ಟ್ರೋಲ್ ಮೊಡೆಲ್‌ಗಳಾಗದೆ ರೋಲ್ ಮೊಡೆಲ್‌ಗಳಾಗಿ: ಕೇಮಾರು ಸ್ವಾಮೀಜಿ

ಬೆಳ್ಮಣ್: ಯುವ ಜನಾಂಗ ಟ್ರೋಲ್ ಮೊಡೆಲ್‌ಗಳಾಗದೆ ರೋಲ್ ಮೋಡೆಲ್‌ಗಳಾಗಬೇಕು. ಸಂಸ್ಕಾರಯುತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಬೇಕೆಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಸಚ್ಚೇರಿಪೇಟೆಯ ಸಮರ್ಪಿತಾ ಬಳಗ ಗಾಂದಡ್ಪು ಇದರ ಆಶ್ರಯದಲ್ಲಿ ಜೆಸಿಐ ಮುಂಡ್ಕೂರು ಭಾರ್ಗವ ಹಾಗೂ ಸೇವಾ ಭಾರತಿ ಮುಂಡ್ಕೂರು ಇವರ ಸಹಯೋಗದಲ್ಲಿ ವೆನ್‌ಲಾಕ್ ಆಸ್ಪತ್ರೆಯ ರಕ್ತಪೂರಣ ಕೇಂದ್ರದ ನೇತೃತ್ವದಲ್ಲಿ ಸಚ್ಚೇರಿಪೇಟೆಯ ಪೊಸ್ರಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಯುವಕರು […]

ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್: ಭಾರತದ ಗೆಲುವಿಗೆ ಮಳೆ ಅಡ್ಡಿ

ನಾಟಿಂಗ್‌ಹ್ಯಾಂ: ಭಾರತ ಹಾಗೂ ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಐದನೇ ದಿನದ ಆಟಕ್ಕೆ ಮಳೆ ಅಡ್ಡಿಯಾಗಿದೆ. ಭಾರತದ ಗೆಲುವಿಗೆ 157 ರನ್‌ ಗಳಿಸಬೇಕಿದ್ದು, ಮಳೆಯು ಭಾರತದ ಗೆಲುವಿಗೆ ಪ್ರಮುಖ ಅಡಚಣೆಯಾಗಿದೆ. ಶನಿವಾರ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 303 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 209 ರನ್ ಗುರಿ ನೀಡಿತು. ಬ್ಯಾಟಿಂಗ್‌ ಆರಂಭಿಸಿದ ಭಾರತ ಒಂದು ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿದೆ. 26 ರನ್‌ ಗಳಿಸಿದ್ದ ಕೆ.ಎಲ್‌.ರಾಹುಲ್‌ ಅವರು ಸ್ಟುವರ್ಟ್‌ ಬ್ರಾಡ್‌ […]

ಕಂಬಳ ಕ್ಷೇತ್ರದ ಸಾಧಕ; ಕೋಣಗಳ ಮಾಲೀಕ ರಸ್ತೆ ಅಪಘಾತದಲ್ಲಿ ಸಾವು

ಮಂಗಳೂರು: ಮಂಗಳೂರಿನ ಹೊರವಲಯದ ಗುರುಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಂಬಳ ಕ್ಷೇತ್ರದ ಸಾಧಕ, ಹಿರಿಯರಾದ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ (75) ಅವರು ಮೃತಪಟ್ಟಿದ್ದಾರೆ. ಭಾನುವರ ತನ್ನ ಸ್ಕೂಟರ್ ನಲ್ಲಿ ಗುರುಪುರದ ಕಡೆ ತೆರಳುತ್ತಿದ್ದ ವೇಳೆ ಕಾರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಗುರುಪುರ ಕೆದುಬರೀ ಗುರವಪ್ಪ ಪೂಜಾರಿ ಅವರು ಕಂಬಳ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅಲ್ಲದೇ ಕಂಬಳದ ಕೋಣಗಳ ಯಜಮಾನರ ಪೈಕಿ ಬಹಳ ಹಿರಿಯರಾಗಿದ್ದರು. ಕಳೆದ ಹಲವು ವರ್ಷಗಳಿಂದ ಅಡ್ಡ […]

ಯುವ ಜನತೆಯ ಹಾಟೆಸ್ಟ್ ಬೈಕ್ ಇದು! ಯಮಹಾ ಎಫ್‍‌ಜೆಡ್-ಎಕ್ಸ್ ರೆಟ್ರೋ ಡಿಸೈನ್ ಬೈಕ್, ಏನಿದರ ಸ್ಪೆಷಾಲಿಟಿ?

ಬಹು ನಿರೀಕ್ಷಿತ ಎಫ್‍‌ಜೆಡ್-ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಹೊಸ ಎಫ್‍‌ಜೆಡ್-ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಯಮಹಾ ಎಫ್‌ಜೆಡ್-ಎಕ್ಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ವೈ-ಕನೆಕ್ಟ್ ಅಪ್ಲಿಕೇಶನ್‌ನಂತಹ ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಹೊಸ ಯಮಹಾ  ಎಫ್‍‍ಝಡ್-ಎಕ್ಸ್ 2 ಮಾದರಿಗಳಲ್ಲಿ ಲಭ್ಯವಿದ್ದು, ಈ ಹೊಸ ಯಮಹಾ ಎಫ್‍ಜೆಡ್-ಎಕ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೊರೂಂ ಪ್ರಕಾರ ರೂ.1.16 ಲಕ್ಷಗಳಾಗಿದೆ. ಇದರ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.1,16,800 ಗಳಾದರೆ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ ರೂಪಾಂತರ […]

ಉಡುಪಿ: ಐದಕ್ಕಿಂತ ಹೆಚ್ಚು ಕೊರೊನಾ ಸೋಂಕು ಕಂಡುಬರುವ ಪ್ರದೇಶ ಸೀಲ್ ಡೌನ್; ಸುನಿಲ್ ಕುಮಾರ್

ಉಡುಪಿ: ಐದು ಅಥವಾ ಅದಕ್ಕಿಂತ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಂಡುಬರುವ ಪ್ರದೇಶವನ್ನು ಮೈಕ್ರೋ ಕಂಟೋನ್ಮೆಂಟ್ ಜೋನ್ (ಸೀಲ್ ಡೌನ್) ಮಾಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಹೇಳಿದರು. ಉಡುಪಿ ಜಿಲ್ಲೆಯ ಕೋವಿಡ್ ನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪದ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದರು. ಸಾಧ್ಯವಾದಷ್ಟು ಕೋವಿಡ್ ಪೋಸಿಟಿವ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ […]