ಕೆಂಜಿರುವೆ ಹನಿ ನೀರು ಕುಡಿಯುವ ಅದ್ಬುತ ವಿಡಿಯೋ ನೋಡಿ:ಒಂದೊಂದು ಹನಿಯಲ್ಲೂ ಜೀವವಿದೆ!

ಉಡುಪಿXPRESS ಪರಿಸರ ವಿಶೇಷ

ಕೆಂಜಿರುವೆಗಳು ಅತ್ಯಂತ ಸಹನಶೀಲ ಜೀವಿಗಳು. ‘ಒಗ್ಗಟ್ಟಿನಲ್ಲಿ ಬಲವಿದೆ. ತಾಳ್ಮೆಯಲ್ಲಿ ಒಲವಿದೆ’ ಎನ್ನುವ ಇವುಗಳದ್ದು ಗುಂಪುಗಾರಿಕೆಯ ಬದುಕು. ಕೆಂಜಿರುವೆಗಳ ವೈಜ್ಞಾನಿಕ ಹೆಸರು ಇಕೋಫಿಲ ಸೈರಿಗ್ಡೀನ. ತಮ್ಮ ಕುಡಿಮೀಸೆಗಳಿಂದ ಗೂಡು ಕಟ್ಟುವ ಈ ಇರುವೆಯೊಂದು ನೀರು ಹೇಗೆ ಕುಡಿಯುತ್ತದೆ ಎಂದು ಈ ವಿಡಿಯೋದಲ್ಲಿ ನೀವೆ ಒಮ್ಮೆ ನೋಡಿ. ಮುತ್ತಿನಂತೆ ಕಾಣುವ ಹನಿಯಲ್ಲಿ ತನಗೆಷ್ಟು ಬೇಕೋ ಅಷ್ಟನ್ನೇ ಹೀರಿ ಕುಡಿಯುವ ಈ ಇರುವೆ ಮನುಷ್ಯನಿಗೆ ಪಾಠ. ಅಗತ್ಯವಿಲ್ಲದಿದ್ದರೂ ನೀರನ್ನು ಎಷ್ಟು ಬೇಕು ಅಷ್ಟನ್ನೇ ನಾವು ಬಳಸದೇ ಚೆಲ್ಲಿ ವ್ಯರ್ಥ ಮಾಡ್ತೇವೆ. ಆದ್ರೆ ಪ್ರಕೃತಿಯಲ್ಲಿರುವ ಒಂದೊಂದು ಜೀವಿಗೂ ನೀರಿನ ಮಹತ್ವ ಗೊತ್ತಿದೆ ಎನ್ನುವ ಅರಿವಾಗಬೇಕಿದ್ದರೆ ಈ ವಿಡಿಯೋ ನೋಡಿ