ಅಪರಿಚಿತ ವ್ಯಕ್ತಿ ಕಳುಹಿಸಿದ ಲಿಂಕ್ ಕ್ಲಿಕ್‌ ಮಾಡಿ ₹1 ಲಕ್ಷ ಕಳೆದುಕೊಂಡ ಮಹಿಳೆ

ಬೆಂಗಳೂರು: ಅಪರಿಚಿತ ವ್ಯಕ್ತಿಯಿಂದ ಮೊಬೈಲ್‌ಗೆ ಬಂದಿದ್ದ ಲಿಂಕ್ ಕ್ಲಿಕ್‌ ಮಾಡಿದ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ ₹ 1.02 ಲಕ್ಷ ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಹಣ ಕಳೆದುಕೊಂಡ ಮಹಿಳೆ ಬಳ್ಳಾರಿ ರಸ್ತೆಯ ನಿವಾಸಿಯಾಗಿದ್ದು, ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಗೆ ಕರೆ ಮಾಡಿ ಏಕಾಏಕಿ ಕರೆ ಕಡಿತಗೊಳಿಸಿದ್ದ ವ್ಯಕ್ತಿಯೊಬ್ಬರು, ಸಂದೇಶದ ಮೂಲಕ ಲಿಂಕ್ ಕಳುಹಿಸಿದ್ದರು. ಅದು ಏನಿರಬಹುದೆಂಬ ಕುತೂಹಲದೊಂದಿಗೆ ಮಹಿಳೆ ಲಿಂಕ್ ಮೇಲೆ ಕ್ಲಿಕ್‌ ಮಾಡಿದ್ದರು. ಅದಾದ […]

ಉಡುಪಿ: ಮತ್ತೆ ಏರಿಕೆಕಂಡ ಕೊರೊನಾ; ಇಂದಿನ ಕೊರೊನಾ ಪ್ರಕರಣಗಳ ವಿವರ

ಉಡುಪಿ: ಸೋಮವಾರ ಜಿಲ್ಲೆಯಲ್ಲಿ ಇಳಿಕೆ ಹಾದಿಯಲ್ಲಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಇಂದು (ಜೂನ್ 1) ಮತ್ತೆ ಏರಿಕೆಯಾಗಿದೆ. ಇಂದು 735 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 277, ಕುಂದಾಪುರ ತಾಲೂಕಿನಲ್ಲಿ 201, ಕಾರ್ಕಳ ತಾಲೂಕಿನಲ್ಲಿ‌ 252 ಹಾಗೂ ಹೊರ ಜಿಲ್ಲೆಯ ಐದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5205 ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 62 ವರ್ಷದ ವೃದ್ಧೆ, ಕುಂದಾಪುರ ತಾಲೂಕಿನ […]

12ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷದಂತೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಚ್ಛಿಸಿದರೆ, ಸಿಬಿಎಸ್‌ಇ ಅವರಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸುತ್ತದೆ. ಆದರೆ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಪರೀಕ್ಷೆ ನಡೆಸುವುದು ಸಾಧ್ಯವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಶಾಲೆಗಳು, ಪ್ರಾಂಶುಪಾಲರು, […]

ಉಡುಪಿಯ ವ್ಯಕ್ತಿಗೆ ಕರೆ ಮಾಡಿ ಟೋಪಿ ಹಾಕಲು ನೋಡಿದ! ಆಮೇಲೇನಾಯ್ತು ನೋಡಿ

ಉಡುಪಿ: ಕರಾವಳಿಯಲ್ಲಿ ಫ್ರಾಡ್ ಕರೆಗಳ(ಮೋಸ ಮಾಡುವ ಕರೆಗಳು) ಹಾವಳಿ ಜಾಸ್ತಿಯಾಗುತ್ತಿದೆ. ಸಿಮ್ ವೆರಿಫಿಕೇಶನ್ ನೆಪದಲ್ಲಿ ಕರೆ ಮಾಡಿ ಮಾಹಿತಿ ಕೇಳುವ ವ್ಯಕ್ತಿಗಳು ಕ್ರಮೇಣ ನಮ್ಮ ಮಾಹಿತಿ ಕಸಿದು ದುಡ್ಡು ಕೀಳುತ್ತಾರೆ. ಮಂಗಳೂರಿನಲ್ಲಿ ಇಂತಹ ಪ್ರಕರಣಗಳನ್ನು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯಲ್ಲೂ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾರ್ಕಳದ ಚಿತ್ತರಂಜನ್ ನಕ್ರೆ ಅವರಿಗೆ ಅನಾಮಧೇಯ ಕರೆಯೊಂದು ಬಂದಿದ್ದು ಆ ಕಾಲ್ ರೆಕಾರ್ಡಿಂಗ್ ಅನ್ನು ಅವರು ಉಡುಪಿXPRESS.COM  ಗೆ ನೀಡಿದ್ದಾರೆ. ಕರೆಯಲ್ಲಿ ಹಿಂದಿಯಲ್ಲಿ ವ್ಯಕ್ತಿ ಮಾತಾಡಿದ್ದಾರೆ. ಫ್ರಾಡ್ ಕರೆಗಳ […]

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಮದ್ಯ ಡೆಲಿವರಿ ಸೇವೆ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕು ತೀವ್ರತೆ ಕಡಿಮೆಯಾಗುತ್ತಿದೆ. ಈ ಮಧ್ಯೆ ದೆಹಲಿ ಸರ್ಕಾರ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದೆ. ದೆಹಲಿ ಅಬಕಾರಿ (ತಿದ್ದುಪಡಿ) ಕಾಯ್ದೆ 2021 ಅನ್ನು ಪ್ರಕಟಿಸಲಾಗಿದ್ದು, ಅದರ ಪ್ರಕಾರ ಮದ್ಯ ಪೂರೈಕೆಗೆ ಅನುಮತಿ ಪಡೆದವರು ಗ್ರಾಹಕರ ಮನೆಗೆ ಮದ್ಯ ತಲುಪಿಸಬಹುದು. ಗ್ರಾಹಕರು ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಮದ್ಯ ಬುಕ್ ಮಾಡಬಹುದು ಎಂದು ತಿಳಿಸಿದೆ. ಅನುಮತಿ ಪಡೆದ ಪೂರೈಕೆದಾರರು ಮನೆ ಮಾತ್ರವಲ್ಲದೆ, ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್, ಟೆರೇಸ್‌ಗಳಲ್ಲಿ […]