ಕರಾವಳಿ ಸ್ಪೆಷಲ್ ಚಗಟೆ ಸೊಪ್ಪಿನ ಪಲ್ಯ ಮಾಡಿ ತಿಂದಿದ್ದೀರಾ? ಮಳೆಗಾಲದ ಬೆಸ್ಟ್ ರೆಸಿಪಿ ಇದು

ಮಳೆಗಾಲದಲ್ಲಿ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಈ ಚಗಟೆ ಸೊಪ್ಪು (ತೋಜಂಕ್ ಸೊಪ್ಪು) ಬೆಳೆಯುತ್ತದೆ. ಈ ಸೊಪ್ಪಿನ ಪಲ್ಯ ಆರೋಗ್ಯಕ್ಕೂ ಒಳ್ಳೇದು. ರುಚಿಗೂ ಅದ್ಬುತ. ಇದು ಮಳೆಗಾಲಕ್ಕೆ ಹೇಳಿ ಮಾಡಿಸಿದ ಪಲ್ಯ ಒಮ್ಮೆ ಟ್ರೈ ಮಾಡಿ ಮಾಡಲು ಬೇಕಾಗುವ ಸಾಮಗ್ರಿಗಳು: ಕೊತಂಬರಿ ಬೀಜ- 2 ಚಮಚ ಜಿರಿಗೆ- 1/2 ಚಮಚ ಬೆಳ್ಳುಳ್ಳಿ- 5 ಎಸಳು ಸಾಸಿವೆ- 1/2 ಚಮಚ ಉದ್ದಿನಬೇಳೆ- 1/2 ಚಮಚ ಕೆಂಪುಮೆಣಸು- 8 ಎಣ್ಣೆ- 4 ಚಮಚ ಕರಿಬೇವು- 8 ಎಲೆ ಚಗಟೆ […]

ಉಡುಪಿ: ಛಿದ್ರಗೊಂಡಿರುವ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ; ಆತ್ಮಹತ್ಯೆ ಶಂಕೆ

ಉಡುಪಿ: ದೊಡ್ಡಣಗುಡ್ಡೆ ಮೂಡುಸಗ್ರಿ ಸಮೀಪದ ರೈಲ್ವೆಹಳಿಯಲ್ಲಿ ಛಿದ್ರಗೊಂಡಿರುವ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾದ ಘಟನೆ ಸೋಮವಾರ ನಡೆದಿದೆ. ರಾತ್ರಿ ವೇಳೆ ಸಂಚರಿಸುವ ಗೂಡ್ಸ್ ರೈಲಿಗೆ ತಲೆಯೊಡ್ಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ವಾರಸುದಾರರು ಮಣಿಪಾಲ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಮೃತದೇಹವನ್ನು ಶವಗಾರಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ ಒಳಕಾಡು. ಜೀವನ್ ಇಂದ್ರಾಳಿ, ಸಿದ್ಧಾರ್ಥ […]

ಕೆಂಜಿರುವೆ ಹನಿ ನೀರು ಕುಡಿಯುವ ಅದ್ಬುತ ವಿಡಿಯೋ ನೋಡಿ:ಒಂದೊಂದು ಹನಿಯಲ್ಲೂ ಜೀವವಿದೆ!

ಉಡುಪಿXPRESS ಪರಿಸರ ವಿಶೇಷ ಕೆಂಜಿರುವೆಗಳು ಅತ್ಯಂತ ಸಹನಶೀಲ ಜೀವಿಗಳು. ‘ಒಗ್ಗಟ್ಟಿನಲ್ಲಿ ಬಲವಿದೆ. ತಾಳ್ಮೆಯಲ್ಲಿ ಒಲವಿದೆ’ ಎನ್ನುವ ಇವುಗಳದ್ದು ಗುಂಪುಗಾರಿಕೆಯ ಬದುಕು. ಕೆಂಜಿರುವೆಗಳ ವೈಜ್ಞಾನಿಕ ಹೆಸರು ಇಕೋಫಿಲ ಸೈರಿಗ್ಡೀನ. ತಮ್ಮ ಕುಡಿಮೀಸೆಗಳಿಂದ ಗೂಡು ಕಟ್ಟುವ ಈ ಇರುವೆಯೊಂದು ನೀರು ಹೇಗೆ ಕುಡಿಯುತ್ತದೆ ಎಂದು ಈ ವಿಡಿಯೋದಲ್ಲಿ ನೀವೆ ಒಮ್ಮೆ ನೋಡಿ. ಮುತ್ತಿನಂತೆ ಕಾಣುವ ಹನಿಯಲ್ಲಿ ತನಗೆಷ್ಟು ಬೇಕೋ ಅಷ್ಟನ್ನೇ ಹೀರಿ ಕುಡಿಯುವ ಈ ಇರುವೆ ಮನುಷ್ಯನಿಗೆ ಪಾಠ. ಅಗತ್ಯವಿಲ್ಲದಿದ್ದರೂ ನೀರನ್ನು ಎಷ್ಟು ಬೇಕು ಅಷ್ಟನ್ನೇ ನಾವು ಬಳಸದೇ ಚೆಲ್ಲಿ […]

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬೇಡಿಕೆ?.: ಇಬ್ಬರು‌ ಮುಖಂಡರ ಉಚ್ಚಾಟನೆಗೂ ಪಟ್ಟು.!

ನವದೆಹಲಿ: ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದಾದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ತಮಗೆ ಕೊಡಬೇಕು ಎಂದು ಹಾಲಿ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿಜಯೇಂದ್ರ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದಂತಹ ವೇಳೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಈ ಬೇಡಿಕೆ ಸಲ್ಲಿಸಿದ್ದರು. ಇದರ ಜತೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಯೋಗೇಶ್ವರ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ […]

ರಾಜ್ಯದಲ್ಲಿ ಇಂದಿನಿಂದ ಎಲ್ಲಾ ರಿಜಿಸ್ಟ್ರಾರ್ ಕಚೇರಿಗಳು ಓಪನ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದಿನಿಂದ ರಾಜ್ಯದ ಎಲ್ಲಾ ರಿಜಿಸ್ಟ್ರಾರ್ (ಉಪನೋಂದಾವಣಾಧಿಕಾರಿಗಳ) ಕಚೇರಿಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಕೊರೊನಾ ನಿಯಮಗಳನ್ನ ಪಾಲಿಸಿ ಜಿಲ್ಲಾ ರಿಜಿಸ್ಟ್ರಾರ್​ ಕಚೇರಿಗಳು ಹಾಗೂ ಸಬ್​ ರಿಜಿಸ್ಟ್ರಾರ್​ ಕಚೇರಿಗಳು ಕಾರ್ಯನಿರ್ವಹಿಸಲು ಸಮ್ಮತಿ ಸೂಚಿಸಲಾಗಿದೆ.