ಉಡುಪಿ: ಸೀಲ್ ಡೌನ್ ಮಾಡಲಾಗುವ ಗ್ರಾಪಂ ವ್ಯಾಪ್ತಿಯಲ್ಲಿ ಕೆಎಂಎಫ್ ಹಾಲಿನ ಬೂತ್, ಅನುಮತಿ‌ ನೀಡಿರುವ ಮದುವೆ ನಡೆಸಲು ಅವಕಾಶ

ಉಡುಪಿ: ನಾಳೆಯಿಂದ (ಜೂನ್ 2) ಸೀಲ್ ಡೌನ್ ಮಾಡಲಾಗುವ ಜಿಲ್ಲೆಯ 35 ಗ್ರಾಮ ಪಂಚಾಯತ್ ಗಳಲ್ಲಿ ಕೆಎಂಎಫ್ ಹಾಲಿನ ಬೂತುಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ಜಿ.‌ ಜಗದೀಶ್ ಆದೇಶ ಹೊರಡಿಸಿದ್ದಾರೆ. ಹಾಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸೀಮಿತ ಅವಧಿಗೆ ಹಾಲಿನ ಸಂಗ್ರಹಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅನುಮತಿ ನೀಡಿರುವ ವಿವಾಹ ಸಮಾರಂಭವನ್ನು ನಡೆಸಲು ಅವಕಾಶವಿದೆ. ಅಗತ್ಯ ತುರ್ತು ವೈದ್ಯಕೀಯ ಸೇವೆಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಹಾಗೂ […]

ಉಡುಪಿ: ನಾಳೆಯಿಂದ 35 ಗ್ರಾಪಂಗಳು ಸೀಲ್ ಡೌನ್; ಅಗತ್ಯ ವಸ್ತುಗಳ ಖರೀದಿಗೂ ಅವಕಾಶವಿಲ್ಲ

ಉಡುಪಿ: ನಾಳೆಯಿಂದ (ಜೂನ್ 2) ಐದು ದಿನಗಳ ಕಾಲ ಉಡುಪಿ ಜಿಲ್ಲೆಯ 35 ಗ್ರಾಪಂಗಳು ಸಂಪೂರ್ಣ ಸೀಲ್ ಡೌನ್ ಆಗಲಿದ್ದು, ಮುಂದಿನ ಐದು ದಿನಗಳ ಕಾಲ ಈ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯ ವಸ್ತು ಖರೀದಿಗೂ ಕೂಡ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ವಿಡಿಯೋ ಹೇಳಿಕೆಯ ಮೂಲಕ ಮಾಹಿತಿ ನೀಡಿದ ಅವರು, ಕೇವಲ ಹಾಲು, ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದ್ದಾರೆ. ಐವತ್ತಕ್ಕೂ ಹೆಚ್ಚು ಪಾಸಿಟಿವ್ ಇರುವ ಗ್ರಾಪಂಗಳಲ್ಲಿ ನೋಡಿಕೊಳ್ಳಲು ಅಗತ್ಯ […]

ಜೂನ್ 7ರ ಬಳಿಕ ರಾಜ್ಯದಲ್ಲಿ ಲಾಕ್ ಡೌನ್ ಇರುತ್ತೋ.?, ಇಲ್ಲವೋ.?: ತಜ್ಞರು ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸಿನ ವಿವರ ಹೀಗಿದೆ.!

ಬೆಂಗಳೂರು: ಕೋವಿಡ್‌ ದೃಢಪಡುವ ಪ್ರಮಾಣ ಶೇ 5ಕ್ಕಿಂತ ಕೆಳಗೆ ಬರುವರೆಗೆ ಮತ್ತು ಮರಣ ಪ್ರಮಾಣ ಶೇ. 1ಕ್ಕಿಂತ ಕೆಳಗೆ ಇಳಿಯುವವರೆಗೆ ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರಿಸಬೇಕು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೋವಿಡ್‌ ದೃಢ ಪ್ರಮಾಣ ಸೋಮವಾರ (ಮೇ 31) ಶೇ 13.57ರಷ್ಟು ಹಾಗೂ ಮರಣ ಪ್ರಮಾಣ ಶೇ 2.47 ಇದೆ. ದಿನೇ ದಿನೇ ಕೋವಿಡ್‌ ದೃಢ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ  ದಿನನಿತ್ಯದ ಸೋಂಕು ದೃಢ ಪ್ರಮಾಣ 5 […]

ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೊರೆ ಹೋದ ನಟಿ ಜೂಹಿ ಚಾವ್ಲ: ಕಾರಣವೇನು ಗೊತ್ತಾ?

ನವದೆಹಲಿ:5 ಜಿ ತರಂಗಾಂತರಗಳಿಂದ ಮನುಷ್ಯನ ಆರೋಗ್ಯದ ಮೇಲೆಯೂ ಸೇರಿದಂತೆ ಇಡೀ ದೇಶದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆಯೂ ಹಾನಿಯಾಗಲಿದೆ. ಜೀವ ವೈವಿದ್ಯಗಳಿಗೂ 5 ಜಿ ಮಾರಕ ಎನ್ನುವ ಮಾಹಿತಿಗಳು ತಜ್ಞರುಗಳಿಂದ ಕೇಳೀ ಬರುತ್ತಿರುವ ಬೆನ್ನಲ್ಲೇ ಇದೀಗ ರೇಡಿಯೊಫ್ರೀಕ್ವೆನ್ಸಿ (ಆರ್ ಎಫ್) ವಿಕಿರಣಗಳ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿರುವ ಬಾಲಿವುಡ್ ನಟಿ ಜೂಹಿ ಚಾವ್ಲ ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.  5 ಜಿ ತಂತ್ರಜ್ಞಾನ ಜಾರಿಯಾದಲ್ಲಿ ಅದರಿಂದ ಈಗಿರುವ ವಿಕರಣಗಳಿಗಿಂತ 10-100 ಪಟ್ಟು ಹೆಚ್ಚಿನ ಆರ್ […]

ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೊರೊನಾ ಪಾಸಿಟಿವ್ ರೇಟ್ ಮತ್ತಷ್ಟು ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕಳೆದ 10 ದಿನಗಳಿಂದ ಕೊರೊನಾ ಸೋಂಕು ಇಳಿಮುಖ ಹಾದಿಯಲ್ಲಿ ಸಾಗುತ್ತಿದ್ದು, ಇದರಿಂದ ಜನತೆಯ ಆತಂಕ ಸ್ವಲ್ಪಮಟ್ಟಿಗೆ ದೂರಾಗಿದೆ. ಮೊನ್ನೆ 20 ಸಾವಿರಕ್ಕಿಂತ ಹೆಚ್ಚಿನ ಕೇಸ್ ಪತ್ತೆಯಾಗಿತ್ತು. ಸೋಮವಾರ ಅದು 16,604 ಕ್ಕೆ ತಗ್ಗಿದೆ. ಈ ಮೂಲಕ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಕಡಿಮೆಯಾಗಿವೆ. ಅಲ್ಲದೇ 44,473 ಮಂದಿ ಗುಣಮುಖರಾಗಿದ್ದಾರೆ. ಇನ್ನು ಬೆಂಗಳೂರಿನಲ್ಲೂ 4 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿದ್ದು ಜನರಿಗೆ ಸಮಾಧಾನ ತಂದಿದೆ. ರಾಜ್ಯದಲ್ಲಿ ಇಂದು ಪಾಸಿಟಿವಿಟಿ ದರ 13.57ಕ್ಕೆ ಇಳಿದಿದ್ರೆ, ಮರಣ ಪ್ರಮಾಣ […]