‘ಹೆಲ್ಪಿಂಗ್ ಫಾರ್ ಪಾಂಡಮೆಮಿಕ್’ ಕುವೈಟ್ ಉದ್ಯೋಗಿಗಳ ಯುವಕರ ತಂಡದಿಂದ ಆಹಾರದ ಕಿಟ್ ವಿತರಣೆ

ಉಡುಪಿ: ‘ಹೆಲ್ಪಿಂಗ್ ಫಾರ್ ಪಾಂಡಮೆಮಿಕ್’ ಎಂಬ ಕುವೈಟ್ ಉದ್ಯೋಗ ಮಾಡುತ್ತಿರುವ ಜಿಲ್ಲೆಯ ಯುವಕರ ತಂಡವೊಂದು ಕೋವಿಡ್ ಲಾಕ್ ಡೌನ್ ನಿಂದಾಗಿ ಆಹಾರ ಸಿಗದೆ ಪರದಾಡುತ್ತಿದ್ದ ನಿರ್ಗತಿಕರ ಹಸಿವನ್ನು ನೀಗಿಸುವ ಕಾರ್ಯ ಮಾಡಿದೆ. ಈ ತಂಡದ ಸದಸ್ಯರು ಸ್ಥಳೀಯ ಯುವಕರ ಸಹಕಾರದೊಂದಿಗೆ ಬಸ್ ಸ್ಟ್ಯಾಂಡ್ ಮತ್ತು ರಸ್ತೆ ಬದಿಗಳಲ್ಲಿ ಮಲಗಿರುವ ನಿರ್ಗತಿಕರಿಗೆ, ಸೆಕ್ಯೂರಿಟಿ ಗಾರ್ಡ್ ಗಳಿಗೆ, ಟ್ರಕ್ ಚಾಲಕರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡಿದರು. ಹೆಲ್ಪಿಂಗ್ ಫಾರ್ ಪಾಂಡಮೆಮಿಕ್ ಸದಸ್ಯರಾದ ಧನಂಜಯ್ ದೇವಾಡಿಗ, ಸುದರ್ಶನ್ ಬಂಗೇರ, ನಿತಿನ್ ಬಂಗೇರ, […]

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮತ್ತಷ್ಟು ಇಳಿಕೆ; ಇಂದಿನ ಕೊರೊನಾ ಪ್ರಕರಣಗಳ ವಿವರ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಇಂದು (ಜೂನ್ 7) 394 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 207, ಕುಂದಾಪುರ ತಾಲೂಕಿನಲ್ಲಿ 110, ಕಾರ್ಕಳ ತಾಲೂಕಿನಲ್ಲಿ‌ 70 ಹಾಗೂ ಹೊರ ಜಿಲ್ಲೆಯ 7 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 4085 ಇಳಿದಿದೆ. ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಕುಂದಾಪುರ ತಾಲೂಕಿನ 85 ವರ್ಷದ ವೃದ್ಧೆ ಹಾಗೂ 61 ವರ್ಷದ ವ್ಯಕ್ತಿ ಸೋಂಕಿನಿಂದ […]

ಜೂನ್ 21ರಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ: 80 ಕೋಟಿ ಮಂದಿಗೆ ನವೆಂಬರ್‌ವರೆಗೆ ಉಚಿತ ರೇಷನ್; ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಜೂನ್ 21ರಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ರಾಜ್ಯ ಸರ್ಕಾರಗಳಿಗೆ ಲಸಿಕಾಕರಣಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಕಿಲ್ಲ. ದೇಶದ ಎಲ್ಲ ಜನರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆಯನ್ನು ನೀಡಲಿದೆ. ಉಚಿತ ಲಸಿಕೆ ಬೇಡ ಎಂದವರಿಗೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಸಾಮರ್ಥ್ಯ ಇರುವವರಿಗಾಗಿ ಖಾಸಗಿ ಆಸ್ಪತ್ರೆಗಳಿಗೂ ಶೇ.25 ಲಸಿಕೆಗಳನ್ನು ಒದಗಿಸಲಾಗುತ್ತದೆ. ಖಾಸಗಿ ಆಸ್ಪತ್ರೆಯವರು ಗರಿಷ್ಠ 150 ರೂ. ಸೇವಾ […]

ಐಪಿಎಲ್ 14ನೇ ಆವೃತ್ತಿ: ಉಳಿದಿರುವ ಪಂದ್ಯಗಳ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್

ನವದೆಹಲಿ: ಐಪಿಎಲ್​​ -2021ರ ಮುಂದುವರಿದ ಪಂದ್ಯಗಳು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಇಂದು ತಿಳಿಸಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್ ಪಂದ್ಯಾವಳಿಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ಮುಂದೂಡಿತ್ತು. ಆ ಬಳಿಕ ಮೇ 29ರಂದು ನಡೆದ ಸಭೆಯಲ್ಲಿ ಯುಎಇನಲ್ಲಿ ಪಂದ್ಯ ಆಯೋಜನೆ ಮಾಡಲು ಬಿಸಿಸಿಐ ತೀರ್ಮಾನಿಸಿತ್ತು. […]

ಉಡುಪಿ: ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೋವಿಡ್ ನಿಂದ ನಿಧನ

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ಬನವಾಸಿ ಅವರು ಕೋವಿಡ್‌ ಸೋಂಕಿನಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು. ಮೂಲತಃ ಉತ್ತರ ಕನ್ನಡ ಜಿಲ್ಲೆ ಬನವಾಸಿ ಮೂಲದ ಸೋಮಶೇಖರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. 2020ರ ನ. 24ರಂದು ಅವರು ಉಡುಪಿ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. ಪಡುಬಿದ್ರಿ ಬೀಚ್ ಗೆ ಬ್ಲೂ ಫ್ಲಾಗ್ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿಸುವಲ್ಲಿ ಶ್ರಮಿಸಿದರು. ಇಲಾಖೆ ಸೇರುವ […]