರ ತೊಟ್ಟಿ ಘಟಕ’ ರಚನೆಗೆ ಚಾಲನೆ ನೀಡಲಾಯಿತು. ನಾಗೇಶ ಕಾಮತ್ ಕಟಪಾಡಿ ಅವರ ಜಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್. ಆಚಾರ್ಯ, ಉಪಾಧ್ಯಕ್ಷ ಎ.ಆರ್. ಅಬುಬಕ್ಕರ್, ಪಿಡಿಒ ಮಮತಾ ವೈ ಶೆಟ್ಟಿ, ಸದಸ್ಯರುಗಳಾದ ಪ್ರಭಾ ಬಿ. ಶೆಟ್ಟಿ, ಸುಗುಣ ಪೂಜಾರ್ತಿ, ವೀಣಾ ಎನ್, ಆಗ್ನೆಸ್ ಡೇಸಾ, ವಿಜಯ್ ಮಾಬಿಯನ್, ಪ್ರಭಾಕರ್ ಪಾಲನ್, […]
ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಜವಳಿ ಮಳಿಗೆಯ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ ನಿಧನ
ಉದ್ಯಾವರ: ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಜವಳಿ ಮಳಿಗೆ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ (70) ಅವರು ಉದ್ಯಾವರ ಗುಡ್ಡೆಯಂಗಡಿಯ ಸ್ವಗೃಹದಲ್ಲಿ ಮಂಗಳವಾರ ನಿಧನ ಹೊಂದಿದರು ಮೃತರು ಉದ್ಯಾವರ ಜಯಲಕ್ಷ್ಮಿ ಜವಳಿ ಮಳಿಗೆ ಮಾಲೀಕರಾದ ಪುತ್ರರಾದ ವೀರೇಂದ್ರ ಹೆಗ್ಡೆ ಮತ್ತು ರವೀಂದ್ರ ಹೆಗ್ಡೆ, ಪುತ್ರಿ ವೀಣಾ ಹೆಗ್ಡೆ ಅವರನ್ನು ಅಗಲಿದ್ದಾರೆ. ಸುಮಾರು ಐದು ದಶಕಗಳ ಹಿಂದೆ ಗೀತಾ ಹಾಗೂ ಅವರ ಪತಿ ಎನ್. ವಾಸುದೇವ ಹೆಗ್ಡೆ ಸೇರಿ ಉದ್ಯಾವರದಲ್ಲಿ ಸಹಿತ ಜಯಲಕ್ಷ್ಮೀ ವಸ್ತ್ರ ಮಳಿಗೆ ಸ್ಥಾಪಿಸಿದ್ದರು. ಇದೀಗ ಅದು […]