ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್: ಪ್ರವೇಶಾತಿ ಪ್ರಕ್ರಿಯೆ ಆರಂಭ
ಉಡುಪಿ: ವೃತ್ತಿಪರ ಕೋರ್ಸ್ ಗಳಿಗೆ ಹೆಸರುವಾಸಿಯಾಗಿರುವ “ಉಡುಪಿ ಶಿಕ್ಷಣ ಸಮೂಹ ಸಂಸ್ಥೆ”ಯಲ್ಲಿ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನೆ, ಇಂಡಿಯನ್ ನರ್ಸಿಂಗ್ ಕೌನ್ಸಿಲ್, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಹಾಗೂ ಕರ್ನಾಟಕ ಸರಕಾರದ ಮಾನ್ಯತೆಯೊಂದಿಗೆ ಉಡುಪಿ ಶಿಕ್ಷಣ ಸಮೂಹ ಸಂಸ್ಥೆಗಳು ಹೋಟೆಲ್ ಮ್ಯಾನೇಜ್ಮೆಂಟ್, ಫುಡ್ ಟೆಕ್ನಾಲಜಿ, ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೊರೇಶನ್, ಬಿ.ಬಿ.ಎ, ಬಿ. ಕಾಂ, ಬಿ. ಸಿ. ಎ, […]
ಕಾರ್ಕಳ ಮಂಜುನಾಥ ಪೈ ಕಾಲೇಜಿನಲ್ಲಿ ನೂತನ ಲ್ಯಾಬ್ ಉದ್ಘಾಟನೆ- ಕಂಪ್ಯೂಟರ್ ಹಸ್ತಾಂತರ
ಕಾರ್ಕಳ: ಶಿಕ್ಷಣ ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮುಂದಿನ ಔದ್ಯೋಗಿಕ ಉನ್ನತಿಗೆ ವಿವಿಧ ಕೌಶಲ್ಯದೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್, ರೊ. ರಾಜಾರಾಮ್ ಭಟ್ ಹೇಳಿದರು. ಅವರು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ, ಕಾಗ್ನಿಝೆಂಟ್ ಕಂಪನಿ ಹಾಗೂ ರೋಟರಿ ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆಯಾದ ‘ಹೆಲ್ಪ್ ಎಡ್ಯುಕೇಟ್’ ಕಾರ್ಯಕ್ರಮದಡಿಯಲ್ಲಿ ಕಾಲೇಜಿಗೆ ಕಾಗ್ನಿಝೆಂಟ್ ರವರು ಉಚಿತವಾಗಿ ನೀಡಿದ 20 ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು. ರೋಟರಿ ಸಂಸ್ಥೆಯು ರಾಜ್ಯಾದ್ಯಂತ […]
2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ; ಯಾರನ್ನೂ ಸಿಎಂ ಸ್ಥಾನಕ್ಕೆ ಶಿಫಾರಸು ಮಾಡಲ್ಲ: ಬಿಎಸ್ ವೈ
ಬೆಂಗಳೂರು: ಹೈಕಮಾಂಡ್ ಹೇಳುವವರೆಗೂ ಸಿಎಂ ಸ್ಥಾನದಲ್ಲಿರುತ್ತೇನೆ. ಹೈಕಮಾಂಡ್ ಬೇಡವೆಂದಾಗ ರಾಜೀನಾಮೆ ನೀಡುತ್ತೇನೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟಿಸುತ್ತೇನೆ. ಆದರೆ ಮುಂದೆ ಯಾರನ್ನು ಸಿಎಂ ಮಾಡಬೇಕೆಂದು ಸಲಹೆ ನೀಡಲ್ಲ; ಯಾರ ಹೆಸರನ್ನೂ ಸಿಎಂ ಸ್ಥಾನಕ್ಕೆ ಶಿಫಾರಸು ಮಾಡುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈಕಮಾಂಡ್ನಿಂದ ನನಗೆ ಇನ್ನೂ ಅಧಿಕೃತ ಸೂಚನೆ ಬಂದಿಲ್ಲ. 25ರ ಬಳಿಕ ಬರುವ ಸಂದೇಶಕ್ಕಾಗಿ ನಾನು ಕಾಯುತ್ತಿದ್ದೇನೆ. 2 ತಿಂಗಳ ಹಿಂದೆಯೇ […]
ಉಡುಪಿ: ಉದ್ಯಮಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ಸುಲಿಗೆಗೈದ ಪ್ರಕರಣ; ಮೂವರು ಆರೋಪಿಗಳ ಬಂಧನ
ಉಡುಪಿ: ಜುಲೈ 16ರಂದು ನಗರದಲ್ಲಿ ನಡೆದ ಉದ್ಯಮಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಕಟಪಾಡಿ ಜಂಕ್ಷನ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಂದಳಿಕೆಯ ಸಂತೋಷ್ ಬೋವಿ, ಕಾರ್ಕಳ ನಿಟ್ಟೆಯ ಅನಿಲ್ ಪೂಜಾರಿ ಹಾಗೂ ಸಾಸ್ತಾನ ಕೊಡಿಯ ಮಣಿ ಯಾನೆ ಮಣಿಕಂಠ ಖಾರ್ವಿ ಎಂದು ಗುರುತಿಸಲಾಗಿದೆ. ಮಣಿಕಂಠ ಖಾರ್ವಿ ಪ್ರಕರಣದ ಹಿನ್ನೆಲೆ: ಈ ಮೂವರು ಅಪಹರಣಕಾರರು ಜುಲೈ 16ರಂದು ನಗರದಲ್ಲಿ ಷೇರು ವ್ಯವಹಾರ ನಡೆಸುತ್ತಿದ್ದ ತುಮಕೂರು ಮೂಲದ ಅಶೋಕ್ […]
ಉದ್ಯಾವರ: ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ಗಗನ್ ಕೋಟ್ಯಾನ್ ಗೆ ಸನ್ಮಾನ
ಉಡುಪಿ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 600 ಅಂಕವನ್ನು ಗಳಿಸಿ ಅಸಮಾನ್ಯ ಸಾಧನೆಗೈದ ಉದ್ಯಾವರ ಪಿತ್ರೋಡಿಯ ಲೀಲಾದರ ಕೋಟ್ಯಾನ್ ಮತ್ತು ಶಶಿಕಲಾ ಅವರ ಸುಪುತ್ರ ಗಗನ್ ಕೋಟ್ಯಾನ್ ಅವರನ್ನು ಬಿಜೆಪಿ ಯುವಮೋರ್ಚಾ ಕಾಪು ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ “ಅನ್ವೇಷಣೆ” ಎಂಬ ಪುಸ್ತಕವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉದ್ಯಾವರ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ […]